ಪುಟ:ಬಾಳ ನಿಯಮ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೩೧ ಅಲ್ವಲ್ಯಾಡೋ ಮೃತಪಟ್ಟಿದ್ದನು. ಹಾಸಿಗೆಯಲ್ಲಿ ಸತ್ತು ಬಿದ್ದಿದ್ದ ಅವನ ಎದೆಯೊಳಗೆ ಕತ್ತಿಯೊಂದು ಆಳವಾಗಿ ನಾಟಿತ್ತು. ಸಂಚುಕೂಟದವರ ಸಲಹೆ ಯಂತೆ ರಿವರನು ಇಂಥ ಸಾಹಸ ಕಾವ್ಯವನ್ನು ಮಾಡಬಾರದಿತ್ತು. ಆದರೆ ಅವನ ವಿಚಿತ್ರ ಪ್ರಕೃತಿಯನ್ನು ಆಗಲೇ ಕಂಡುಕೊಂಡಿದ್ದ ಕೂಟದವರು ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ರಿವರ ಕೂಡ ಏನೂ ಹೇಳಲಿಲ್ಲ. ಆದರೆ ಸಂಚಿನವರು ತಮ್ಮ ತಮ್ಮ ಮುಖಗಳನ್ನು ನೋಡಿಕೊಂಡು ಏನನ್ನೋ ಊಹಿಸಿದರು. " ನಾನು ಆಗಲೇ ನಿಮಗೆ ಹೇಳಿದ್ದೇನೆ. ಇತರರಿಗಿಂತಲೂ ಈ ಹುಡುಗನ ವಿಷಯದಲ್ಲಿ ಡಯಾಸ್ ವಿಪರೀತ ಹೆದರುತ್ತಾನೆ ಎಂದು. ಇವನು ಕಠಿಣ ಹೃದಯನು. ಆದರೆ ದೇವರ ಪ್ರತಿನಿಧಿಯಾಗಿದ್ದಾನೆ....” ಎಂದನು ವೆರ. * ಮೇಸೇಜ್ ಬೈ ಆಗಲೇ ಸೂಚಿಸಿದಂತೆ, ರಿನೆರನ ಭಯಂಕರ ಮನೋ ಧರ್ಮ ಎಲ್ಲರಿಗೂ ತಿಳಿಯಿತು. ಅದಕ್ಕೆ ಸಾಕ್ಷಿಯಾಗಿ ಅವನ ಶರೀರ ಮಾರ್ಪಾಟು ಹೊಂದಿತ್ತು. ತುಟ ಹರಿದಿತ್ತು ; ಕೆನ್ನೆ ಕಪ್ಪುಗಟ್ಟಿತ್ತು, ಕಿವಿ ಉಬ್ಬಿತ್ತು. ಅವನು ಹೊರಗಿನ ಪ್ರಪಂಚದ ಯಾವುದೋ ಸ್ಥಳದಲ್ಲಿರಬೇಕು! ಅಲ್ಲಿಯೇ ಅವನು ಅವರಿಗೆ ತಿಳಿಯದಂತೆ ತಿರುಗಾಡುತ್ತಿರುವುದು ; ತಿನ್ನುವುದು, ಮಲಗುವುದು ಮತ್ತು ದುಡ್ಡು ಗಳಿಸುವುದು ಅಲ್ಲಿಯೇ ಇರಬಹುದು. ಕಾಲಕಳೆ ದಂತೆ ಅವರು ಪ್ರಕಟಿಸುತ್ತಿದ್ದ ಕ್ರಾಂತಿಕಾರಿ ವಾರಪತ್ರಿಕೆಗೆ ಮೊಳೆ ಜೋಡಿಸಲು ಬಂದಿದ್ದನು. ಆದರೆ ಅನೇಕ ಸಂದರ್ಭಗಳಲ್ಲಿ ಅವನಿಗೆ ಅನಾನುಕೂಲವಾಗು ತಿತ್ತು. ಬೆರಳಿನ ಗೆಣ್ಣುಗಳು ಜಜ್ಜಿ ಹೋದಾಗ, ಹೆಬ್ಬೆರಳು ಗಾಯಗೊಂಡಾಗ ಅಥವಾ ಒಂದುಪಾರ್ಶ್ವವೇ ಸುಸ್ತಿನಿಂದ ಜೋತುಬಿದ್ದಾಗ ಮೊಳೆ ಜೋಡಿ ಸುವುದಾದರೂ ಹೇಗೆ? ನೋವಿನ ತೀವ್ರತೆ ಮುಖದಲ್ಲಿ ಕಾಣುತ್ತಿದ್ದರೂ, ಅದನ್ನು ಹೇಳಿಕೊಳ್ಳುವ ಸ್ವಭಾವವಿರಲಿಲ್ಲ. “ಇವನೊಬ್ಬ ಬೀದಿ ಪೋರ,” ಎಂದನು ಅರೆಲಾನೋ. . ರಮೋಸ್ ಹೇಳಿದನು: “ಇವನು ಕೀಳುಮಟ್ಟದ ಗುಪ್ತ ಸ್ಥಳಗಳಿಗೆ ಹೋಗಿಬರುತ್ತಿರುವನು.” ವೆರನಿಗೆ ಆಶ್ಚರ್ಯವಾಯಿತು: “ಆಗಲಿ; ಅವನಿಗೆ ದುಡ್ವಾದರೂ ಎಲ್ಲಿ ಸಿಗುತ್ತದೆ ? ಇವತ್ತು ಈಗತಾನೆ ಕೇಳಿದೆ ; ಬಿಳೀ ಕಾಗದಕ್ಕಾಗಿ ಮಾಡಿದ್ದ ಸಾಲವನ್ನು ಪೂರ್ತ ತೀರಿಸಿದನಂತೆ. ಅದೇನು ಸ್ವಲ್ಪವಲ್ಲ ; ನೂರನಲವತ್ತು ಡಾಲರುಗಳು....”