ಪುಟ:ಬಾಳ ನಿಯಮ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂಬಾಲಕನಿಗೆ ೧೧೭ ಸಾಲ್ ಸತ್ತು ಹೋದಳು ! ಆದ್ದರಿಂದಲೇ ನಾನು ಇಲ್ಲಿರುವುದು....” ಎಂದು ಬೆಲ್ಡನ್ ಏನೋ ಯೋಚನೆಯಲ್ಲಿ ಮಗ್ನನಾಗಿ ಪೈಪ್ ಹೊತ್ತಿಸಿದನು. ಮತ್ತೆ ಪ್ರಶ್ನಿಸಿದನು : “ಏನಯ್ಯಾ, ನಿನ್ನ ವಿಷಯ ಕೇಳಲೇ ಇಲ್ಲ. ನಿನಗೆ ಮದುವೆ ಯಾಗಿದೆ ತಾನೆ ?” ಉತ್ತರ ಬರಲಿಲ್ಲ. ಆದರೆ ಅವನು ಗಡಿಯಾರದ ಪೆಟ್ಟಿಗೆಯನ್ನು ತೆಗೆದು ಕೊಟ್ಟನು. ಬೆಲ್ಡನ್ ತಕ್ಷಣ ಮಣ್ಣಿನ ದೀಪವನ್ನು ಎಳೆದುಕೊಂಡನು. ಅದರ ಬೆಳಕಿನಲ್ಲಿ ಪೆಟ್ಟಿಗೆಯ ಒಳಭಾಗವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದನು. ತನ್ನಲ್ಲಿ ತಾನೇ ಮೆಚ್ಚಿಕೊಂಡು ಲೂಯಿ ಸವಾಯನ ಕೈಗೆ ಕೊಟ್ಟನು. ಲೂಯಿ ಸವಾಯ್ 'ಗಾರ್, ಗಾರ್' ಎಂದು ಒಂದೇ ಸಮನೆ ಕೂಗುತ್ತಾ ಪೆಟ್ಟಿಗೆಯನ್ನು ಪ್ರಿನ್ಸನ ಕೈಗೆ ರವಾನಿಸಿದನು. ಪ್ರಿನ್ಸ್ ಇನ್ನೂ ಯುವಕ ; ಇತರರಂತೆ ಅನು ಭವದಿಂದ ಮಾತನಾಡಲು ಅವನಿಗೆ ಸಾಧ್ಯವಿಲ್ಲ. ಹೃದಯಾಂತರಾಳದ ಭಾವ ಗಳನ್ನು ತಡೆದುಕೊಳ್ಳಲು ಅಶಕ್ತನಾಗಿದ್ದನು. ಆದ್ದರಿಂದಲೇ ಅವನ ಕೈಗಳು ನಡುಗಿದವು ; ಕಣ್ಣು ಗಳು ವಿಶಿಷ್ಟವಾದ ಕನಿಕರವನ್ನು ತೋರ್ಪಡಿಸಿದವು. ಒಬ್ಬರಿಂದ ಮತ್ತೊಬ್ಬರ ಜಡ್ಡುಗಟ್ಟಿದ ಕೈಗಳಿಗೆ ವೇಗವಾಗಿ ಒಯ್ಯಲ್ಪಡುತಿದ್ದ ಆ ಪೆಟ್ಟಿಗೆಯಲ್ಲಿ ಏನೋ ಆಕರ್ಷಣೆಯಿರಬೇಕು. ನಿಜ; ಅಲ್ಲಿ ಚಿತ್ರವೊಂದನ್ನು ಅಂಟಿಸಲಾಗಿತ್ತು. ಅದೂ ಹೆಂಗಸಿನ ಚಿತ್ರ! ಆ ಹೆಂಗಸಿನ ಎದೆಯ ಮೇಲೆ ಸಣ್ಣ ಮಗ, ನಲಿದಾಡುತಿತ್ತು ! ಅಲೆದಾಡುವ ತಂಡದವರಿಗೆ ಚಿತ್ರವಂತೂ ಅಪೇಕ್ಷಣೀಯವಾಗಿತ್ತು. ಸರದಿ ಕಾಯುತಿದ್ದ ಇತರರಿಗೆ ಆಶ್ಚರ್ಯವಾಯಿತು. ಏನಿರಬಹುದೆಂದು ಯೋಚಿಸುತ್ತಾ ಕುತೂಹಲಿಗಳಾಗಿದ್ದರು. ಒಬ್ಬೊಬ್ಬರಾಗಿ ನೋಡುತ್ತ ಬಂದರು. ನೋಡಿದವರು ಮೌನಿಗಳಾಗಿ ಹಿನ್ನೆನಪುಗಳನ್ನು ಮೆಲುಕುಹಾಕಿದರು....ಕಾಮಡಾಮರದ ಹಿಂಸೆಯನ್ನು ಅವರು ಎದುರಿಸಬಲ್ಲರು; ಕ್ರೂರ ಆಟಗಳನ್ನಾಡಿ ಸಾಯಲೂಬಹುದು; ಅಥವಾ ಪ್ರವಾಹದ ಭರದಲ್ಲಿ ಒಂದೇ ಏಟಿಗೆ ನಾವನ್ನ ಪ್ರಬಹುದು. ಯಾವುದಕ್ಕೂ ತಮಗೆ ಹೆದರಿಕೆಯಿಲ್ಲ. ಆದರೆ ಚಿತ್ರಗತವಾದ ಆ ನವೀನ ಸ್ತ್ರೀ ಮತ್ತು ಶಿಶುವಿನ ರೂಪವನ್ನು ಕಂಡಾಕ್ಷಣ ಅವರೆಲ್ಲರೂ ಸ್ತ್ರೀಯರೂ ಎಳೆಯ ಮಕ್ಕಳೂ ಆದರು ! ಹಾಗಿತ್ತು ಚಿತ್ರದ ಪ್ರಭಾವ. * ತನ್ನ ನಿಧಿಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತ ಹೊಸಬನು, “ನಾನು ಆ ಮಗುವನ್ನು ನೋಡಿಯೇ ಇಲ್ಲ. ಅದು ಗಂಡು ಮಗು, ಎರಡು ವರ್ಷ ವಯಸ್ಸು ಎಂದು ಅವಳೇ ಹೇಳಿಕಳಿಸಿದ್ದಾಳೆ....” ಎಂದು ಮುಚ್ಚಲು ಮನಸ್ಸಿಲ್ಲದೆ ಆ