ಪುಟ:ಬಾಳ ನಿಯಮ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ದಿತ್ತು, ಅವನು ಉತ್ತಮ ನಟನೆಂದು ಹೇಳಬಹುದು. ಈ ಪ್ರಪಂಚದಲ್ಲಿ ನಗು ಮುಖವೊಂದಿದ್ದರೆ ಎಲ್ಲವನ್ನೂ ಸಾಧಿಸಬಹುದೆಂಬ ತತ್ವವನ್ನು ಅರಿತಿದ್ದನು. ಆದರೆ ಒಳಹೊಕ್ಕು ನೋಡಿದರೆ ಮಾತ್ರ ಅವನ ನಿಜ ಸ್ವಭಾವ ತಿಳಿಯಬಹುದು;. ಮೊದಲೇ ತೀರ್ಮಾನಿಸಿ ಏನೋ ಉದ್ದೇಶವಿಟ್ಟು ಕಾದಾಡುವ ಮನುಷ್ಯ; ಎಲ್ಲ ಕ್ಕಿಂತ ಮೇಲಾಗಿ ಅವನು ವ್ಯಾಪಾರಸ್ಥ, ಮುಖವಾಡ ಧರಿಸುವುದರಲ್ಲಿ ಪ್ರವೀಣ. ಅವನು ಎಂಥ ಮನುಷ್ಯನೆಂಬುದು ಅವನೊಡನೆ ವ್ಯವಹಾರ ಮಾಡಿದವರಿಗೆ ಗೊತ್ತು. ವ್ಯಾಪಾರಕ್ಕೆ ಸಂಬಂಧಪಟ್ಟ ಎಲ್ಲ ಚರ್ಚೆಗಳಲ್ಲೂ ಅವನು ಇರುತ್ತಲೇ ಇದ್ದನು. ಡ್ಯಾನಿ ಹೇಳುವಂತೆ ವ್ಯವಸ್ಥಾಪಕ ಕೇಳುತಿದ್ದನು. ರಿವೆರನ ರೀತಿಯೇ ಬೇರೆ. ಅವನಲ್ಲಿ ಇಂಡಿಯನ್ ಹಾಗೂ ಸ್ಪ್ಯಾನಿಷ್ ರಕ್ತ ಹರಿಯುತಿತ್ತು. ಅಲುಗಾಡದೆ ಮಾತನಾಡದೆ ಮೂಲೆಯಲ್ಲಿ ಕುಳಿತಿದ್ದನು. ಆದರೆ ಅವನ ಕಪ್ಪು ಕಣ್ಣುಗಳು ಮಾತ್ರ ಪ್ರತಿ ಮುಖಗಳನ್ನೂ ನೋಡುತ್ತ ಎಲ್ಲವನ್ನೂ ತಿಳಿಯುತಿದ್ದವು. - “ಓ, ಈ ಆಸಾಮಿಯೊ', ಎನ್ನುತ್ತ ಡ್ಯಾನಿ ತನ್ನ ಎದುರಾಳಿಯೆಂದು ಕರೆಯಲ್ಪಟ್ಟ ರಿವೆರನನ್ನು ಒರೆಹಚ್ಚಿ ನೋಡುವವನಂತೆ ಹೇಳಿದನು. “ಸರಿ; ಏನಯ್ಯಾ ದೊಡ್ಡ ಮನುಷ್ಯ ; ಹೇಗಿದ್ದೀ....” ರಿವರ ಉತ್ತರ ಸೂಚಿಸುವ ಯಾವ ಸಂಜ್ಞೆಗಳನ್ನೂ ಮಾಡಲಿಲ್ಲ. ಕಣ್ಣುಗಳು ವಿಷಪೂರಿತವಾಗಿ ಕಿಡಿಕಾರುತಿದ್ದವು. ಗ್ರಿನ್‌ಗೋಗಳನ್ನು ಕಂಡರೆ ಅವನಿಗೆ ಆಗದು. ಈ ಗ್ರಿನ್‌ಗೋನನ್ನು ಕಂಡ ತಕ್ಷಣ ತನ್ನ ಸ್ವಭಾವಕ್ಕೆ ಮಾರಿದ ಹೆಚ್ಚಿನ ದ್ವೇಷ ಹೊರಹೊಮ್ಮಿತು. ಡ್ಯಾನಿ ಪಂದ್ಯದ ಪ್ರವರ್ತಕನಿಗೆ ದಬಾಯಿಸಿದನು. ಹಾಸ್ಯವಾಗಿ ಹೇಳಿ ದನು : “ನಾನೇನು ಈ ಮೌನ ಪ್ರಾಣಿಯೊಂದಿಗೆ ಕಾದಾಡಬೇಕೆಂದು ನಿನ್ನ ಇಷ್ಟವೋ ?” ನಗು ಕಡಿಮೆಯಾದ ಮೇಲೆ, ಮತ್ತೊಂದು ಬಾಣ ಬಿಟ್ಟನು : “ಇಂಥ ಉತ್ತಮ ಜೋಡಿಯನ್ನು ಹುಡುಕಿದಮೇಲೆ, ಲಾಸ್‌ಏಂಜಲ್ಸ್ ನಿಜ ವಾಗಿಯೂ ಗೌರವಹೊಂದಿದಂತಾಯಿತು. ಯಾವ ಶಿಶುವಿಹಾರದಿಂದ ಅವನನ್ನು ತಂದೆ....?” “ಡ್ಯಾನಿ, ನನ್ನ ಮಾತು ಕೇಳು. ಅವನು ಒಳ್ಳೆಯ ಪುಟ್ಟ ಹುಡುಗ. ಹೊರನೋಟದಷ್ಟು ಸುಲಭಸಾಧ್ಯನಂತೂ ಅಲ್ಲ....” ಎಂದು ರಾಬರ್ಟ್ ಪಕ್ಷ ವಹಿಸಿದನು. “ಆಗಲೇ ಅರ್ಧಮನೆಯಷ್ಟು ಮಾರಾಟವಾಗಿದೆ. ಡ್ಯಾನಿ, ನೀನು