ಪುಟ:ಬಾಳ ನಿಯಮ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ “ ಅವನು ಗೂಢಚಾರನಲ್ಲ....ದೇಶಭಕ್ತ, ನನ್ನ ಮಾತು ಕೇಳುಅವನು ನಮ್ಮೆಲ್ಲರನ್ನೂ ಮೀರಿಸುವಂಥ ದೇಶಾಭಿಮಾನಿ. ಇದು ನನ್ನ ತಲೆಗೆ ಹೊಳೆದಿದೆ; ಹೃದಯದಿಂದ ಅನುಭವವಾಣಿ ತಿಳಿಸಿದೆ. ಆದರೆ ಅವನನ್ನು ಮಾತ್ರ ಹಿಂದೆಂದೂ ನೋಡಿಲ್ಲ....” ಎಂದು ವಿಶ್ವಾಸದಿಂದ ವೆರ ಮೇಸೇಕ್ ಬೈಳಿಗೆ ತಿಳಿಸಿದನು. “ ಅವನಲ್ಲಿ ಸಿಡುಕಿನ ಮನೋಧರ್ಮವಿದೆ ” ಎಂದಳು ಮೇಸೇಕ್ಬೆ. “ ಹೌದು, ನನಗೆ ಗೊತ್ತಿದೆ. ಆ ಕಣ್ಣುಗಳಲ್ಲೇ ನನ್ನನ್ನೂ ನೋಡಿ ದ್ದಾನೆ. ಅವನ ಕಣ್ಣು ಗಳು ಕ್ರೂರ ಹುಲಿಯ ಕಣ್ಣು ಗಳಂತಿವೆ. ಪ್ರೀತಿ ವಿಶ್ವಾಸಗಳನ್ನು ದೂರವಿಟ್ಟು ಮೇಲೆಬೀಳುವಂತಿವೆ. ಧೈಯ ಸಾಧನೆಯಲ್ಲಿ ದಾರಿ ತಪ್ಪಿದರೆ ನನ್ನನ್ನು ಅವನು ಕೊಲ್ಲಬಹುದು. ಅವನಿಗೆ ಹೃದಯವಿಲ್ಲ. ಉಕ್ಕಿನಷ್ಟು ಕಠಿಣ. ಹಿಮಮಾರುತದಷ್ಟೇ ತೀಕ್ಷ....ಚಳಿಗಾಲದ ರಾತ್ರಿಯಲ್ಲಿ ಒಬ್ಬನು ಪರ್ವತ ತುದಿಯ ಏಕಾಂತ ಪ್ರದೇಶದಲ್ಲಿ ಮಂಜಿನ ಹೊಡೆತದಿಂದ ಸತ್ತಾಗ ಮೇಲೆ ಶೋಭಿಸುವ ಬೆಳದಿಂಗಳಂತಿದ್ದಾನೆ.... ನನಗೆ ಡಯಾಸನನ್ನು ಕಂಡರೆ ಹೆದರಿಕೆಯಿಲ್ಲ. ನಿಜವಾಗಿ ಹೇಳುವುದಾದರೆ ಈ ಹುಡುಗನನ್ನು ಕಂಡರೆ ನನಗೆ ಹೆದರಿಕೆ! ಇವನು ಮೃತ್ಯು ಸಮಾನನು ” ಎಂದು ವರ ನಡುಗಿದನು. ಹೀಗಿದ್ದರೂ ರಿವೆರನ ಬಗ್ಗೆ ದೃಢ ನಂಬಿಕೆಯಿಟ್ಟಿದ್ದವನೆಂದರೆ ವೆರ ಒಬ್ಬನೇ; ಇತರರನ್ನೂ ಆ ಮನೋಭಾವಕ್ಕೆ ಒಡಂಬಡಿಸುತಿದ್ದನು.

  • ಲಾಸ್ ಏಂಜಲೀಸ್‌ಗೂ ಕೆಳ ಕ್ಯಾಲಿಫೋರ್ನಿಯಾಕ್ಕೂ ಮಧ್ಯೆ ಇದ್ದ ವಾರ್ತಾ ತಂತಿಗಳು ಮುರಿದುಹೋಗಿದ್ದವು. ಮೂರು ಜನ ಸಂಗಾತಿಗಳು ತಮ್ಮ ಗೋರಿಗಳನ್ನು ತಾವೇ ಅಗೆದು ಗುಂಡಿನ ಬಾಯಿಗೆ ತುತ್ತಾಗಿದ್ದರು. ಇನ್ನಿಬ್ಬರು ಲಾಸ್ ಏಂಜಲೀಸ್‌ನಲ್ಲಿ ಸಂಯುಕ್ತ ಸಂಸ್ಥಾನದ ಖೈದಿಗಳೆಂದು ಪರಿಗಣಿಸಲ್ಪಟ್ಟಿದ್ದರು. ಜ್ಯಾನ್ ಅಲ್ವಬ್ಯಾಡೋ ಎಂಬ ಸಂಯುಕ್ತ ರಾಷ್ಟ್ರದ ಸೇನಾಧಿಕಾರಿ ಕಿರಾತನಂತಿದ್ದನು ; ತಮ್ಮ ಎಲ್ಲ ಪ್ರಯತ್ನಗಳನ್ನೂ ಸಾಗದಂತೆ ಮಾಡುತಿದ್ದನು. ಉತ್ಸಾಹಿ ಕ್ರಾಂತಿಕಾರರ ಹತ್ತಿರ ತಾವು ಸುಳಿಯಲೂ ಅವಕಾಶ ವಿರಲಿಲ್ಲ. ಕೆಳ ಕ್ಯಾಲಿಫೋರ್ನಿಯದಲ್ಲಿ ಹೊಸದಾಗಿ ಕ್ರಾಂತಿ ಆರಂಭವಾಗಿದ್ದರೂ, ಅಲ್ಲಿಗೆ ಹೋಗಿ ಮಾರ್ಗದರ್ಶನ ನೀಡಲು ದುರ್ಲಭವಾಗಿತ್ತು.

ಯುವಕ ರಿವರನಿಗೆ ಜವಾಬ್ದಾರಿಯುತವಾದ ಕೆಲಸವನ್ನು ಕೊಡ ಲಾಯಿತು. ದಕ್ಷಿಣದ ಕಡೆ ಹೋಗುವಂತೆ ಸಲಹೆ ನೀಡಲಾಯಿತು....ಅವನು ಮರಳಿ ಬಂದಾಗ ವಾರ್ತಾ ವ್ಯವಸ್ಥೆ ಸರಿಪಡಿಸಲಾಗಿತ್ತು. ಮತ್ತು ಜಾನ್