ಪುಟ:ಬಾಳ ನಿಯಮ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೮ ಬಾಳ ನಿಯಮ ಚಿತ್ರವನ್ನೇ ಕ್ಷಣಕಾಲ ದಿಟ್ಟಿಸಿ ನೋಡಿದನು. ಕಣ್ಣೀರು ಧಾರೆಯನ್ನು ತಡೆ ಹಿಡಿದು ನಿಲ್ಲಿಸಿದ್ದನು. ಆದರೆ ಪೆಟ್ಟಿಗೆಯನ್ನು ಮುಚ್ಚುವ ಹೊತ್ತಿಗೆ ಸಂಯಮ ದಿಂದಿರಲು ಸಾಧ್ಯವಾಗಲಿಲ್ಲ. ಸೂಕ್ಷವನ್ನರಿತ ಮೇಲ್ಮೂಟ್ ಕಿಡ್ ಅವನನ್ನು ಪಕ್ಕಕ್ಕೆ ಕರೆದು ಕೊಂಡು ಹೋದನು. ಜಾಗವಿಲ್ಲದಿದ್ದರೂ ಇಕ್ಕಟ್ಟಿನ ನೆಲೆಯನ್ನೇ ಸರಿಪಡಿಸಿ ಅವನು ಮಲಗುವಂತೆ ಏರ್ಪಾಟು ಮಾಡಿದನು. “ ಬರಾಬರಿ ನಾಲ್ಕು ಘಂಟೆಗೆ ನನ್ನನ್ನು ಕೂಗಿ ಎಬ್ಬಿಸಬೇಕು. ಇದನ್ನು ಮಾತ್ರ ಮರೆಯಕೂಡದು....” ಎಂದು ಅವನು ಕಡೆಯ ಮಾತುಗಳನ್ನು ಆಡಿದನು, ಮರುಕ್ಷಣ ತನ್ನ ಆಯಾಸವನ್ನು ಪರಿಹರಿಸಿಕೊಳ್ಳಲು ಗಾಢ ನಿದ್ರೆಯಲ್ಲಿ ಮುಳುಗಿದನು. ಶ್ವಾಸ ಜೋರಾಗಿ ಎಳೆಯುತಿತ್ತು. “ ದೇವರಾಣೆಗೂ ಇವನು ಹೆಚ್ಚಿನ ಮನುಷ್ಯ ! ನಾಯಿಗಳೊಡನೆ ಎಪ್ಪತ್ತೈದು ಮೈಲಿಗಳು ಪ್ರಯಾಣಮಾಡಿರುವ ಮನುಷ್ಯನಿಗೆ ಮೂರು ಘಂಟೆ ಗಳ ನಿದ್ರೆ ಸಾಕೆಂದರೆ ಅರ್ಥವೇನು ? ಅದೂ ನಿದ್ದೆಯಾದ ಮೇಲೆ ಮತ್ತೆ ಓಡುವುದಂತೆ. ಕಿಡ್, ಇವನು ಯಾರು ? ” ಎಂದು ಪ್ರಿನ್ಸ್ ವ್ಯಾಖ್ಯಾನ ಮಾಡುತ್ತ ಪ್ರಶ್ನಿಸಿದನು. “ ಜಾಕ್ ವೆಸ್ಟನ್ಡೇಲ್, ಮೂರು ವರ್ಷಗಳಿಂದಲೂ ಹೀಗೆಯೆ ತಿರುಗಾಡುತಿದ್ದಾನೆ. ಯಾವ ಪುರುಷಾರ್ಥವನ್ನು ಸಾಧಿಸುವುದಕ್ಕೋ ತಿಳಿಯದು. ಅಂತೂ ಕುದುರೆಯಂತೆ ದುಡಿಯುವ ಮನುಷ್ಯನೆಂದು ಹೆಸರುಪಡೆದಿದ್ದಾನೆ. ಅವನ ಭಾಗಕ್ಕೆ ದುರದೃಷ್ಟವೇ ಜಾಸ್ತಿ. ಅವನ ಬಗ್ಗೆ ನನಗೆ ಏನೂ ಗೊತ್ತಿರ ಲಿಲ್ಲ. ಆದರೆ ಸಿತ್ಚಾಗ್ಗೆ ಇವನ ವಿಷಯ ಹೇಳುತಿದ್ದ.....”

  • ಸೊಗಸಾದ ಯುವತಿಯನ್ನು ಹೆಂಡತಿಯಾಗುಳ್ಳ ಈ ಮನುಷ್ಯ ಇಂಥ ಹಾಳುಕೊಂಪೆಯಲ್ಲಿ ಹೇಗೆ ಕಾಲಕಳೆಯುತ್ತಾನೋ ಆಶ್ಚರ್ಯ ...”

“ಮೊಂಡುತನದ ಛಾತಿಯೇ ಅವನು ತೊಂದರೆಪಡಲು ಕಾರಣ. ಎರಡು ಬಾರಿ ಪಂದ್ಯದ ಹಣವನ್ನು ದಕ್ಕಿಸಿಕೊಂಡರೂ ಉಳಿಸಿಕೊಳ್ಳದೆ ಹೋದನು.” ಇಲ್ಲಿಯ ತನಕ ನಡೆದುಬಂದ ಸಂಭಾಷಣೆ ಬೀಟಲ್ಸ್ನ ಕೂಗಾಟದಿಂದ ಕಡಿದುಹೋಯಿತು. ಕುಡಿತದ ಅಮಲು ನಿಧಾನವಾಗಿ ಕಡಿಮೆಯಾಗುತಿತ್ತು. ಮತ್ತೆ ಕುಡಿತವಾಯಿತು. ಇನ್ನು ಕೇಳಬೇಕೆ ? ಅದರ ಉಲ್ಲಾಸಾನುಭವದಲ್ಲಿ ಕಷ್ಟ ಕಾರ್ಪಣ್ಯದ ದಿನಗಳು ಬಹುಬೇಗ ಮರೆತುಹೋದವು. ಮೇಲ್ಮೂಟ್ ಕಿಡ್ ಮಾತ್ರ ಮನಸ್ಸನ್ನು ಸಡಿಲಗೊಳಿಸದೆ ಬಿಗಿ ಹಿಡಿದಿದ್ದನು. ಆಗಾಗ