ಪುಟ:ಬಾಳ ನಿಯಮ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೩ ಬಾಳ ನಿಯಮ ಕಾಲಾವಕಾಶ ಬೇಕಾಯಿತು ; ಕಾರಣ ಯಾರೂ ಅವನನ್ನು ಪ್ರೀತಿಸುತ್ತಿರಲಿಲ್ಲ. ಮೊದಲ ಭೇಟಿಯಂತೂ ವಿಚಿತ್ರವಾಗಿತ್ತು. ಇದ್ದಕ್ಕಿದ್ದಂತೆ ಅವನು ಒಂದು ದಿನ ಅವರ ಕೋಣೆಗೆ ನುಗ್ಗಿದಾಗ ಕೋಣೆ ತುಂಬ ಜನಸಂದಣಿ ನೆರೆದಿತ್ತು. ಅವನು ಗೂಢಚಾರನಿರಬೇಕೆಂದು ಅವರೆಲ್ಲ ಸಂದೇಹಪಟ್ಟರು. ಡಯೂಸ್‌ನ ರಹಸ್ಯ ಪಡೆಗೆ ಸಹಕರಿಸುವ ಸಲಕರಣೆಯಿರಬಹುದೆಂದು ತಿಳಿದರು. ಆಗಲೇ ಎಷ್ಟೋ ತಮ್ಮ ಸ್ನೇಹಿತರು ಸಂಯುಕ್ತ ಸಂಸ್ಥಾನಗಳಲ್ಲಿ, ಸಿವಿಲ್ ಮತ್ತು ಮಿಲಿಟರಿ ಜೈಲುಗಳಲ್ಲಿ ಕೊಳೆಯುತಿದ್ದರು ; ಬೇಡಿಹಾಕಿದ ಕೆಲವರನ್ನು ಎಲ್ಲೆ ಯಾಚೆ ಕೊಂಡುಹೋಗಿ ಹಸಿಯಿಟ್ಟಿಗೆ ಗೋಡೆಯ ನೇರಕ್ಕೆ ನಿಲ್ಲಿಸಿ, ಗುಂಡು ಹಾರಿಸಿದ್ದರು. ಹುಡುಗನನ್ನು ಮೊದಲ ಬಾರಿಗೆ ನೋಡಿದಾಗ, ಅವನ ಮೇಲೆ ಒಳ್ಳೆಯ ಅಭಿಪ್ರಾಯ ಕೂಟದ ಸದಸ್ಯರಿಗೆ ಮೂಡಲಿಲ್ಲ. ಅವನೇನೊ ಹುಡುಗ ; ಹದಿನೆಂಟು ವರ್ಷಗಳನ್ನೂ ದಾಟಿರಲಿಲ್ಲ ; ವಯಸ್ಸಿಗೆ ಮಾರಿದ ಬೆಳವಣಿಗೆಯೂ ಇರಲಿಲ್ಲ. ತನ್ನ ಹೆಸರು ' ಫೆಲಿಸಿ ರಿವೆರ' ಎಂದು ಹೇಳಿಕೊಂಡನು. ಕ್ರಾಂತಿ ಗೋಸ್ಕರ ದುಡಿಯಲು ಅವನಿಗೆ ಇಷ್ಟವಂತೆ. ಅಷ್ಟೇ ಅವನು ತಿಳಿಸಿದ್ದು. ಒಂದು ಮಾತನ್ನೂ ಹೆಚ್ಚಿಗೆಯಾಡದೆ” ವಿವರಗಳ ತಂಟೆಗೆ ಹೋಗಲಿಲ್ಲ. ಕಾಯುತ್ತ ಸುಮ್ಮನೆ ನಿಂತಿದ್ದನು. ತುಟಿಯ ಮೇಲೆ ನಗೆಯಿಲ್ಲ ; ಕಣ್ಣಿನಲ್ಲಿ ಗೆಲುವಿಲ್ಲ, ಧೈರ್ಯಸ್ಥನಾದ ದಪ್ಪನೆಯ - ಪೌಲಿನೊ ವೆರ ' ನಿಗೂ ಅಂತರಂಗ ದಲ್ಲಿ ಅಧೈರ್ಯವಾಯಿತು ಮತ್ತು ಹೇಳಲಸಾಧ್ಯವಾದ ಪರೀಕ್ಷೆಗೆ ನಿಲುಕದ ಭಯಗ್ರಸ್ತನಾದನು. ಹುಡುಗನ ಕಪ್ಪು ಕಣ್ಣು ಗಳು ವಿಷ ಕಾರುವಂತಿದ್ದು ವು ; ದ್ವೇಷಾಸೂಯೆಯ ಜ್ವಾಲೆಯು ಹೊರಸೂಸುತಿತ್ತು. ಪಿತೂರಿಗಾರರನ್ನು ದಿಟ್ಟಿಸುತ್ತಿದ್ದ ಕಣ್ಣು ಗಳು, ಟೈಪ್‌ರೈಟರ್ ಕಡೆ ತಿರುಗಿದುವು. ಮಿಸೆಸ್ ಸೆತ್‌ಬೈ ಕಷ್ಟ ಪಟ್ಟು ಟೈಪ್ ಮಾಡುತಿದ್ದಳು. ಅವನು ಕೇವಲ ಕ್ಷಣಕಾಲ ಅವಳನ್ನು ದೃಷ್ಟಿಸಿದನು. ಅಷ್ಟರಲ್ಲೇ ಅವಳು ತಲೆಯೆತ್ತಿ ನೋಡಿ ತಿಳಿಯದ ವಸ್ತುವನ್ನು ಕಂಡಂತೆ ಸುಮ್ಮನಾದಳು ; ಟೈಪ್ ಮಾಡಲು ಮತ್ತೆ ಹಿಂದಿನಿಂದ ಓದಬೇಕಾಯಿತು, ಪೌಲಿನೊ ವೆರ ಸಂಶಯಗ್ರಸ್ತನಾಗಿ ಅರೆಲಾನೊ ಮತ್ತು ರಮೋಸ್ರ ಕಡೆ ನೋಡಿದನು ; ಆದರೆ ಅವರೂ ಕೂಡ ತಮ್ಮಲ್ಲೇ ಪ್ರಶ್ನಿಸುವವರಂತೆ ಹಿಂತಿರುಗಿ ನೋಡಿದರು. ಅವರ ಕಣ್ಣು ಗಳಲ್ಲಿ ಸಂಶಯಾತ್ಮಕ ಚಿಹ್ನೆ ಎದ್ದು ಕಾಣುತಿತ್ತು. ಈ ತೆಳ್ಳನೆಯ ಹುಡುಗ ಅಪರಿಚಿತನು. ಅಜ್ಞಾತದ ಅಪಾಯ