ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಮಯ ಗೋಸ್ಕರ ಬೇಕಾದಷ್ಟು ಕೆಲಸಮಾಡಿದ್ದಾನೆ.” “ದೊಡ್ಡವರೆಂದು ಹೇಳಿಕೊಳ್ಳುವ ಸಣ್ಣ ಆಸಾಮಿಗಳೆಲ್ಲರನ್ನೂ ಅವನು ಎದುರಿಸಿದ್ದಾನೆ. ಅವರಿಂದ ಎಷ್ಟೋ ವಿಷಯ ತಿಳಿದುಕೊಂಡಿದ್ದಾನೆ. ಕೆಲ ವರು ಅವನ ಕೈಯಲ್ಲಿ ಸೋತಿದ್ದನ್ನು ನೋಡಿದ್ದೇನೆ. ಆದರೂ ಅವನ ಸಂಪೂರ್ಣ ಹೃದಯ ಆ ಕಡೆ ವಾಲುತ್ತಿರಲಿಲ್ಲ. ಪಂದ್ಯದಲ್ಲಿ ಸಹಜ ಆಸಕ್ತಿ ಯಿರಲಿಲ್ಲ. ಏನೋ ಹೋರಾಡಬೇಕು ಅದೊಂದು ಕೆಲಸ....” ಎಂದು ರಾಬರ್ಟ್ ಉತ್ತರಕೊಟ್ಟನು. - “ಕೆಲವು ತಿಂಗಳುಗಳಿಂದ ಸಣ್ಣ ಸಣ್ಣ ಕ್ಲಬ್ಬುಗಳಲ್ಲಿ ಹೋರಾಡುತಿದ್ದ.....” ಎಂದನು ಕೆಲ್ಲಿ. “ನಿಜ; ಹೇಗೆ ಅವನಿಗೆ ಹೊಳೆಯಿತೋ ತಿಳಿಯದು. ಇದ್ದಕ್ಕಿದ್ದಂತೆ ಅವನ ಗಮನ ಆ ಕಡೆ ಹರಿಯಿತು. ಮಿಂಚಿನ ವೇಗದಲ್ಲಿ ನುಗ್ಗಿ ಸಣ್ಣ ಪುಟ್ಟ ಸ್ಥಳೀಯರನ್ನೆಲ್ಲ ಬೀಳಿಸಿದನು. ಅವನಿಗೆ ದುಡ್ಡು ಬೇಕಾಗಿತ್ತೇನೋ. ಸ್ವಲ್ಪ ಹಣ ದೊರಕಿದ್ದರೂ, ಅವನ ಬಟ್ಟೆಗಳು ಮಾತ್ರ ಹಾಗೆಯೆ ಇದ್ದವು. ಅವನು ವಿಚಿತ್ರನಾಗಿದ್ದನು. ಅವನ ವ್ಯಾಪಾರ ಯಾರಿಗೂ ತಿಳಿಯದು. ಹೇಗೆ ಕಾಲ ವಿನಿಯೋಗ ಮಾಡುತ್ತಾನೋ ಆಶ್ಚರ್ಯ. ತನ್ನ ಕೆಲಸ ಮುಗಿದ ತಕ್ಷಣ ಹೊರಟುಹೋಗುತಿದ್ದನು ; ಪ್ರತಿದಿನದ ಬಹು ಭಾಗ ಅವನಿಗೆ ಅಜ್ಞಾತವಾಸ. ಕೆಲವು ಸಾರಿಯಂತೂ ನಾಲ್ಕಾರುವಾರಗಳು ಬರುತ್ತಲೇ ಇರಲಿಲ್ಲ. ಯಾರ ಉಪದೇಶಕ್ಕೂ ಕಿವಿಕೊಕೊಡುತ್ತಿರಲಿಲ್ಲ. ಅವನನ್ನು ಸರಿಯಾದ ವ್ಯವಸ್ಥೆಯಲ್ಲಿ ಇಡಬಲ್ಲ ವ್ಯಕ್ತಿ ಯಾರಾದರೂ ಇದ್ದಾರೆಯೇ? ಇದ್ದರೆ ಆ ಅಧಿಕಾರಿ ಒಳ್ಳೆಯ ಅದೃಷ್ಟವಂತ. ಯಾರೂ ಆ ವಿಷಯದ ಬಗ್ಗೆ ವಿವೇಚಿಸಿಲ್ಲ....ಅವನ ಜೊತೆ ವ್ಯವಹಾರಕ್ಕೆ ನಿಂತರೆ....ಎಷ್ಟು ಬೇಗ ಅವನು ದುಡ್ಡಿಗಾಗಿ ಕೈಯೊಡ್ಡ ಬಲ್ಲ ಎಂಬುದು ತಿಳಿಯುತ್ತದೆ. ಸ್ವಲ್ಪ ಕಾದುನೋಡು.... ಆ ಸಮಯಕ್ಕೆ ಸರಿಯಾಗಿ ಡ್ಯಾನಿವಾರ್ಡ್ ಬಂದಿಳಿದನು. ಜೊತೆಗೆ ಅವನ ವ್ಯವಸ್ಥಾಪಕ, ತರಬೇತುಗಾರ ಇಬ್ಬರೂ ಇದ್ದರು. ಡ್ಯಾನಿ ವಾರ್ಡ್ ಅಜೇಯನಂತೆ ಭಾವಿಸಿಕೊಂಡು ಉಲ್ಲಾಸದಿಂದ ಉಸಿರೆಳೆದನು. ಸುತ್ತಲಿಂದಲೂ ಶುಭಾಶಯಗಳ ಸುರಿಮಳೆಯಾಯಿತು. ಒಂದು ಕಡೆ ಹಾಸ್ಯ ಚಟಾಕಿ ಹಾರಿ ದರೆ, ಮತ್ತೊಂದೆಡೆ ಚಮತ್ಕಾರದ ಮಾರ್ನುಡಿ ಏಳುತಿತ್ತು. ಕೆಲವರು ಮುಗುಳುನಗೆ ಬೀರಿದರು. ಮತ್ತೆ ಕೆಲವರು ಗೊಳ್ಳೆಂದು ನಕ್ಕರು. ಹಾಗಿತ್ತು ಅವನ ಮಾರ್ಗ; ಅವನಲ್ಲಿ ಸ್ವಲ್ಪ ಮಾತ್ರ ಪ್ರಾಮಾಣಿಕತೆಯನ್ನು ಕಾಣಬಹು