ಪುಟ:ಬಾಳ ನಿಯಮ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೬ ಬಾಳ ನಿಯಮ ಮಾಡಿರಿ....” ಎಂದು ರಿವರ ಹೇಳಿದನು. ರಿವೆರ ಎದ್ದು ನಿಂತನು. ಅಂಗಿಯ ತೋಳನ್ನು ಮೇಲೆ ಮಡಚಿಕೊಂಡನು. ಕೋಟು ಧರಿಸಿದನು. "ಇದೋ ಹೊರಟೆ, ಬಂದೂಕಗಳಿಗೆ ಆರ್ಡರ್ ಮಾಡಿರಿ....” ಎಂದನು. III ಆ ರಾತ್ರಿ ಕೆಲ್ಲಿಯ ಕಛೇರಿಯಲ್ಲಿ ಸಭೆ ಸೇರಿತ್ತು. ಆತುರವಂತೂ ಹೇಳತೀರದು. ಟೆಲಿಫೋನಿಗೆ ಬಿಡುವೇ ಇಲ್ಲ. ಸಣ್ಣ ಮಾತುಗಳಂತೂ ವಿಪರೀತ. ಕೆಲ್ಲಿ ಭರಾಟೆಯಿಂದ ವ್ಯಾಪಾರ ನಡೆಸಿದ್ದನು. ಅದೃಷ್ಟ ನೆಟ್ಟಗಿರಲಿಲ್ಲ. ನ್ಯೂಯಾರ್ಕಿನ ಡಾನಿವಾರ್ಡ್ ಬಿಲ್ಲಿ ಕಾರ್ಥೆಯೊಡನೆ ಕಾದಾಟ ನಡೆಸಲು ಏರ್ಪಾಟುಮಾಡಿದವರು ಕೆಲ್ಲಿಯೇ, ಆಟದ ದಿನಕ್ಕೆ ಇನ್ನೇನು ಮೂರು ವಾರವಿತ್ತು. ಆದರೆ ಎರಡು ದಿನಗಳಿಂದ ಕಾರ್ಥೆಗೆ ತುಂಬ ಗಾಯಗಳಾಗಿ, ಮಲಗಿಬಿಟ್ಟಿದ್ದನು. ಆ ವಿಷಯವನ್ನು ಕ್ರೀಡಾ ವರದಿಗಾರರಿಂದ ಹೊರ ಬರದಂತೆ ನೋಡಿಕೊಳ್ಳಲಾಗಿತ್ತು, ಕಾರ್ಥೆಗೆ ಬದಲು ಯಾರ ಹೆಸರೂ ಹೊಳೆಯುತ್ತಿರಲಿಲ್ಲ. ಪೂರ್ವ ದಿಕ್ಕಿನ ಎಲ್ಲ ಪ್ರದೇಶಗಳಿಗೂ ಕೆಲ್ಲಿ ತಂತಿ ಮಾಡುತಿದ್ದನು ; ಕಡಿಮೆ ತೂಕದ ಎಲ್ಲ ಹೋರಾಳುಗಳನ್ನೂ ವಿಚಾರಿಸಿ ಯಾಯಿತು ; ಆದರೆ ಬೇರೆಯ ಆಟಗಳು ಅದೇ ತಾರೀಖಿನಲ್ಲಿ ಮೊದಲೇ ನಿಶ್ಚಯವಾಗಿದ್ದರಿಂದ ಅವರಿಗೆ ಪುರುಸೊತ್ತಿರಲಿಲ್ಲ..... ಈಗ ಸ್ವಲ್ಪಮಟ್ಟಿಗಾದರೂ ಭರವಸೆ ಬಂದಂತಾಯಿತು. ರಿವರ ಬಂದು ನಿಂತಿದ್ದನು. ಕೆಲ್ಲಿ ಒಮ್ಮೆ ದೃಷ್ಟಿಸಿ ನೋಡಿ, “ ಇದು ಸಾಮಾನ್ಯವಲ್ಲ; ನಿನಗೆ ತುಂಬ ತೊಂದರೆಯಿದೆ....” ಎಂದನು. ರಿವೆರನ ಕಣ್ಣುಗಳು ಬದ್ಧ ವೈರವನ್ನು ಸೂಚಿಸುತ್ತಿದ್ದವು ; ಆದರೆ ಅವನ ಮುಖ ಮಾತ್ರ ಭಾವೋದ್ರೇಕ ಶೂನ್ಯವಾಗಿಯೇ ಇತ್ತು. “ ನಾನು ವಾರ್ಡ್ನನ್ನು ಸೋಲಿಸಬಲ್ಲೆ ” ಎಂದು ಮಾತ್ರ ಅವನು ಹೇಳಿದನು. “ನಿನಗೆ ಹೇಗೆ ಗೊತ್ತು? ಅವನ ಗುದ್ದಾಟವನ್ನು ಎಂದಾದರೂ ನೋಡಿ SP) ದೀಯಾ ?” ರಿವೆರ ತಲೆಯಲ್ಲಾಡಿಸಿದನು. “ಅವನು ಎರಡು ಕಣ್ಣು ಗಳನ್ನೂ ಮುಚ್ಚಿಕೊಂಡು ಒಂದೇ ಕೈಯಲ್ಲಿ ನಿನ್ನನ್ನು ಬಾರಿಸಬಲ್ಲ....”