ಪುಟ:ಬಾಳ ನಿಯಮ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂಬಾಲಕನಿಗೆ ೧೨೧ ಬೀಳುವ ಸರದಿ ಬರುವ ತನಕ ಸುಳ್ಳು ಮಾದೆಯನ್ನು ತೋರ್ಪಡಿಸ ಬೇಕಾಯಿತು,

  • ವೆಸ್ಟನ್ಡೇಲ್ ಓಡಿದ್ದು ಯಾವಾಗ? ಅವನು ಇಲ್ಲಿ ನಿಂತು ಹೊರಟನು; ಅಲ್ಲವೇ ? ೨೨ "

ಪ್ರಶ್ನೆಯ ಉತ್ತರಾರ್ಧ ಅನವಶ್ಯಕವಾಗಿತ್ತು ; ಏಕೆಂದರೆ ಅದನ್ನು ಮಾರ್ಗದ ಗುರುತುಗಳಿಂದಲೇ ತಿಳಿಯಬಹುದು. ಮೇಲ್ಮಟ್ ಕಿಡ್ ಬೆಲ್ಡನ್ ಕಡೆ ನೋಡಿ ಕಣ್ಣು ಸನ್ನೆ ಮಾಡಿದನು. ಬೆಲ್ಡನ್ ಇಂಗಿತವನ್ನರಿತನು. ಪ್ರಶ್ನೆಗೆ ಉತ್ತರಕೊಡದೆ ಏನನ್ನೋ ಹೇಳಿದನು.

  • ಎಳಯ್ಯ ಮನುಷ್ಯ ; ಸರಿಯಾಗಿ ಮಾತನಾಡು” ಎಂದು ಪೋಲೀಸಿ ನವನು ಎಚ್ಚರಿಸಿದನು.

“ ನೀವು ಬಹಳ ಆತುರದಿಂದ ಬಂದಂತೆ ಕಾಣುತ್ತದೆ. ಈಗಲೇ ಅವನನ್ನು ನೋಡಬೇಕೆ ? ಡಾಸನ್ ಮಾರ್ಗದಲ್ಲಿ ಏನಾದರೂ ತಂಟೆಮಾಡಿ ದ್ವಾನೆಯೇ ? ”

  • * ಮೆಕ್‌ಫ‌ಲ್ಯಾಂಡ್‌ನ ಹ್ಯಾರಿ ಅವರನ್ನು ಅವನು ದಾರಿಗಟ್ಟಿ ಹೊಡೆದು ಸುಲಿಗೆ ಮಾಡಿದ್ದಾನೆ. ಸ್ವಲ್ಪವಲ್ಲ ; ನಲವತ್ತು ಸಾವಿರ ! ಆ ಹಣ ವನ್ನು ಸಿ. ಸಿ. ಸ್ಟೋರಿನಲ್ಲಿ ವಿನಿಮಯಮಾಡಿ, ಸೀಟಲ್ ಮೇಲೆ ಒಂದು ಚೆಕ್ ಪಡೆದಿದ್ದಾನೆ. ಅದರಿಂದ ಹಣ ಅವನಿಗೆ ಸಿಗದಂತೆ ಮಾಡಬೇಕಾದರೆ, ಈಗಲೇ ಅವನನ್ನು ಬೆನ್ನಟ್ಟಿ ಹಿಡಿಯಬೇಕು. ಆ ಕೆಲಸವನ್ನು ನಾವಲ್ಲದೆ ಮತ್ತಾರು ಮಾಡಲು ಸಾಧ್ಯ ?....ಅವನು ಇಲ್ಲಿಂದ ಯಾವಾಗ ಓಟಕಿತ್ಯನು ? ”

ಪ್ರತಿಯೊಬ್ಬರೂ ಆಶ್ಚರ್ಯದಿಂದ ಕೆರಳಿದ್ದರೂ, ಹೊರಕ್ಕೆ ತೋರಿಸದಂತೆ ತಮ್ಮ ತಮ್ಮಲ್ಲಿ ಅದುಮಿಕೊಂಡರು ; ಮೇಲ್ಮೂಟ್ ಕಿಡ್ ಮೊದಲೇ ಸೂಚನೆ ಕೊಟ್ಟಿದ್ದನು. ಮರದಂತೆ ನಿಚ್ಚೇಷ್ಟಿತವಾದ ಮುಖಗಳನ್ನು ಯುವಕ ಸಾಹೇಬ ಎದುರಿಸಬೇಕಾಯಿತು. ಮಾರುಗಾಲು ಹಾಕುತ್ತಾ ಪ್ರಿನ್ನನ ಹತ್ತಿರ ಬಂದು ಪ್ರಶ್ನಿಸಿದನು. ಎಷ್ಟಾದರೂ ಪೋಲೀಸಿನವನು ತಮ್ಮ ದೇಶದವನು ; ಮತ್ತು ಬಿಚ್ಚುನುಡಿಯ ಕಾರ್ಯಾಸಕ್ತನಾಗಿದ್ದಾನೆ. ಅವನನ್ನೇ ದಿಟ್ಟಿಸಿ ನೋಡುವಾಗ ಪ್ರಿನ್ಸ್ನ ಮನಸ್ಸು ಸ್ವಲ್ಪ ಅಳುಕಿತು. ಆದರೂ ನೇರ ಉತ್ತರ ಹೇಳಲು ಮನಸ್ಸು ಬಾರದು. ಆದ್ದರಿಂದ ಪೂರ್ವಾಪರ ಸಂಬಂಧವಿಲ್ಲದಂತೆ ಮಾರ್ಗದ ಸ್ಥಿತಿಗತಿ