ಪುಟ:ಬಾಳ ನಿಯಮ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂಬಾಲಕನಿಗೆ ೧೧ ತಕ್ಷಣ ಎಲ್ಲರ ಬಿಗುಮಾನವೂ ತೇಲಿಹೋಗಿ, ಸರಸ ವಾತಾವರಣ ಏರ್ಪಟ್ಟಿತು. ಮರುಕ್ಷಣ ಅವನು ಕೈಯನ್ನು ಚಾಚಿದಾಗ, ಮೇಲ್ಮೂಟ್ ಕಿಡ್ ಭದ್ರವಾಗಿ ಅಪ್ಪಿ ಹಿಡಿದುಕೊಂಡನು. ಅವರಿಬ್ಬರು ಹಿಂದೆಂದೂ ಭೇಟಿಯಾಗಿರಲಿಲ್ಲ ; ಆದರೆ ಪರಸ್ಪರ ವಿಷಯವನ್ನು ಕೇಳಿ ತಿಳಿದಿದ್ದರು. ಆ ಗುರುತಿನ ಮೇಲೆ ಇಬ್ಬರೂ ಕಂಡುಹಿಡಿಯಲು ಕಷ್ಟವಾಗಲಿಲ್ಲ.

  • ಸಭೆಯ ಪರಿಚಯವನ್ನು ಬಹುಬೇಗ ಮಾಡಿಕೊಡಲಾಯಿತು. ತನ್ನ ಕಾರ್ಯೊದ್ದೇಶವನ್ನು ಹೇಳಲು ಅವನು ಕಾದಿದ್ದನೋ ಏನೋ, ಅದಕ್ಕಿಂತ ಮುಂಚೆಯೆ ಬಲಾತ್ಕಾರದಿಂದ ಅವನಿಗೂ ಕೂಡ ಪಂಚ್ ಪಾನೀಯವನ್ನು ನೀಡಲಾಯಿತು.

ಬುಟ್ಟಿಗಳನ್ನು ಹೊತ್ತ ಸೈಜ್‌ಗಾಡಿಯೊಂದು ಹೊರಟು ಎಷ್ಟು ಹೊತ್ತಾ ಯಿತು ? ಅದರಲ್ಲಿ ಮೂರು ಮನುಷ್ಯರೂ ಎಂಟು ನಾಯಿಗಳೂ ಇದ್ದಿರಬೇಕು ....”ಎಂದು ಅವನು ಕೇಳಿದನು. “ಎರಡು ದಿನಗಳಾದರೂ ಆಗಿರಬೇಕು. ನೀನು, ಅದರ ಹಿಂದೆ ಹೊರಟಿ ಯೇನು?” “ಹೌದು, ಅದು ನನ್ನ ಪ್ರಾಣಿಗಳ ತಂಡ, ಆ ಅಯೋಗ್ಯ ಆಸಾಮಿಗಳನ್ನು ನನ್ನ ಕಣ್ಣೆದುರಿನಲ್ಲೇ ಹರಿದುಹಾಕುತ್ತೇನೆ. ಆಗಲೇ ಎರಡು ದಿನಗಳ ಪ್ರಯಾಣ ಆಗಿದೆ. ಇನ್ನೇನು ಸವಿಾಪಿಸಿದ್ದೇನೆ. ಇನ್ನೊಂದು ಓಟದಲ್ಲಿ ಅವರನ್ನು ಹಿಡಿಯಬಲ್ಲೆ....” - “ ಅವರೇನಾದರೂ ಸಿಟ್ಟಿನಿಂದ ಮೇಲೆ ಬಿದ್ದರೆ ? ” ಎಂದು ಬೆಲ್ಡನ್ ಹಗುರವಾಗಿ ಪ್ರಶ್ನಿಸಿದನು. ಕೇವಲ ಸಂಭಾಷಣೆಯನ್ನು ಮುಂದುವರಿಸಲು ಆಡಿದ ಮಾತದು; ಏಕೆಂದರೆ ಮೇಲ್ಮೂಟ್ ಕಿಡ್ ಮಾಂಸವನ್ನು ಕರಿಯು ವುದರಲ್ಲೇ ಮಗ್ನನಾಗಿದ್ದನು. ಹೊಸಬನು ಉತ್ತರಕೊಡದಿದ್ದರೂ, ಸಾಂಕೇತಿಕವಾಗಿ ಪಿಸ್ತೂಲನ್ನು ಕುಟ್ಟಿದನು.

  • ಡಾಸನ್ ಬಿಟ್ಟಾಗ ಎಷ್ಟು ಹೊತ್ತಾಗಿತ್ತು ? ” “ ಹನ್ನೆರಡು ಘಂಟೆ ? “ ಅಂದರೆ, ಹೋದ ರಾತ್ರಿ ? ” * ಇಲ್ಲ : ಈ ದಿನ” ಸಭೆಯಲ್ಲಿ ಆಶ್ಚರ್ಯ ಸೂಚಕವಾದಂಥ ಗುಜುಗುಜು ಮಾತು