ಪುಟ:ಬಾಳ ನಿಯಮ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೪ ಬಾಳ ನಿಯಮ ಹೋರಾಡುವ ಸಿಪಾಯಿಗಳು, ಡಕಾಯತರು, ಅಮೆರಿಕನ್ ಯೂನಿಯನ್ನಿನ ಅತೃಪ್ತ ಸದಸ್ಯರು, ಸಮಾಜಸ್ವಾಮ್ಯ ವಾದಿಗಳು, ಅರಾಜಕತಾ ವಾದಿಗಳು, ಗಡಿಪಾರಾದ ಮೆಕ್ಸಿಕನರು, ಬಂಧನದಿಂದ ಬಿಡಿಸಲ್ಪಟ್ಟ ಸೇವಕರು, ಇತ್ಯಾದಿ. ಕೌರ್ ಡಿ ಅಲೆನೆ ಮತ್ತು ಕಲಯ್ಯಾಡೂ ಆವರಣದಲ್ಲಿ ಏಟುತಿಂದ ಗಣಿಕೆಲಸ ದವರು ಕೇವಲ ಸೇಡು ತೀರಿಸಿಕೊಳ್ಳಲು ಹುಚ್ಚು ಹೋರಾಟಕ್ಕೆ ನಿಂತಿದ್ದರು. ಎಲ್ಲೆಲ್ಲೂ ನಿರಂತರ ಒಂದೇ ಕೂಗು ಕೇಳಬಂತುಬಂದೂಕು, ಸಿಡಿಗುಂಡು ! ಸಿಡಿಗುಂಡು ಬಂದೂಕು.” ದಿವಾಳಿಯಾದರೂ ವೈವಿಧ್ಯದಿಂದ ಕೂಡಿರುವ ಈ ಪ್ರತೀಕಾರಕ ಸಮುದಾ ಯವು ಗಡಿಯಾಚೆ ದಾಟಿದರೆ ಸಾಕು; ಕ್ರಾಂತಿ ಮುಂದುವರಿಯುವುದು. ಉತ್ತ ರದ ರೇವು ಪಟ್ಟಣಗಳನ್ನೂ, ಸುಂಕದ ಕಟ್ಟೆಗಳನ್ನೂ ಸುಲಭವಾಗಿ ಹಿಡಿಯಬ ಹುದು. ಡಿಯಾಸ್ ಪ್ರತಿಭಟಿಸಲು ಸಾಧ್ಯವಿಲ್ಲ. ಕ್ರಾಂತಿಕಾರರ ಮೇಲೆ ಸೈನ್ಯವನ್ನು ಭೂ ಬಿಡಲು ಮುಂದವರಿಯಲಾರ ; ಏಕೆಂದರೆ ಹಿಡಿತದಲ್ಲಿರುವ ದಕ್ಷಿಣ ದೇಶದ ಆಡಳಿತವನ್ನು ಸಡಿಲಗೊಳಿಸಲು ಅವನು ಒಪ್ಪಲಾರ. ಅಷ್ಟಾದರೂ ದಕ್ಷಿಣ ದೇಶದಲ್ಲಿ ಅಂತರ್ಯುದ್ದ ಮೆಲ್ಲಗೆ ಆವರಿಸದಿರದು. ಜನ ದಂಗೆಯೇಳುವರು. ಒಂದಾದ ಮೇಲೊಂದು ನಗರ ರಕ್ಷಣೆಗಳು ಮುರಿದುಬೀಳುವುವು. ಮತ್ತೆ ದೇಶ ದೇಶಾಂತರಗಳು ಉರುಳಿಹೋಗುವುವು. ಕಡೆಗೆ ಎಲ್ಲ ಭಾಗಗಳಿಂದಲೂ ಗೆದ ದಳಗಳು ಒಂದೆಡೆ ಸೇರುತ್ತವೆ. ಉಳಿದಿರುವುದು ಮೆಕ್ಸಿಕೊ ನಗರ. ಅದೊಂದೇ ಡಿಯಾಸನ ಕೊನೆಗಾಲದ ಭದ್ರವಾದ ಆಶ್ರಯ. ಅದನ್ನೂ ಕ್ರಾಂತಿ ಸೈನ್ಯವು ವಶಪಡಿಸದೆ ಬಿಡಲಾರದು.

  • ಆದರೆ ಎಲ್ಲಕ್ಕೂ ಹಣ ಬೇಕು! ಅಸಹನೆಯ ಅತುರದ ಮನುಷ್ಯರು ಬಂದೂಕ ಹಾರಿಸಲು ಕಾದಿದ್ದಾರೆ. ಬಂದೂಕದ ವ್ಯಾಪಾರಿಗಳ ಪರಿಚಯವೂ ಇದೆ. ಆದರೇನು ಪ್ರಯೋಜನ? ಕ್ರಾಂತಿಯನ್ನು ಇಷ್ಟರ ಮಟ್ಟಿಗೆ ಸುಧಾರಿಸು ವುದು ಸಾಮಾನ್ಯವಲ್ಲ. ಆ ಮಹತ್ಕಾರ್ಯದಲ್ಲಿ ಸಂಚುಕೂಟದವರು ಎಲ್ಲ ಸಾಧನಗಳನ್ನೂ ಬಳಸಿಕೊಂಡಿದ್ದರು. ಕೊನೆ ಡಾಲರೂ ಖರ್ಚಾಯಿತು. ಕೊನೆಯ ಮನುಷ್ಯನ ಸರ್ವಸ್ವವನ್ನೂ ಹೀರಿದ್ದಾಯಿತು. ಆದರೂ ಈ ಮಹ ತ್ಕಾರ್ಯ ಇನ್ನೂ ತಕ್ಕಡಿಯಲ್ಲಿ ತೂಗಾಡುತ್ತಿದೆ! ಕೋವಿಗಳು, ಮದ್ದು ಗುಂಡು ಗಳು! ಚಿಂದಿಯನ್ನು ಟ್ಟ ಯೋಧರು ಯುದ್ಧಪಾಣಿಗಳಾಗಬೇಕು. ಆದರೆ ಹೇಗೆ ಸಾಧ್ಯ? ಸರಕಾರ ವಶಪಡಿಸಿಕೊಂಡ ತನ್ನ ಸ್ಥಿರಾಸ್ತಿಗಳನ್ನು ನೆನಸಿಕೊಂಡು ರಮೋಸ್ ಪ್ರಲಾಪಿಸಿದನು. ಯೌವನದಲ್ಲಿ ದುಂದುಗಾರಿಕೆಯ ಖರ್ಚು