ಪುಟ:ಬಾಳ ನಿಯಮ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೩೯ ಉದ್ದನೆಯ ಲೋಟಾದಲ್ಲಿ ಸೋಡಾ ಮಿಶ್ರಿತ ವಿಸ್ಕಿ ಬಂದಿತು. ರಾಬರ್ಟ್ ನಿಧಾನವಾಗಿ ಹೀರುತ್ತಾ ಭಾರ ಇಳಿಸಿದವನಂತೆ ಕಂಡನು. ಈ ಪ್ರಾಣಿಯನ್ನು ಕಂಡುಹಿಡಿದ ಬಗೆ ನಿನಗೆ ಹೇಳೇ ಇರಲಿಲ್ಲ. ಎರಡು ವರ್ಷಗಳ ಹಿಂದೆ ನಮ್ಮ ಬೇಡಿನ ಹತ್ತಿರ ಇವನು ಬಂದ, ಡಿಲನೆ ಜೊತೆ ಕಾದಾಡಲು ಪ್ರೇನಿಗೆ ತಯಾರಿ ಕೊಡುತಿದ್ದೆ. ಪ್ರೇನಿ ತುಂಬ ದುಷ್ಟ ; ಅವನಲ್ಲಿ ಒಂದು ಕಣದಷ್ಟೂ ದಯೆಯಿರಲಿಲ್ಲ. ತನ್ನ ಸಹಭಾಗಿಗಳಿಗೆ ಕತ್ತರಿಸುವಂಥ ಏಟುಕೊಡುತಿದ್ದ. ಅವನ ಜೊತೆ ಕಾದಾಡಲು ಯಾರಿಗೂ ಇಷ್ಟವಿರಲಿಲ್ಲ. ಆ ಸಮಯದಲ್ಲಿಯೇ ಈ ಮೆಕ್ಸಿಕನ್ ಮರಿಯನ್ನು ಕಂಡದ್ದು, ಈ ಸಣ್ಣ ಹುಡುಗ ಹಸಿದಿದ್ದನು. ಯಾವಾಗಲೂ ಇಲ್ಲೇ ಒದ್ದಾಡುತ್ತಿದ್ದನು. ನನಗಂತೂ ಬೇಸರ ವಾಗಿತ್ತು. ಆದ್ದರಿಂದ ತಕ್ಷಣ ಇವನನ್ನು ಹಿಡಿದು ಕೈಗವಸು ತೊಡಿಸಿದೆ; ದಾರಿಗೆ ತರಲು ಪ್ರಯತ್ನಿಸಿದೆ. ಹಸಿದ ಚರ್ಮುಕ್ಕಿಂತಲೂ ಒರಟಾಗಿದ್ದನು ; ಆದರೂ ದುರ್ಬಲ. ಮುಷ್ಟಿ ಕಾಳಗದ ಬಗ್ಗೆ ಒಂದು ಅಕ್ಷರವೂ ಅವನಿಗೆ ತಿಳಿ ಯದು. ಪ್ರೇನಿಯಂತೂ ಅವನನ್ನು ಎಡಬಿಡದೆ ತೂಗಾಡಿಸಿದ್ದನು. ಅಸಹ್ಯ ತರುವಂಥ ಎರಡು ರೌಂಡುಗಳಾಡಿ ಸುಸ್ತಾದನು. ಎಷ್ಟಾದರು ಹಸಿವು ; ಅದೇ ಎಲ್ಲಕ್ಕೂ ಕಾರಣ. ಅಬ್ಬ ಎಷ್ಟು ಜಜ್ಜಿ ಹೋಗಿದ್ದ ! ಆಗ ನೀನು ಅವನನ್ನು ಎಷ್ಟು ಗುರುತಿಸಲೂ ಸಾಧ್ಯವಾಗುತ್ತಿರಲಿಲ್ಲ. ಅವನಿಗೆ ನಾನು ಕೊಡುತ್ತಿದ್ದುದು ಅರ್ಧ ಡಾಲರು ; ಜೊತೆಗೆ ಅಚ್ಚುಕಟ್ಟಾದ ಊಟ, ಕಾಲ ಕಳೆದಂತೆ ಜೋರಾ ಗುತ್ತ ಬಂದನು. ಬಕಬಕನೆ ತಿನ್ನುವ ರೀತಿಯನ್ನು ನೀನು ನೋಡಬೇಕಿತ್ತು. ಮಧ್ಯೆ ಮಧ್ಯೆ ಚುಚ್ಚುಗಾಯಗಳಿಗೆ ಸಿಕ್ಕುತ್ತಿದ್ದ. ಆಗ ಅವನ ಕಥೆ ಮುಗಿಯಿತೆಂದು ಊಹಿಸಿದ್ದೆ. ಆದರೆ ಮಾರನೆಯ ದಿನ ಪುನಃ ಎದ್ದೇಳು ತಿದ ನು. ಅಂಗಾಂಗಳು ಸೆಡೆದುಕೊಂಡು ಯಾತನೆಪಡುತಿದನು. ಆದರೂ ಹೊಟ್ಟೆಬಾಕನಂತೆ ತಿಂದು ಅರ್ಧ ಡಾಲರಿಗಾಗಿ ಸದಾ ಸಿದ್ಧನಾಗಿದ್ದನು. ಪ್ರತಿ ಸಾರಿಯೂ ಹೆಚ್ಚು ಹೆಚ್ಚು ಅಂಶಗಳನ್ನು ಕಲಿಯುತ್ತಾ ಬಂದನು. ಇಷ್ಟು ಹೇಳಬಹುದು ; ಅವನು ಹುಟ್ಟು ಹೋರಾಟಗಾರ, ನಂಬಲಸಾಧ್ಯವಾದ ಪುಂಡುತನ ಅವನಲ್ಲಿದೆ. ಹೃದಯವಿಲ್ಲದ ಮಂಜುಗಡ್ಡೆ; ಕೇಳಬೇಕೇ? ಅವನು ಹತ್ತಾರು ಪದಗಳನ್ನು ಒಟ್ಟಿಗೆ ಉಸುರಿಸಿದ ಒಂದು ಸನ್ನಿವೇಶವೂ ಇಲ್ಲ. ಮರ. ಕೊಯ್ಯುವವರಂತೆ ಯಾವ ಪರಿವೆಯೂ ಇಲ್ಲದೆ ತನ್ನ ಕೆಲಸವನ್ನು ಮಾತ್ರ ಮಾಡುತ್ತಿರುತ್ತಾನೆ....” ಕಾರ್ಯದರ್ಶಿ ಹೇಳಿದನು : “ನಾನು ಅವನನ್ನು ನೋಡಿದ್ದೇನೆ. ನಿನ