ಪುಟ:ಬಾಳ ನಿಯಮ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭ ಮೆಕ್ಸಿಕನ್ ತಿರಸ್ಕಾರ ಸೂಚಿಸುವಂತೆ ರಿವರ ಭುಜ ಎಗುರಿಸಿದನು. “ನೀನು ಹೇಳಬಹುದಾದ ಸಮಾಚಾರವೇನಾದರೂ ಉಂಟೋ?” ಎಂದು ಕಾದಾಟದ ಪ್ರವರ್ತಕ ಪ್ರಶ್ನಿಸಿದನು. ತಾನಾಗಿಯೆ ಅತೃಪ್ತಿ ಸೂಚಿಸು ವಂತೆ ಗುರುಗುಟ್ಟಿದನು. “ನಾನು ಅವನನ್ನು ಸೋಲಿಸಬಲ್ಲೆ.” “ಹೋಗಲಿ; ಎಂದಾದರೂ ಯಾರ ಜೊತೆಯಾದರೂ ಕಾದಾಡಿದ್ದೀಯಾ?” ಎಂದು ಮೈಕೇಲ್ ಕೆಲ್ಲಿ ಜರೂರಾಗಿ ಕೇಳಿದನು. ಪ್ರವರ್ತಕನ ಸಹೋದರನೇ ಮೈಕೆಲ್. ಪಂದ್ಯದ ಕಟ್ಟೆಯನ್ನು ಸ್ಥಾಪಿಸಿ ದುಡ್ಡು ಗಳಿಸಿದ್ದನು. ಅವನ ಪ್ರಶ್ನೆಗೆ ಉತ್ತರಕೊಡದೆ ರಿವರ ದಿಟ್ಟಿಸಿ ನೋಡಿದನು. ಪ್ರವರ್ತಕನ ಕಾರ್ಯದರ್ಶಿ ಸಂಪೂರ್ಣವಾಗಿ ಕ್ರೀಡಾಸಕ್ತ ಯುವಕ ನಾಗಿದ್ದನು. ಅವನು ರಿವರನನ್ನು ಜೋರಾಗಿ ಹೀಯಾಳಿಸಿದನು. ಸ್ವಲ್ಪ ಹೊತ್ತು ಮೌನ ಪ್ರತಿಕೂಲವಾಗಿದ್ದ ಮೌನವನ್ನು ಭೇದಿಸಿ ಕೆಲ್ಲಿ ಮಾತನಾಡಿದನು: “ಒಳ್ಳೆಯದು, ನಿನಗೆ ರಾಬರ್ಟ್ಸ್ ಗೊತ್ತಿದೆಯಲ್ಲವೇ ? ಈಗ ಅವನು ಇಲ್ಲಿಗೆ ಬರಬೇಕಾಗಿತ್ತು. ಹೇಳಿಕಳಿಸಿದ್ದೇನೆ. ಕುಳಿತಿಕೊ ; ಸ್ವಲ್ಪ ಕಾಯೋಣ. ನಿನ್ನನ್ನು ನೋಡಿದರೆ ಯಾವ ಅವಕಾಶವೂ ಸಿಗಲಾರದು. ಆದರೂ ನೋಡೋಣ....ಸಾರ್ವಜನಿಕರಿಗೆ ಕೇವಲ ಸಾಮಾನ್ಯವಾದ ಹಿಮ್ಮೆಟ್ಟು ವಂಥ ಕಾಳಗವನ್ನು ತೋರ್ಪಡಿಸಲು ನಾನು ಸಿದ್ಧನಿಲ್ಲ. ರಿಂಗ್ ಪಕ್ಕದ ಸೀಟುಗಳು ಹದಿನೈದು ಡಾಲರುಗಳಿಗೆ ಮಾರಾಟವಾಗುತ್ತಿವೆ; ನಿನಗೆ ಗೊತ್ತಿದೆ ತಾನೆ ?...” ರಾಬರ್ಟ್ ಬಂದನು. ಸ್ವಲ್ಪ ಅಮಲೇರಿತ್ತು. ಅವನೊಬ್ಬ ಸೋಮಾರಿ, ಉದ್ದನೆಯ ತೆಳ್ಳನೆಯ ಮನುಷ್ಯ, ಮಾತಿನಂತೆ ನಡಿಗೆಯೂ ಚಟುವಟಿಕೆಯಿಲ್ಲದೆ ಎಳೆದುಹಾಕಲ್ಪಡುತಿತ್ತು. ಕೆಲ್ಲಿ ನೇರ ವಿಷಯಕ್ಕೆ ಇಳಿದನು. “ರಾಬರ್ಟ್, ಇಲ್ಲಿ ನೋಡು, ಈ ಸಣ್ಣ ಮೆಕ್ಸಿಕನ್ ಮಹಾಶಯನನ್ನು ನೀನೇ ಕಂಡುಹಿಡಿದಂತೆ ಬಡಾಯಿಕೊಚ್ಚು ತಿದ್ದೀಯೆ. ಇರಲಿ. ಕಾರ್ಥೆಯ ತೋಳು ಮುರಿದ ವಿಷಯ ನಿನಗೆ ಗೊತ್ತಿದೆಯಲ್ಲವೇ ? ಹಳದಿ ರೇಖೆಯಂತಿರುವ ಈ ಸಣ್ಣವನಿಗೆ ಎಷ್ಟು ದುರಹಂಕಾರ? ಥಟ್ಟನೆ ಸೂಚನೆಯಿಲ್ಲದೆ ಒಳನುಗ್ಗಿ ದ್ದಾನೆ; ಕಾರ್ಥೆಯ ಜಾಗವನ್ನು ಭರ್ತಿಮಾಡುತ್ತೇನೆಂದು ಹೇಳುತಿದ್ದಾನೆ. ಏನು ಮಾಡುವುದು ?”