ಪುಟ:ಬಾಳ ನಿಯಮ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೪೩ “ಓಹೋ, ಸರಿಯಾಗಿದೆ ರಿವರ, ನೋಡು ; ನೀನು ಎಷ್ಟಾದರೂ ಇನ್ನೂ ಪ್ರಖ್ಯಾತನಾಗಿಲ್ಲ....” ಎಂದು ರಾಬರ್ಟ್ ಹೇಳಿದನು. “ಗೇಟು ಹಣದ ಶೇಕಡ ಅರವತ್ತೈದು ಎಂದರೆ ಎಷ್ಟಾಗುತ್ತದೆ ?” ಎಂದು ರಿವೆರ ಆಗ್ರಹಮಾಡಿದನು. ಡ್ಯಾನಿ ಮಧ್ಯೆ ಬಾಯಿಹಾಕಿ, “ಹೇಗೆ ಹೇಳಲು ಸಾಧ್ಯ ? ಐದು ಸಾವಿರ ವಾಗಬಹುದು; ಇಲ್ಲವೇ ಎಂಟು ಸಾವಿರದ ತನಕ ಹೋಗಬಹುದು. ನಿನ್ನ ಭಾಗ ಸುಮಾರು ಸಾವಿರವೋ ಅಥವಾ ಸಾವಿರದ ಆರುನೂರೋ ಆಗಬಹುದು. ನನ್ನಂಥ ಹೆಸರಾಂತ ವ್ಯಕ್ತಿಯ ಕೆಳಗೆ ಬಿದ್ದು, ಅಷ್ಟು ಸಂಪಾದಿಸುವುದೆಂದರೆ ನಿಜವಾಗಿಯೂ ನಿನ್ನ ಪುಣ್ಯ, ಏನಯ್ಯಾ ಹೇಳುತ್ತೀ ?” ಎಂದನು. ರಿವೆರ ಎಲ್ಲರ ಗಮನವನ್ನೂ ಸೆಳೆದನು. “ಗೆದ್ದವನೇ ಎಲ್ಲವನ್ನೂ ತೆಗೆದುಕೊಳ್ಳುತ್ತಾನೆ” ಎಂದು ಕೊನೆಯ ತೀರ್ಮಾನ ಹೇಳಿದನು. ಸುತ್ತಲೂ ಗಂಭೀರ ಮೌನ ಆವರಿಸಿತು. “ಮಗು ಮಿಠಾಯಿ ಕೇಳುವಂತಿದೆ ...” ಎಂದು ಡ್ಯಾನಿಯ ವ್ಯವ ಸ್ಥಾಪಕ ಘೋಷಿಸಿದನು. - ಆದರೆ ಡ್ಯಾನಿ ತಲೆಯಲ್ಲಾಡಿಸಿದನು : ನಾನು ಬಹಳ ವರ್ಷಗಳಿಂದ ಪಂದ್ಯದಲ್ಲಿ ಹೋರಾಡುತಿದ್ದೇನೆ. ಈಗ ರೆಫರಿ ಅಥವಾ ಕಂಪೆನಿಯ ಬಗೆ ಯಾವ ಟೀಕೆಯನ್ನೂ ಮಾಡುತ್ತಿಲ್ಲ. ಜೂಜು ವ್ಯಾಪಾರಿಗಳನ್ನೂ ಪಿತೂರಿ ಗಾರರನ್ನೂ ನೆಚ್ಚಿಕೊಂಡು ಮಾತನಾಡಿದವನಲ್ಲ. ಆದರೆ ಇಂದಿನ ಕಾದಾಟ ನನ್ನ ಮಟ್ಟಿಗೆ ಹೇಳುವುದಾದರೆ ಅತಿ ಸಣ್ಣ ವ್ಯಾಪಾರ, ಸೋಲಲಿ, ಗೆಲ್ಲಲಿ ಎಂಬತ್ತು ನನ್ನ ವಿಭಾಗ, ಎಲವೋ ಮೆಕ್ಸಿಕನ್, ಏನು ಹೇಳುತ್ತಿ ?” ರಿವರ ತಲೆಯಲ್ಲಾಡಿಸಿದನು. ಡ್ಯಾನಿಗೆ ಕೋಪ ನೆತ್ತಿಗೇರಿತು. ಸ್ಪಷ್ಟೋಕ್ತಿಯಿಂದ ಹೇಳಿದನು. “ ಏನು ? ಕೆಟ್ಟ ಪೋರ ! ನಿನ್ನನ್ನು ಈಗಲೇ ಶಿರಚ್ಛೇದನ ಮಾಡಿ ಬಿಡುತ್ತೇನೆ.” ಅಷ್ಟು ಹೊತ್ತಿಗೆ ರಾಬರ್ಟ್ ಉರಿದು ಬೀಳುತ್ತಿರುವ ಅವರಿಬ್ಬರ ನಡುವೆ ಮಧ್ಯಸ್ಥಿಕೆ ವಹಿಸಲು ಬಂದನು.

  • * ಗೆದ್ದವನೇ ಎಲ್ಲವನ್ನೂ ತೆಗೆದುಕೊಳ್ಳುತ್ತಾನೆ ” ಎಂದು ರಿವರ ದುಮ್ಮಾನದಿಂದ ಮತ್ತೆ ಹೇಳಿದನು.