________________
೧೩೮ ಬಾಳ ನಿಯಮ “ಸರಿಯಾಗಿದೆ, ಕೆಲ್ಲಿ. ಅವನು ಹೋರಾಡಬಲ್ಲ. ಒಳ್ಳೆಯ ಪ್ರದರ್ಶನ ವನ್ನೇ ನೀಡಬಹುದು.” ಎಂದು ರಾಬರ್ಟ್ ನಿಧಾನವಾಗಿ ಉತ್ತರಕೊಟ್ಟನು.
- “ಮುಂದೆ ನೀನು ಹೇಳುವುದು ಅವನು ವಾರ್ಡ್ನನ್ನು ಸೋಲಿಸಬಲ್ಲ ನೆಂದು ; ಅಲ್ಲವೇ ?” ಎನ್ನುತ್ತಾ ಕೆಲ್ಲಿ ಸಿಡಿಗುಟ್ಟಿದನು.
ಈಗ ರಾಬರ್ಟ್ ವಿಮರ್ಶಾತ್ಮಕವಾಗಿ ವಿವೇಚಿಸಿದನು. “ನಾನು ಹಾಗೇನೂ ಹೇಳುವುದಿಲ್ಲ. ವಾರ್ಡ್ ಎಷ್ಟಾದರೂ ಅಖಾಡದ ಯಜಮಾನ. ಎಲ್ಲರನ್ನೂ ಮಾರಿಸಿದ ಗೆಲ್ಲು ಸಂಖ್ಯೆಗಳನ್ನು ಹೊಂದಿದ್ದಾನೆ. ಆದರೆ ಅವನು ರಿವೆರನನ್ನು ಬಹು ಬೇಗನೆ ಅದುಮಿಬಿಡಲು ಸಾಧ್ಯವಿಲ್ಲ. ರಿವೆರನ ಸ್ವಭಾವ ನನಗೆ ಗೊತ್ತು. ಅವನನ್ನು ರೇಗಿಸಲು ಯಾರಿಂದಲೂ ಆಗದು. ಎರಡು ಕೈಗಳಿಂದಲೂ ಅವನು ಗುದ್ದಾಟ ನಡೆಸಬಲ್ಲ....” “ ಅದು ಹೋಗಲಿ ಬಿಡು, ನಮಗೆ ಬೇಕಾದುದು, ಅವನು ಎಂಥ ಪ್ರದರ್ಶನ ನೀಡಬಲ್ಲ ? ಎಂದು. ಕಾದಾಡುವವರಿಗೆ ಸೂಕ್ತ ಅಭ್ಯಾಸ ನೀಡಿ ಮಾರ್ಗದರ್ಶನ ಮಾಡುವುದರಲ್ಲಿ ನಿನ್ನ ಜೀವಮಾನವನ್ನೇ ಸವೆಸಿದ್ದೀಯೆ. ಆದ್ದರಿಂದ ನಿನ್ನ ತೀರ್ಮಾನಕ್ಕೆ ಗೌರವ ಕೊಡುತ್ತೇನೆ. ಅವನು ಜನಸಮುದಾ ಯಕ್ಕೆ ದುಡ್ಡಿಗೆ ತಕ್ಕ ಪ್ರತಿಫಲ ನೀಡಬಲ್ಲನೇ ?....ಹೇಳು....” “ ನಿಶ್ಚಯವಾಗಿಯೂ ಅವನು ವಾರ್ಡ್‌ಗೆ ತೊಂದರೆಯ ಹೊರೆಯನ್ನು ಹೊರಿಸಬಲ್ಲ. ನಿನಗೆ ಆ ಹುಡುಗನ ಸಮಾಚಾರ ತಿಳಿಯದು. ನನಗೆ ಗೊತ್ತುಂಟು. ನಾನು ಅವನನ್ನು ಕಂಡುಹಿಡಿದಿದ್ದೇನೆಂದು ಹೇಳಬಹುದು. ಅವನೊಬ್ಬ ದೆವ್ವದಂಥ ವ್ಯಕ್ತಿ ; ವಾರ್ಡ್ ತನ್ನ ಸ್ಥಳೀಯ ಸಹಜ ಶಕ್ತಿಯನ್ನು ಪ್ರದರ್ಶಿಸಲು ಸದಾ ಎಚ್ಚೆತ್ತಿರುವಂತೆ ಈ ಮೆಕ್ಸಿಕನ್ ನೋಡಿಕೊಳ್ಳುತ್ತಾನೆ. ಅಂದ ಮೇಲೆ ಉಳಿದವರೂ ಅದೇ ರೀತಿ ಕುತೂಹಲಿಗಳಾಗಿ ವರ್ತಿಸಲು ಅವಕಾಶವಿರುತ್ತದೆ. ಅವನು ವಾರ್ಡ್ನನ್ನು ಸೋಲಿಸುತ್ತಾನೆಂದು ಹೇಳ ಲಾರೆ. ಆದರೂ ಪ್ರದರ್ಶನ ನೋಡುವ ನೀವೆಲ್ಲರೂ, 'ಇವನು ಮುಂದೆ ಬರುವವನು' ಎನ್ನದೆ ಇರಲಾರಿರಿ....” “ಸರಿ,” ಎನ್ನುತ್ತಾ ಕೆಲ್ಲಿ ಕಾರ್ಯದರ್ಶಿಯ ಕಡೆ ತಿರುಗಿದನು. “ವಾರ್ಡ್‌ಗೆ ಫೋನ್ ಮಾಡು. ಅವನು ಅವಶ್ಯವಿದ್ದರೆ ಬರುವಂತೆ ಮೊದಲೇ ಹೇಳಿದ್ದೆ. ಈಗ ಅವನು “ಎಲ್ಲೋಸ್ಟೋನ್' ಆಚೆ ಇದ್ದಾನೆ; ಎದೆ ಬೀಸುತ್ತಾ ಜನಪ್ರಿಯ ವರಿಸೆಗಳನ್ನು ತೋರುಸುತ್ತಿರಬೇಕು....” * ಡ್ರಿಂಕ್ ತೆಗೆದುಕೊಳ್ಳೋಣವೇ ?” ಎಂದು ರಾಬರ್ಟಗೆ ಸೂಚಿಸಿದನು.