ಪುಟ:ಬಾಳ ನಿಯಮ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂಬಾಲಿಕನಿಗೆ ಅಷ್ಟರಲ್ಲಿ ಕ್ಯಾಸ್ಟೆಲ್ ಮಾಡಿದ್ದೇನು? 'ಮೆಕ್‌ಫರ್‌ಲಾಂಡ'ರ ಪ್ರದೇಶವನ್ನು ಅತಿ ಕ್ರಮಿಸಿದನು. ಬೇಲಿ ಹಾರುವಾಗ ಇಡೀ ಚೀಲವನ್ನು ಕೆಳಕ್ಕೆ ಹಾಕಿಬಿಟ್ಟನು. ಮಾರನೆಯ ದಿನ ಹಿಮದಲ್ಲಿ ಅವನು ಪ್ರಾಣಬಿಟ್ಟದ್ದನ್ನು ಜಾಕ್ ಕಣ್ಣಾರೆ ಕಂಡನು. ಏನು ಮಾಡುವುದು ? ಈ ಚಳಿಗಾಲದಲ್ಲಿಯಾದರೂ ತನ್ನ ಹೆಂಡತಿ ಯನ್ನೂ ಮತ್ತು ಇಲ್ಲಿಯ ತನಕವೂ ನೋಡದ ಮಗುವನ್ನು ಭೇಟಿಯಾಗ ಬೇಕೆಂದು ಜಾಕ್ ಒಂದು ಯೋಜನೆಯನ್ನು ಸಿದ್ಧಪಡಿಸಿದ್ದನು. ಎಲ್ಲವೂ ಮಣ್ಣು ಪಾಲಾಯಿತು....ಇದರಲ್ಲಿ ಒಂದು ಅಂಶ ನಿಮಗೇ ತಿಳಿಯುತ್ತದೆ. ನೋಡಿ ; ಅವನು ತನ್ನ ಪ್ರತಿಸ್ಪರ್ಧಿ ಕಳೆದುಕೊಂಡಷ್ಟೇ ಹಣವನ್ನು ತೆಗೆದು ಕೊಂಡಿದ್ದಾನೆ ಅಂದರೆ, ಸರಿಯಾಗಿ ನಲುವತ್ತು ಸಾವಿರ ಮಾತ್ರ !....ಸರಿ ; ಅವನಂತೂ ಹೊರಟುಬಿಟ್ಟನಲ್ಲ. ಮತ್ತೆ ಅವನ ಬಗ್ಗೆ ತಾವು ಏನು ಮಾಡ ಬೇಕೆಂದಿದ್ದೀರಿ ?....” ನ್ಯಾಯಾಧೀಶರ ಮಂಡಲಿಯ ಸುತ್ತಲೂ, ಕಿಡ್, ತನ್ನ ಕಣ್ಣನ್ನು ಹೊರಳಿಸಿದನು. ಅವರು ಇಳಿಮುಖವಾಗುತ್ತಿದ್ದುದನ್ನು ಗಮಿನಿಸಿದನು. ಅಗ ತನ್ನ ಬಟ್ಟಲನ್ನು ಎತ್ತರದಲ್ಲಿ ಹಿಡಿದು, ಆದ್ದರಿಂದ ಈ ರಾತ್ರಿಯಲ್ಲಿ, ನಾವು ತುಳಿದ ದಾರಿಯನ್ನು ಹಿಂಬಾಲಿಸಿ ಬಂದ ಮನುಷ್ಯನಿಗೆ ಆರೋಗ್ಯವಿರಲಿ ; ಆಹಾರ ಕೆಡದಿರಲಿ ; ನಾಯಿಗಳ ಕಾಲಿಗೆ ಶಕ್ತಿ ಬರಲಿ ; ಆತನ ಕಡಿಗಳಲ್ಲಿ ಬೆಂಕಿಯು ಆರದಿರಲಿ ; ದೇವರು ಅವನನ್ನು ಜಯಪ್ರದನನ್ನಾಗಿ ಮಾಡಲಿ ; ಅದೃಷ್ಟ ಅವನ ಜೊತೆಯಲ್ಲೇ ಪ್ರಯಾಣಮಾಡಲಿ ; ಮತ್ತು” “ಪೋಲೀಸು ಸವಾರರಿಗೆ ಗಲಿಬಿಲಿಯಾಗಲಿ !?” ಎಂದು ಬೀಟಲ್ಸ್, ಬರಿಯ ಬಟ್ಟಲನ್ನು ರಭಸದಿಂದ ಡಿಕ್ಕಿ ಹೊಡೆಸುತ್ತಾ ಕೂಗಿಕೊಂಡನು. ಮೆಕ್ಸಿಕನ್ ಅವನ ಚರಿತ್ರೆ ಯಾರಿಗೂ ತಿಳಿಯದು ; ಸಂಚುಕೂಟದವರಿಗೂ ಏನೂ ಗೊತ್ತಿಲ್ಲ. ಕೂಟದವರ ದೃಷ್ಟಿಯಲ್ಲಿ ಅವನು ಚಿಕ್ಕವನಾಗಿದ್ದರೂ 'ರಹಸ್ಯ ಪ್ರಕೃತಿಯವನು' ಮತ್ತು 'ದೊಡ್ಡ ದೇಶಭಕ್ತನು'. ತಮ್ಮಂತೆಯೇ ಅವನೂ ಕೂಡ ಕಷ್ಟ ಪಟ್ಟು ಮೆಕ್ಸಿಕನರ ಕ್ರಾಂತಿಗೆ ದುಡಿಯುತ್ತಿದ್ದನು. ಆದರೆ ಅವನ ಮಾರ್ಗವೇ ಬೇರೆ, ಅದನ್ನು ಅರಿಯಬೇಕಾದರೆ ಸಂಚುಕೂಟದವರಿಗೆ ಹೆಚ್ಚು