ಪುಟ:ಬಾಳ ನಿಯಮ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ “ಮಧ್ಯೆ ಮಧ್ಯೆ ಅವನು ಈ ಸ್ಥಳ ಬಿಟ್ಟು ಹೊರಟುಹೋಗುವುದಿಲ್ಲವೇ ? ಏಕೆಂದು ಎಂದಾದರೂ ಹೇಳಿದ್ದಾನೆಯೇ ?” ಎಂದಳು ಮೇಸೇಜ್ ಬೈ. “ಅವನ ನಡೆನುಡಿಗಳನ್ನು ತಿಳಿಯಲು ಒಬ್ಬ ಗೂಢಚಾರನನ್ನು ನೇಮಿಸ ಬೇಕು”, ಎಂದು ರಮೋಸ್ ಸೂಚಿಸಿದನು. ವೆರ ಹೇಳಿದನು : ಅಂಥ ಗೂಢಚಾರನಾಗಲು ನನಗೇನೂ ಇಷ್ಟವಿಲ್ಲ. ಹಾಗೇನಾದರೂ ಆದರೆ ಬಹುಶಃ ನನ್ನನ್ನು ನೀನು ಜೀವಸಹಿತ ನೋಡಲಾರೆ. ರಿವೆರನ ಭಾವೋದ್ರೇಕ ಅತ್ಯಂತ ತೀವ್ರವಾದುದು. ದೇವರು ಕೂಡ ಅದರ ಮಧ್ಯೆ ನಿಲ್ಲಲಾರ.” ಅವನ ಮುಂದೆ ನಾನೊಬ್ಬ ಮಗುವಿನಂತೆ....” ಎಂದು ರಮೋಸ್ ಒಪ್ಪಿಕೊಂಡನು. “ನನಗಂತೂ ಅವನೊಬ್ಬ ವ್ಯಕ್ತಿಯಲ್ಲ, ಶಕ್ತಿ-ಆದಿಕಾಲದವನು, ತೋಳ ನಂತೆ ಮೇಲೆ ಬೀಳುವವನು ಮತ್ತು ರಟ ರಟ ಸದ್ದು ಮಾಡಿ ಕಡಿಯುವ ವಿಷ ಸರ್ಪದಂತೆ ಅಥವಾ ಚುಚ್ಚುವ ಶತಪದಿಯಂತೆ ಇರುವವನು....” ಎಂದನು ಅರೆಲಾನೋ. “ಅವನು ಮೂರ್ತಿಮತ್ತಾದ ಕ್ರಾಂತಿಯೇ ಸರಿ. ಕ್ರಾಂತಿಯ ಜ್ವಾಲೆಯೂ ಸ್ಫೂರ್ತಿಯೂ ಅವನಲ್ಲಿವೆ. ಸೇಡು ತೀರಿಸುವ ಮನೋಭಾವವುಳ್ಳವನು. ಗುಲ್ಲೆಬ್ಬಿಸದೆ ನಿಶ್ಯಬ್ದವಾಗಿ ಕೊಲೆ ಮಾಡುವವನು. ಮಾತ್ರವಲ್ಲ, ಅವನೊಬ್ಬ ವಿನಾಶಕಾರಿ ನಿಶಾಚರ ದೇವತೆ.” ಎಂದು ವೆರ ಹೇಳಿದನು. “ಅವನ ವಿಷಯದಲ್ಲಿ ನನಗೆ ಅಳುಬರುತ್ತದೆ. ಅವನಿಗೆ ಯಾರ ಪರಿ, ಚಯವೂ ಇಲ್ಲ. ಎಲ್ಲರನ್ನೂ ದ್ವೇಷಿಸುತ್ತಾನೆ. ನಮ್ಮನ್ನು ಮಾತ್ರ ಸಹಾನು ಭೂತಿಯಿಂದ ನೋಡುತ್ತಾನೆ; ಏಕೆಂದರೆ ಅವನ ಆಶೆ ನಮ್ಮ ಮೂಲಕ ನೆರವೇರ ಬಹುದು.... ಆದರೂ ಅವನು ಏಕಾಂಗಿ.....ಸದಾ ಒಬ್ಬನೇ ಇರುತ್ತಾನೆ” ಎನ್ನುತ್ತಾ ಮೇಸಕ್ಬೈ ಇನ್ನೇನು ಅಳುವುದರಲ್ಲಿದ್ದಳು. ಕಣ್ಣು ಮಂಜಾ ಯಿತು. ನಿಜವಾಗಿಯೂ ರಿವೆರನ ಅಕಾಲದ ಓಡಾಟಗಳು ಸಮಸ್ಯಾತ್ಮಕ ವಾಗಿದ್ದವು. ಕೆಲವು ವೇಳೆ ಹೊರಟನೆಂದರೆ ಒಂದು ವಾರದ ತನಕವೂ ಮುಖ ತೋರಿಸುತ್ತಿರಲಿಲ್ಲ. ಒಂದು ಸಾರಿಯಂತೂ ಒಂದು ತಿಂಗಳ ಪ್ರವಾಸ ಹೊರಟದ್ದನು. ಆದರೂ ಮರಳಿ ಬಾರದೆ ಇರುತ್ತಿರಲಿಲ್ಲ. ಆ ಸುಸಂದರ್ಭ ಗಳಲ್ಲಿ ಯಾವ ಮಾತುಕಥೆಯ ಪ್ರಚಾರಕ್ಕೂ ಹೋಗದೆ, ಸೇಕ್ ಬೈಳ ಡೆಸ್ಕಿನ