ಪುಟ:ಬಾಳ ನಿಯಮ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೩೫ ಮಾಡಿದೆನಲ್ಲಾ ಎಂದು ಅರೆಲಾನೊ ಮರುಗಿದನು. ಸಂಚುಕೂಟದವರು ಹಿಂದೆ ಮಿತವಾಗಿ ಖರ್ಚು ಮಾಡಿದ್ದಿದ್ದರೆ, ಈಗ ಈ ಸ್ಥಿತಿ ಬರುತ್ತಿರಲಿಲ್ಲವೆಂದು ಮೆಸೇತ್‌ಬೈ ಉದ್ಧಾರವೆತ್ತಿದಳು. “ಮೆಕ್ಸಿಕೊ ಸ್ವಾತಂತ್ರ್ಯ ಕೇವಲ ಸಾವಿರಾರು ಡಾಲರುಗಳ ಮೇಲೆ ನಿಲ್ಲುವಂತಾಯಿತೇ ?” ಎಂದುಕೊಂಡನು ಪೌಲಿನೊವೆರ. ನಿರಾಶೆ ಎಲ್ಲರ ಮುಖದಲ್ಲೂ ಕಾಣಿಸಿಕೊಂಡಿತು....ಅಬ್ಬಾ, ಎಂಥ ಸುದ್ದಿ ಬಂದಿದೆ ? ತಮ್ಮ ಕಡೆಯ ಆಶ್ರಯನಾಗಿದ್ದ ಜೋಸ್ ಅಮರಿಲೋ ಹೋಗಿ ಬಿಟ್ಟನೇ ? ಅವನು ಇತ್ತೀಚೆಗೆ ತಮ್ಮ ಪಕ್ಷವಹಿಸಿ ಹಣ ಕೊಡಲು ವಾಗ್ದಾನ ಮಾಡಿದ್ದನು. ಅವನು ತನ್ನ ಸ್ವಂತ ಸ್ಥಳದಲ್ಲೇ ಗುಂಡಿನ ಬಾಯಿಗೆ ಆಹುತಿ ಯಾದನಂತೆ.... ನೆಲ ಉಜ್ಜುತಿದ್ದ ರಿವರ ಮೊಣಕಾಲ ಮೇಲೆ ನಿಂತು ನೋಡಿದನು. ಬ್ರಷ್ ಕೆಳಗೆ ಬಿತ್ತು. ಬಟ್ಟೆ ಯಿಲ್ಲದ ತೋಳುಗಳ ಮೇಲೆ ಸೋಪಿನ ಕೊಳಕು ನೀರು ಸಿಡಿದಿತ್ತು. “ಐದು ಸಾವಿರ ಸಾಕೋ ?” ಎಂದು ಕೇಳಿದನು. ಎಲ್ಲರಿಗೂ ಆಶ್ಚರ್ಯವಾಯಿತು. ವೆರ ತಲೆದೂಗಿ ಸಮ್ಮನಾದನು. ಮಾತನಾಡದಿದ್ದರೂ ರಿವರನ ಬಗ್ಗೆ ಸಂಪೂರ್ಣ ನಂಬಿಕೆ ಉದ್ಭವಿಸಿತು. “ಬಂದೂಕುಗಳಿಗೆ ಆರ್ಡರ್ ಮಾಡಿರಿ, ಕಾಲಾವಕಾಶ ಹೆಚ್ಚಿಲ್ಲ. ಐದು ಸಾವಿರವನ್ನು ಮೂರು ವಾರಗಳಲ್ಲಿ ತರುತ್ತೇನೆ, ಒಳ್ಳೆಯದು, ಕಾದಾಡುವವರಿಗೆ ವಾಯುಗುಣ ಬೆಚ್ಚಗೆ ಹಿತಕರವಾಗಿರುತ್ತದೆ. ಅದೇ ನಾನು ಮಾಡಬಹು ದಾದ ಹೆಚ್ಚಿನ ಕೆಲಸ....” ಎಂದನು ರಿನೆರ. ಇಷ್ಟು ಮಾತುಗಳನ್ನೇ ಕಾಡಿದೆ ಎಂದು ತನ್ನೆಲ್ಲಿ ತಾನೇ ಸಂಶಯಪಟ್ಟನು. ಹಾಗೆಯೇ ಕೂಟದವರೂ ಕೂಡ ರಿವೆರನ ದೊಡ್ಡ ವಾಕ್ಯಗಳನ್ನು ಕೇಳಿದ್ದು ಇದೇ ಮೊದಲು. ರಿವರನ ಆಜ್ಞೆಯಂಥ ಮಾತುಗಳು ನಂಬಲಸಾಧ್ಯವಾಗಿದ್ದರೂ, ವೆರ ನಂಬಲು ಪ್ರಯತ್ನ ಪಟ್ಟನು. ಕ್ರಾಂತಿಯ ಪಂದ್ಯ ಪ್ರಾರಂಭವಾದಾಗಿ ನಿಂದ ತನ್ನ ಎಷ್ಟೋ ವಿಶ್ವಾಸದ ಭರವಸೆಗಳು ಮುರಿದು ಬಿದ್ದಿದ್ದವು. ಕ್ರಾಂತಿ ಪಥವನ್ನು ಚೊಕ್ಕಟಮಾಡುತ್ತಿರುವ ಈ ಚಿಂದಿ ಬಟ್ಟೆಯವನನ್ನು ನಂಬಲಸಾಧ್ಯ ನಾದರೂ ನಂಬಲೇಬೇಕಾಯಿತು. “ನೀನು ಒಂದೇ ಗೀಳುಹಿಡಿದವನು,” ಎಂದನು. “ಏನಾದರಾಗಲಿ ; ಮೂರೇ ವಾರಗಳು ; ಬಂದೂಕಗಳಿಗೆ ಆರ್ಡರ್