ಪುಟ:ಬಾಳ ನಿಯಮ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೨೭ ವೆಲ್ಲ ಅವನಲ್ಲಿ ಅಡಗಿದೆ. ಅವನು ಸಾಮಾನ್ಯ ಕ್ರಾಂತಿಕಾರರಿಗಿಂತಲೂ ವ್ಯತಿ ರಿಕ್ತನಾದವನು. ಸತ್ಯ ಶೀಲ ದೇಶಾಭಿಮಾನಿಗಳಂತೆ ಡಯಾಸ್ ಆಡಳಿತದ ವಿರುದ್ಧ ದಂಗೆಯೇಳುವ ಒಂದೇ ಗುರಿ ಅವನಲ್ಲಿದ್ದಂತೆ ಕಾಣಲಿಲ್ಲ. ಇನ್ನೇನೋ ಇರಬೇಕು ; ಅದೇನೆಂದು ಅವರಿಗೆ ತಿಳಿಯದು. ಆದರೆ ವೆರ ಸಮಯೋಚಿತ ಬುದ್ದಿಯುಳ್ಳವನು. ಫಕ್ಕನೆ ಮುಂದೆ ಬಂದು ಮೌನವನ್ನು ಮುರಿದು ಹುಡುಗ ನನ್ನುದ್ದೇಶಿಸಿ “ಒಳ್ಳೆಯದು ; ಕ್ರಾಂತಿಗಾಗಿ ಕೆಲಸಮಾಡಲು ನಿನಗೆ ಇಷ್ಟವೆಂದು ಹೇಳು ತೀಯೆ. ಕೋಟು ಬಿಚ್ಚು. ಅದನ್ನು ಅಲ್ಲಿ ನೇತುಹಾಕು, ಬಟ್ಟೆ, ಬಕೆಟ್ಟು, ಗಳು ಎಲ್ಲಿವೆಯೆಂದು ತೋರಿಸುತ್ತೇನೆ ; ನನ್ನೊಡನೆ ಬಾ. ನೆಲ ಬಹಳ ಕೊಳ ಕಾಗಿದೆ. ಮೊದಲು ಈ ನೆಲವನ್ನು ತಿಕ್ಕಿ ಇತರ ಕೋಣೆಗಳಿಗೂ ಹೋಗ ಬೇಕು. ಹಾಗೆಯೇ ಸೀಕದಾನಿಗಳನ್ನೂ ಚೊಕ್ಕಟವಾಗಿಡಬೇಕು. ಆಮೇಲೆ ಕಿಟಕಿಗಳಿವೆ....” ಎಂದು ಅನಾದರದಿಂದ ಹೇಳಿದನು. “ಇವೆಲ್ಲವೂ ಕ್ರಾಂತಿಗೋಸ್ಕರವೇ ?” ಎಂದು ಹುಡುಗ ಕೇಳಿದನು. ನೆರ ಉತ್ತರಕೊಟ್ಟನು ; “ಹೌದು ; ಎಲ್ಲವೂ ಕ್ರಾಂತಿಗಾಗಿಯೇ !” ರಿವೆರ ನಿರುತ್ಸಾಹದಿಂದಲೂ ಸಂಶಯದಿಂದಲೂ ಎಲ್ಲರ ಕಡೆ ನೋಡಿ ಮುಂದುವರಿದನು. “ಒಳ್ಳೆಯದು” ಎಂದು ಕೋಟನ್ನು ಬಿಚ್ಚಿಟ್ಟನು. ಮುಂದೆ ಯಾವ ಮಾತೂ ಇಲ್ಲ. ಆಡಿದ ಮಾತಿಗೆ ಬೆಲೆಯುಂಟು ; ಅಷ್ಟೆ. ಪ್ರತಿದಿನವೂ ತಪ್ಪದೆ ಕೆಲಸಕ್ಕೆ ಬಂದನು-ನೆಲ ಗುಡಿಸುವುದು, ತಿಕ್ಕು ವುದು, ಚೊಕ್ಕಟಮಾಡುವುದು. ವ್‌ನಲ್ಲಿದ್ದ ಬೂದಿಯನ್ನು ಹೊರಕ್ಕೆ ಹಾಕಿ ಬೆಂಕಿ ಹೊತ್ತಿಸಿದನು. ಅತಿ ಚುರಕನೆಂದು ಹೆಸರುಪಡೆದ ಕ್ರಾಂತಿಕಾರಿ ಏಳುವುದಕ್ಕಿಂತ ಮುಂಚೆಯೇ ರಿವರ ಎಲ್ಲ ಕೆಲಸವನ್ನು ಪೂರೈಸಿಬಿಟ್ಟನು. “ನಾನು ಇಲ್ಲಿ ಮಲಗಬಹುದೇ” ಎಂದು ಒಮ್ಮೆ ಕೇಳಿದನು. ಅಬ್ಬ ! ತಿಳಿಯಿತು ; ಡಯಾಸನ ಕೈ ಹತ್ತಿರ ಬರುತ್ತಿದೆ ! ಸಂಚುಕೂಟ ದವರ ರೂಮಿನಲ್ಲಿ ಮಲಗುವುದೆಂದರೇನು ? ನಮ್ಮ ಗುಟ್ಟುಗಳನ್ನು ತಿಳಿಯುವು ದಕ್ಕೆ ತಾನೆ ? ಮೆಕ್ಸಿಕೋ ನೆಲದಲ್ಲಿ ಅಡಗಿರುವ ಸಂಗಾತಿಗಳ ಹೆಸರು ಮತ್ತು ಸಂಪೂರ್ಣ ವಿಳಾಸವನ್ನು ತಿಳಿಯಲು ಈ ಉಪಾಯ! ರಿವರ ಕೇಳಿದಂತೆ, ಮಲಗಲು ಅವಕಾಶಕೊಡಲಿಲ್ಲ. ಅದರ ವಿಷಯ ವಾಗಿ ಮತ್ತೆ ಅವನು ಪ್ರಸ್ತಾಪಿಸಲಿಲ್ಲ. ಅವನು ಎಲ್ಲಿ ಮಲಗುತಿದ್ದ, ಹೇಗೆ ತಿನ್ನು ತಿದ್ದ ಮುಂತಾದ ವಿಷಯಗಳು ಕೂಟದವರಿಗೆ ತಿಳಿಯಲಿಲ್ಲ. ಒಮ್ಮೆ ಅರೆಲಾನೊ