ಪುಟ:ಬಾಳ ನಿಯಮ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೦ ಬಾಳ ನಿಯಮ ಎಲ್ಲರೀತಿಯಲ್ಲೂ ಋಣಮುಕ್ತನಾದ ಪ್ರಾಮಾಣಿಕನೆಂದು ನಿನ್ನನ್ನು ನನ್ನೆದುರಿಗೆ ಅವನೇ ಹೊಗಳಿದ್ದನು. ಆ ಮಾತುಗಳಲ್ಲಿ ನನಗೆ ನಂಬಿಕೆಯುಂಟು. ನಿನ್ನ ಮುಖ ಪರಿಚಯವಿದೆ, ಅಂದಿನಿಂದ ಇಂದಿನವರೆಗೂ ನಿನ್ನಲ್ಲಿ ವಿಶ್ವಾಸವಿಟ್ಟಿದ್ದೇನೆ. ಎಷ್ಟೋ ಸಾರಿ ನೋಡಿದ್ದೇನೆ; ನೀನು ಸುಮ್ಮನೆ ಉಪ್ಪು ನೀರಿನ ಎತ್ತರದ ಪ್ರದೇಶ ಗಳಲ್ಲಿ ಹೊಡೆದಾಡುತ್ತಿದ್ದೀಯೆ. ಆದರೆ ಆ ನಿನ್ನ ಹೆಂಡತಿ ಮತ್ತು” ಎನ್ನು ತ್ರಿ ರುವಂತೆಯೆ ಕಿಡ್ ತನ್ನ ಕೈಗವಸನ್ನು ಬಿಚ್ಚಿ ಅವನಿಗೆ ಕೊಡಲು ಹೊರಟನು. “ಬೇಡ, ಬೇಡ ; ಅದರ ಅವಶ್ಯಕತೆ ನನಗಿಲ್ಲ.” ಅವನ ಕೆನ್ನೆಯ ಮೇಲೆ ಕಣ್ಣೀರು ಹರಿಮ ಘನೀಭೂತವಾಯಿತು. ದೇಹ ಕಂಪಿಸುತಿತ್ತು. ಆದರೂ ಅವನು ಮೇಲ್ಮೂಟ್ ಕಿಡ್ನ ಕೈಯನ್ನು ಭದ್ರವಾಗಿ ಹಿಡಿದಿದ್ದನು. “ಹಾಗಿದ್ದರೆ ನಾಯಿಗಳನ್ನು ಮಾತ್ರ ಬಿಟ್ಟುಕೊಡಬೇಡ ; ಅವುಗಳಲ್ಲಿ ಯಾವುದಾದರೂ ಕೆಳಕ್ಕೆ ಬಿದ್ದರೆ, ತಕ್ಷಣ ಸರಪಣಿಯನ್ನು ಬಿಚ್ಚು, ಅವುಗಳಿಗೆ “ಫೈನ್ ಫಿಂಗರ್'ನಲ್ಲಿ ಆಹಾರ ಕೊಂಡು ತಿನ್ನಿಸಲು ಮರೆಯಬೇಡ. ನಿನ್ನ ಕಾಲುಗಳು ಹೆಚ್ಚು ತೇವವಾಗದಂತೆ ನೋಡಿಕೊ. ಇಪ್ಪತ್ತೈದು ಡಿಗ್ರಿಗಳ ವರೆಗೂ ಪ್ರಯಾಣಮಾಡಬಹುದು ; ಅದಕ್ಕಿಂತ ಕಡಿಮೆಯಾದರೆ ತಕ್ಷಣ ಬೆಂಕಿ ಯನ್ನು ಹೊತ್ತಿಸಿ, ಬೆಚ್ಚಗೆ ಮಾಡಿಕೊಂಡು ಕಾಲುಚೀಲಗಳನ್ನು ಬದಲಾ ಯೇಸು ...” ಎಂದು ಕೊನೆಯದಾಗಿ ಉಪದೇಶಿಸಿ ಅವನನ್ನು ಕಳಿಸಿದನು. ಇನ್ನೂ ಹದಿನೈದು ನಿಮಿಷವಿಲ್ಲ ; ಆಗಲೇ ಸಣ್ಣ ಗಂಟೆಗಳ ಝುಣ ಝುಣ ಕೇಳಿಸಿತು. ಮತ್ತೆ ಯಾರೋ ಬರುತ್ತಿರುವ ಸೂಚನೆಯದು. ನಿಜ ; ಬಾಗಿಲು ತೆರೆಯಿತು. ವಾಯುವ್ಯ ಸರಹದ್ದಿನ ಪೋಲೀಸು ಸವಾರನೊಬ್ಬ ಪ್ರವೇಶಿಸಿದನು. ಅವನ ಹಿಂದೆ ನಾಯಿ ಹೊಡೆಯುವ ಇಬ್ಬರು ಮಿಶ್ರ ಕುಲದವರೂ ಇದ್ದರು. ವೆಸ್ಟನ್ಡೇಲಿನಂತೆ ಇವರೂ ಕೂಡ ಹೆಚ್ಚು ಆಯುಧಗಳನ್ನು ಹೊಂದಿದ್ದರು ; ಮತ್ತು ತುಂಬ ಆಯಾಸಗೊಂಡವರಂತೆ ತೋರಿದರು. ಮಿಶ್ರ ಕುಲದವರು ಎಷ್ಟಾದರೂ ಅಲೆದಾಟಕ್ಕೇ ಹುಟ್ಟಿದವರು ; ಆದ್ದರಿಂದ ಮೇಲುಸಿರನ್ನು ಹಗುರ ವಾಗಿಯೆ ಎಳೆಯುತ್ತಿದ್ದು ಬಚಾಯಿಸಿಕೊಂಡಿದ್ದರು. ಆದರೆ ಪೋಲೀಸು ಯುವಕ ವಿಪರೀತ ಸುಸ್ತಾಗಿದ್ದನು. ಕುಲದ ಗೌರವದಿಂದ ಅವನು ಪೇಚಿನಲ್ಲಿ ಸಿಕ್ಕಿದ್ದನು. ತಮ್ಮ ಮಾರ್ಗವನ್ನೇ ಮುಂದಿಡುತ್ತ, ಹಿಡಿದ ಪಟ್ಟು ಬಿಡದಂಥ ಕುಲ ಅವನದು. ಆದ್ದರಿಂದ ತನ್ನನ್ನು ತಾನೆ ಹಿಡಿದು ನಿಲ್ಲಿಸಿದ್ದನು. ನಿಂತಲ್ಲೇ