ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೨ ಬಾಳ ನಿಯಮ ಗಳನ್ನು ವಿವರಿಸಿದನು. ಅವನ ಉತ್ತರ ಅಷ್ಟು ಸಮರ್ಪಕವಾಗಿರಲಿಲ್ಲ. ಮತ್ತೆ ಪೋಲೀಸಿನವನು ಫಾದರ್ ಡ್ಯೂ ಬೋ ಕಡೆ ನೋಡಿದನು. ಅವನಾದರೂ ನಿಜ ಹೇಳುತ್ತಾನಲ್ಲವೇ ? “ಕಾಲು ಘಂಟಯ ಹಿಂದೆ ಹೊರಟನು. ಆದರೆ ಅವನೂ ಮತ್ತು ಅವನ ನಾಯಿಗಳು ನಾಲ್ಕು ಘಂಟೆಯ ಕಾಲ ವಿಶ್ರಾಂತಿ ಹೊಂದಿದ್ದರಿಂದ, ಸುಂದಿನ ಪ್ರಯಾಣಕ್ಕೆ ಅನುಕೂಲವಾಯಿತು” ಎಂದು ಫಾದರ್ ಹೇಳಿಯೇ ಬಿಟ್ಟನು. * “ಹದಿನೈದು ನಿಮಿಷಗಳಲ್ಲಿ ಚೇತರಿಸಿಕೊಂಡು ಸಿದ್ಧನಾಗುವುದು ; ಅಬ್ಬ!....” ಪಾಪ ; ಪೋಲೀಸಿನವನು ಹಿಂದಕ್ಕೆ ತತ್ತರಿಸಿದನು, ಆಯಾಸದ ಜೊತೆ ಯಲ್ಲಿ ಆಶಾಭಂಗವೂ ಆದದ್ದರಿಂದ ಮೂರ್ಛಹೋದಂತಾಯಿತು. ಡಾಸನ್ನಿನಿಂದ ಹತ್ತು ಘಂಟೆಗಳ ಕಾಲ ಓಡಿದ್ದಾಯಿತು. ಅಷ್ಟರಲ್ಲೇ ನಾಯಿಗಳು ಶಕ್ತಿ ಗುಂದಿ ಅಪ್ರಯೋಜಕವಾಗಿವೆ ಎಂದು ಏನೇನೊ ಗೊಣಗುತ್ತಿದ್ದನು. ಮೇಲ್ಮಟ್ ಕಿಡ್ ಅವನಿಗೂ ಬಲಾತ್ಕಾರಮಾಡಿ ಪಂಚ್ ಪಾನೀಯವನ್ನು ಸುರಿದನು. ಹೊರಕ್ಕೆ ಹೋಗಿ ನಾಯಿ ಹೊಡೆಯುವವ ರನ್ನೂ ಕರೆದನು ; ಬೆಚ್ಚಗಿನ ವಾತಾವರಣದಲ್ಲಿ ವಿಶ್ರಾಂತಿಗಾಗಿ ಅವರು ಹಂಬಲಿ ಸುತ್ತಿದ್ದರು; ಆದರೆ ಸಾಹೇಬನ ಎದುರಿಗೆ ಅವರು ಬೇಡ, ಬೇಡ' ಎಂದು ಬಹು ಕಷ್ಟದಿಂದ ನಟಿಸಿದರು. ಅವರು ಮಾತನಾಡುತಿದ್ದ ಫ್ರೆಂಚ್ ಗ್ರಾಮ್ಮ ಕಿಡ್ಗೂ ಬರುತಿತ್ತು. ಕುತೂಹಲದಿಂದ ಅವರ ಸಂಭಾಷಣೆಯನ್ನು ಹಿಂಬಾಲಿ ಸಿದನು. ನಾಯಿಗಳಿಗೆ ಸಾಕಾಗಿಹೋಗಿದೆ ಎಂದು ಆಣೆಯಿಟ್ಟು ಹೇಳುತಿದ್ದರು. ಇನ್ನೊಂದು ಮೈಲಿಯಲ್ಲಿ ಸಿವಾಶ್ ಮತ್ತು ಬ್ಯಾಬಟೆಯನ್ನು ಗುಂಡಿಟ್ಟು ಕೊಲ್ಲ ಬೇಕಾಗುತ್ತದೆ ; ಉಳಿದವೂ ಕೂಡ ಅದೇ ಪರಿಸ್ಥಿತಿಯಲ್ಲಿದೆ ; ಆದ್ದರಿಂದ ಎಲ್ಲವೂ ವಿಶ್ರಾಂತಿ ಪಡೆಯುವುದು ಉತ್ತಮ ಎಂದು ಅವರ ಸೂಚನೆ ಯಾಗಿತ್ತು. “ನನಗೆ ಐದು ನಾಯಿಗಳನ್ನು ಕೊಡಿ ?” ಎಂದು ಪೋಲೀಸಿನವನು ಮೇಲ್ಮೂಟ್ ಕಿಡ್ನನ್ನು ಕೇಳಿದನು. ಆದರೆ ಕಿಡ್ ತಲೆಯಲ್ಲಾಡಿಸಿದನು. “ಏಕೆ ? ಇಗೋ ಈ ಕಾಗದಗಳು, ಕ್ಯಾಪ್ಟನ್ ಕಾನ್‌ಸ್ಟೆನ್ಟೈನ್