ಪುಟ:ಬಾಳ ನಿಯಮ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂಬಾಲಕನಿಗೆ ೧೨೭ ಲೆಕ್ಕದಲ್ಲಿ ಚೆಕ್ ಬರೆಯಲು ನನಗೆ ಅನುಮತಿಯುಂಟು ; ದುಡ್ಡು ಎಳೆಯಲು ಯಾರನ್ನೂ ಕೇಳಬೇಕಾದ್ದಿಲ್ಲ. ತಗೊಳ್ಳಿ, ಐದು ಸಾವಿರಕ್ಕೆ ಚೆಕ್ ಬರೆಯು ತೇನೆ..... ಮೌನವೇ ವಿರುದ್ದ ಉತ್ತರವನ್ನು ತೋರ್ಪಡಿಸಿತು. “ಹಾಗಾದರೆ ನಾನು ಅವುಗಳಿಗಾಗಿ ರಾಣಿಯ ಹೆಸರಿನಲ್ಲಿ ಅಪ್ರಣೆ' ಮಾಡುತ್ತೇನೆ!” ಯಾವುದನ್ನೂ ನಂಬದವನಂತೆ ಕಿಡ್' ನಸುನಕ್ಕನು. ತುಂಬಿಹೋಗಿದ್ದ ತೋಫ್ ಖಾನೆಯ ಕಡೆ ದೃಷ್ಟಿ ಬೀರಿದನು. ಆಂಗ್ಲೆಯನಾದ ಪೋಲೀಸಿನವನು ತನ್ನ ದುರ್ಬಲತೆಯನ್ನು ಕಂಡುಕೊಂಡನು. ತಕ್ಷಣ ಬಾಗಿಲ ಹಾದಿ ಹಿಡಿದನು. ಆದರೆ ನಾಯಿ ಹೊಡೆಯುವವರು ಇನ್ನು ಒಪ್ಪಿಗೆ ಸೂಚಿಸದೆ ಕುಳಿತಿದ್ದರು. ಅವನನ್ನು ಹಿಂಬಾಲಿಸಲು ಹಿಂಜರಿದರು. ಆಂಗೇಯನಿಗೆ ಕೋಪ ನೆತ್ತಿಗೇರಿತು. ಸುಂಟರ ಗಾಳಿಯಂತೆ ಅವರ ಮೇಲೆ ಬಿದ್ದನು. “ನಾಯಿ ಕುನ್ನಿಗಳು, ಹೆಂಗಸರು !” ಮುಂತಾಗಿ ಏನೇನೊ ಬೈದನು. ಆ ಇಬ್ಬರಲ್ಲಿ ದೊಡ್ಡವನು ತಿರುಗಿ ಬಿದ್ದನು. ಮೇಲೇಳುತ್ತಿದ್ದಂತೆ ಅವನ ಮುಖ ಕೆಂಪೇರಿತು. ಈ ಮುಖಂಡನನ್ನು ಬೆನ್ನಟ್ಟಿ, ಅವನ ಕಾಲು ಕಿತ್ತು ಹಿಮದಲ್ಲಿ ನೆಡುತ್ತೇನೆಂದು ಪ್ರತಿಜ್ಞೆ ಮಾಡಿದನು. ಆಗಲೇ ತನಗೆ ಸಂತೋಷವೆಂದು ನೇರವಾಗಿ ಹೇಳಿಯೇಬಿಟ್ಟನು. ಯುವಕ ಸಾಹೇಬ ದಮ್ಮು ಕಟ್ಟ ತತ್ತರಿಸದೆ ಬಾಗಿಲ ಬಳಿ ಬಂದನು. ಒಳಗಡೆ ಪೊಳ್ಳಾಗಿದ್ದರೂ ಮೇಲೆ ಮಾತ್ರ ನವಚೈತನ್ಯದ ಪ್ರದರ್ಶನ ಮಾಡಿ ದನು. ಅವನ ವಿಷಯ ಎಲ್ಲರಿಗೂ ಗೊತ್ತಾಗಿತ್ತು. ಆದರೂ ಅವನ ಹೆಮ್ಮೆಯ ಪ್ರದರ್ಶನವನ್ನು ಮೆಚ್ಚಿದರು. ಆದರೆ ಮುಖದಲ್ಲಿದ್ದ ದುಃಖದ ಪರೆಯನ್ನು ಮುಚ್ಚಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ. ಮಂಜು ಬೀಳುತಿತ್ತು. ಮೇಲೆ ಕೆಳಗೆ ಹಿಮದಿಂದ ಆವೃತವಾಗಿದ್ದ ನಾಯಿಗಳು ಮೈ ಮುದುರಿಕೊಂಡು ಒದ್ದಾಡುತಿದ್ದವು. ಅವುಗಳನ್ನು ಎದ್ದು ನಿಲ್ಲುವಂತೆ ಮಾಡಲು ಅಸಾಧ್ಯವಾಗಿತ್ತು. ಮುಳ್ಳಿನ ಚಾಟಿಯಿಂದ ಏಟುತಿಂದ ಬಡ ಪ್ರಾಣಿಗಳು ಕುಂಯ್ ಎಂದು ಕೂಗುತ್ತಿದ್ದವು. ಕ್ರೋಧಗೊಂಡಿದ್ದ ನಾಯಿ ನಡೆಸುವವರು ಅಷ್ಟು ಧುರೀಣರಾಗಿದ್ದರು. ಬ್ಯಾಬಟೆ ಮುಂದುಗಡೆಯಿದ್ದ ನಾಯಿ. ಅದಕ್ಕೆ ಕಟ್ಟಿದ್ದ ಸರಪಳಿಯನ್ನು ಕತ್ತರಿಸಲೇಬೇಕು; ಇಲ್ಲದಿದ್ದರೆ ಸೈಜ್ ಗಾಡಿಯನ್ನು ತಹಬಂದಿಗೆ ತರಲು ಸಾಧ್ಯವೇ ಇಲ್ಲ. ಏನು ಮಾಡುವುದು?