ಪುಟ:ಬಾಳ ನಿಯಮ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಬಾಳ ನಿಯಮ ಹರಡಿತು. ಆಗ ಸುಮಾರು ಮಧ್ಯರಾತ್ರಿಯಿರಬಹುದು. ಹಾಗಾದರೆ ವಕ್ರ ವಕ್ರವಾದ ಎಪ್ಪತ್ತೈದು ಮೈಲಿಗಳಷ್ಟು ನದೀ ಮಾರ್ಗವನ್ನು ಕೇವಲ ಹನ್ನೆರಡು ಘಂಟೆಗಳಲ್ಲಿ ಮುಗಿಸಿರಬೇಕು. ಅದೂ ಒಂದೇ ಸಮನೆ ಓಡುತ್ತಾ ! ಇದೇನು ಪರಿಹಾಸ್ಯ ಮಾಡುವಂಥ ಸಮಾಚಾರವಲ್ಲ. ಕುಡಿತದ ಅಮಲಿನಲ್ಲಿ ಬಹುಬೇಗ ವ್ಯಕ್ತಿಗೆ ಸಂಬಂಧಪಟ್ಟ ಮಾತುಕಥೆ ಕಡಿಮೆಯಾಗತೊಡಗಿತು. ಆದರೂ ತಮ್ಮ ತಮ್ಮ ಚಿಕ್ಕ ವಯಸ್ಸಿನಲ್ಲಿ ಓಡಿದ ದಾರಿಗಳನ್ನು ಜ್ಞಾಪಿಸಿಕೊಳ್ಳುವಂತಾಯಿತು. ಹೊಸಬನಾದರೂ ಯುವಕ. ಒರಟೊರಟಾದ ಆಹಾರವನ್ನು ತಿನ್ನಲು ಆರಂಭಿಸಿದನು. ಆಗ ಕಿಡ್ ಗಮನ ವಿಟ್ಟು ಅವನ ಮುಖಭಾವವನ್ನು ಅರಿಯಲು ಪ್ರಯತ್ನಿಸಿದನು. ಹೆಚ್ಚು ಹೊತ್ತು ಬೇಕಾಗಲಿಲ್ಲ. ಹೊಸಬನ ದಿಟ್ಟತನವನೂ ಸತ್ಯಶೀಲತೆಯನ್ನೂ ಮೆಚ್ಚಿದನು. ಆತನು ಯುವಕನಾಗಿದ್ದರೂ ವಿಪರೀತ ಕಷ್ಟ, ಸಂಕೋಲೆಗಳಿಗೆ ಸಿಕ್ಕಿರಬೇಕು ; ಇಲ್ಲದಿದ್ದರೆ ಮುಖದಲ್ಲಿನ ನರಗಳು ಎದ್ದು ಕಾಣಲು ಕಾರಣ ವೇನು ? ಸಂಭಾಷಣೆಯಲ್ಲಿ ಅವನು ಸೌಜನ್ಯದಿಂದ ವರ್ತಿಸಬಹುದು ; ವಿಶ್ರಾಂತಿ. ಪಡೆಯುವಾಗ ಮೃದುವಾಗಿ ಕಾಣಬಹುದು; ಅವನ ಕಣ್ಣುಗಳಲ್ಲಿ ಉತ್ಸಾಹ ವಿಲ್ಲದಿದ್ದರೂ ಏನೋ ಒಂದು ಶಕ್ತಿಯ ಹಿನ್ನೆಲೆಯ ಹೊಳಪಿದೆ. ದುರ್ಗಮ ಸನ್ನಿವೇಶಗಳಲ್ಲಿ ಅದು ಉಕ್ಕಿನ ಝರಿಯಂತೆ ಹರಿಯಬಹುದು. ಕರ್ತವ್ಯದ ಕರೆ ಬಂದಾಗ ಎಲ್ಲವೂ ಹೊರಸೂಸುತ್ತದೆ; ಅಲ್ಲವೇ ? ಅವನ ಬಲವಾದ ದವಡೆಯನ್ನೂ, ಚಪ್ಪಟೆಯ ಕೆನ್ನೆಗಳನ್ನೂ ನೋಡಿದರೆ, ಅವನು ಯಾವುದಕ್ಕೂ ಬಗ್ಗದ ಛಲ ಸಾಧಿಸುವ ಪ್ರವೃತ್ತಿಯವನೆಂದು ತಿಳಿಯಬಹುದು. ಸಿಂಹದ ಗುಣಗಳಿದ್ದರೂ, ಆತನ ಮತ್ತೊಂದು ಸ್ವಭಾವವನ್ನು ಮರೆಯುವಂತಿಲ್ಲ. ಭಾವೋದ್ರೇಕಗೊಂಡರೂ ಹೆಂಗರುಳಿನ ಮೃದು ಸ್ವಭಾವ ಅವನಲ್ಲಿ ಅಡಗಿತ್ತು. ಬೆಲ್ಡನ್ ತನ್ನ ಮದುವೆಯ ಪ್ರಸಂಗವನ್ನು ಹೇಳತೊಡಗಿದ್ದನು.... * ಅಬ್ಬ ! ಸಾಲ್‌ಳನ್ನು ಮದುವೆಯಾಗಬೇಕಾದರೆ ಊಟದ ಕಡೆ ಗಮನವೂ ಇಲ್ಲದೆ ಭೂಮಿಯನ್ನು ಉಳಬೇಕಾಯಿತು. ಮಧ್ಯೆ ಮಧ್ಯೆ ಅವಳನ್ನೇ ನೋಡುತ್ತ ನನ್ನ ಮನಸ್ಪೂ ರಸವತ್ತಾಯಿತು !....” ಎಂದು ಪ್ರಣಯಾಚರಣೆಯನ್ನು ವಿವರಿಸುತ್ತಾ ಬಂದನು. ಅವನಂತೂ ತುಂಬ ಉದ್ರೇಕಗೊಂಡಿದ್ದನು. “ನಿನಗೆ ಮಕ್ಕಳುಂಟೋ ? ಆ ದೇಶದಲ್ಲೇ ನೆಲಸಿದ ಅವರು ನಿನಗಾಗಿ ಕಾಯುತಿದ್ದಾರೆಯೇ ?” ಎಂದು ಹೊಸಬ ಕೇಳಿದನು. “ಇಲ್ಲ, ಇಲ್ಲ ; ಮತ್ತೊಂದು ಜೀವ ಹೊರಬರುವುದಕ್ಕಿಂತ ಮುಂಚೆಯೆ