ಪುಟ:ಬಾಳ ನಿಯಮ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೮ ಬಾಳ ನಿಯಮ ಅವನಿಗೆ ಎರಡು ಡಾಲರುಗಳನ್ನು ಕೊಡಹೋದನು. ರಿವೆರ ದುಡ್ಡು ಬೇಡ ವೆಂದು ತಲೆಯಲ್ಲಾಡಿಸಿದನು. ವೆರ ಮುಂದೆಬಂದು ಬಲವಂತಮಾಡಿದಾಗ, ಆ ಹುಡುಗ ಹೇಳಿದನು : “ನಾನು ಕ್ರಾಂತಿಗಾಗಿ ಕೆಲಸಮಾಡುತಿದ್ದೇನೆ.” ಆಧುನಿಕ ಕ್ರಾಂತಿಗಳನ್ನು ನಡೆಸಬೇಕಾದರೆ ಹಣ ಬೇಕು ; ಅದಕ್ಕಾಗಿಯೆ ಸಂಚುಕೂಟದವರು ತೊಂದರೆ ಪಡುತ್ತಿದ್ದರು. ಸದಸ್ಯರು ಹೊಟ್ಟೆಗಿಲ್ಲದೆ ದುಡಿಯುತ್ತಿದ್ದರು. ಅತಿ ಹೆಚ್ಚು ಹಗಲಿನ ದಿನ ಅವರಿಗೆ ದೊಡ್ಡದಾಗಿ ಕಾಣಿಸು ತಿರಲಿಲ್ಲ. ಅದರೂ ಕೆಲವು ಸಂದರ್ಭಗಳಲ್ಲಿ ದಿಗಿಲಾಗುತಿತ್ತು ; ಏಕೆಂದರೆ ಕೆಲವೇ ಡಾಲರುಗಳ ಮೇಲೆ ಕ್ರಾಂತಿಯ ಉಳಿವು ಅಳಿವು ನಿಂತಂತೆ ಭಾಸ ವಾಗುತಿತ್ತು. ಒಂದು ನಾರಿಯಂತೂ ಎರಡು ತಿಂಗಳ ಮನೆಯ ಬಾಡಿಗೆ ಯನ್ನು ಕೊಡಲು ಅಸಾಧ್ಯವಾದಾಗ, ಮನೆಯ ಮಾಲೀಕ ಜಾಗಬಿಡಲೇ ಬೇಕೆಂದು ಗಲಾಟೆಯೆಬ್ಬಿಸಿದ. ಆಗ ಸಹಾಯಮಾಡಿದವನು ಫೆಲಿಸಿ ರಿವೆರ ! ಅದೇ ಕಸಗುಡಿಸುವ ಹುಡುಗ ; ಅವನ ಬಡತನದ ಅಗ್ಗದ ಉಡುಪು ಜೀರ್ಣ ವಾಗಿ ಹರಿದುಹೋಗಿತ್ತು, ಅಂಥವನು ಹೊನ್ನಿನ ಅರುವತ್ತು ಡಾಲರುಗಳನ್ನು (ಮೇಸೇತ್ ಬೈಯಳ' ಡೆಸ್ಸಿನ ಮೇಲೆ ತಂದಿಟ್ರನು !.... ಇನ್ನೂ ಎಷ್ಟೋ ವೇಳೆ ಕಷ್ಟ ಪರಂಪರೆ ಬಂದೊದಗಿತ್ತು-ಆತುರದಿಂದ ಟೈಪ್ ಮಾಡಿದ ಮುನ್ನೂರು ಕಾಗದಗಳು ರವಾನೆಯಾಗಿರಲಿಲ್ಲ. ಟಪಾಲಿನ ಖರ್ಚಿಗೆ ಒಂದು ಸೆಂಟೂ ಇರಲಿಲ್ಲ. ಆ ಕಾಗದಗಳು ತಕ್ಷಣ ಹೋಗಬೇಕಾಗಿ ದವು. (ಸಹಾಯಕ್ಕಾಗಿ ಮನವಿ, ಸಂಘಟಿತ ಕೂಲಿಗಾರ ಸಂಘಗಳ ಸಹಾನು ಭೂತಿ, ವರದಿಗಳನ್ನು ಮಾಡುವಲ್ಲಿ ನ್ಯಾಯಕ್ಕೆ ಚ್ಯುತಿಬರದಂತೆ ಸಂಪಾದಕರಲ್ಲಿ ಕೋರಿಕೆ, ಕ್ರಾಂತಿಕಾರರನ್ನು ಸದೆಬಡಿಯಲು ಸಂಯುಕ್ತ ಸಂಸ್ಥಾನದ ನ್ಯಾಯಾ ಲಯಗಳಲ್ಲಿ ನಡೆಯುತ್ತಿರುವ ಸ್ವಚ್ಛಾ ಪ್ರವೃತ್ತಿಗೆ ಧಿಕ್ಕಾರ, ಇತ್ಯಾದಿ) ವೆರಾನ ಕೈಯಲ್ಲಿದ್ದ ಗಡಿಯಾರ ಮಾಯವಾಗಿತ್ತು. ಪಾಪ ; ಅದು ಅವನ ತಂದೆ ಯಿಂದ ಬಂದದ್ದು. ಹಾಗೆಯೆ ಮೇಸೇತ್‌ಬೈಯಳ ಮೂರನೆಯ ಬೆರಳಲ್ಲಿ ಹೊಳೆಯುತಿದ್ದ ಬಂಗಾರದ ಪಟ್ಟಿಯೂ ಹೋಗಿತ್ತು. ಅಷ್ಟಾದರೂ ಕೆಲಸ ಸುಗಮವಾಗಿ ನಡೆಯುವಂತಿದ್ದಿಲ್ಲ. ಎಲ್ಲರೂ ಧೈರ್ಯಗೆಡುವಂತಾಯಿತು. ರಮೋನ್ ಮತ್ತು ಅರೆಲಾನೊ ಬೇಸರದಿಂದ ತಮ್ಮ ಉದ್ದವಾದ ಮಿಾಸೆಗಳನ್ನು ಹಿಡಿದೆಳೆದುಕೊಂಡರು ! ಹೇಗಾದರೂ ಕಾಗದಗಳು ಹೋಗಲೇಬೇಕು ; ಬರಿಯ