ಪುಟ:ಬಾಳ ನಿಯಮ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ “ ಅದೇಕೆ ಹೀಗೆ ಹಟ ಹಿಡಿಯುತ್ತಿರುವೆ ? ” ಎಂದನು ಡ್ಯಾನಿ, ನೇರವಾಗಿ ಉತ್ತರ ಬಂತು : “ಮತ್ತೇಕೆ ? ನಿನ್ನನ್ನು ಸೋಲಿಸಲಿಕ್ಕೆ” ಅಬ್ಬ ! ಎಂಥ ಮಾತು. ಆಗಲೇ ಡ್ಯಾನಿ ಕೋಟು ಬಿಚ್ಚಲು ಸಿದ್ದ ನಾದನು. ಸಾಧ್ಯವಾಗಲಿಲ್ಲ. ಕಡೆಗೆ ಅವನನ್ನು ಜನ ಸಂತೈಸಬೇಕಾಯಿತು. ಎಲ್ಲರಿಗೂ ಅವನ ಬಗ್ಗೆ ಕನಿಕರ, ರಿವರ ಮಾತ್ರ ಒಬ್ಬಂಟಿಗನಾಗಿ ನಿಂತಿದ್ದನು. “ ನೀನು ಮೂರ್ಖನೇ ಸರಿ, ನಿನ್ನನ್ನು ಪರಿಗಣಿಸುವುದೂ ಮೂರ್ಖತನ. ಹಿಂದಿನ ತಿಂಗಳುಗಳಲ್ಲಿ ನೀನು ಮಾಡುತ್ತಿದ್ದ ಸಾಧನೆ ನಮ್ಮೆಲ್ಲರಿಗೂ ಗೊತ್ತಿದೆ. ಸಣ್ಣ ಪುಟ್ಟ ಸ್ಥಳೀಯರನ್ನು ಬೀಳಿಸುವುದು ದೊಡ್ಡ ಕೆಲಸವಲ್ಲ. ಆದರೆ ಡ್ಯಾನಿಯೇ ಒಂದು ವರ್ಗ ಈ ಹೋರಾಟದ ಅನಂತರ ಅವನು ಛಾಂಪಿಯನ್ ಶಿಪ್ಪಿಗೆ ನಿಲ್ಲುತ್ತಾನೆ. ನೀನಾದರೋ ಅಪ್ರಸಿದ್ಧ. ಲಾಸ್ ಏಂಜಲ್ಸ್ ಬಿಟ್ಟು ನಿನ್ನ ಹೆಸರನ್ನು ಯಾವ ಸ್ಥಳದವರು ಕೇಳಿದ್ದಾರೆ ?....” ಎಂದು ಕೆಲ್ಲಿ ಮಾತಿಗೆ ಮಾತು ಬೆಳೆಸಿದನು. ರಿವರ ತಿರಸ್ಕಾರದಿಂದ ಭುಜ ಹಾರಿಸಿ, “ಎಲ್ಲರೂ ಕೇಳಿಯೇ ಕೇಳು ತಾರೆ. ಈಗಲ್ಲದಿದ್ದರೂ ಈ ಕಾದಾಟವಾದ ಮೇಲೆ !....” ಎಂದನು. ಡ್ಯಾನಿ ಥಟ್ಟನೆ ಉಸುರಿದನು-“ಏನು ನನ್ನನ್ನು ಕ್ಷಣದಲ್ಲಿ ಸೋಲಿಸು ಬಹುದೆಂದು ಭಾವಿಸುವೆಯಾ ?” ರಿವರ ತಲೆಯಾಡಿಸಿದನು. “ಸಕಾರಣವಾಗಿ ಯೋಚಿಸಿನೋಡು. ಪ್ರಚಾರ ಮಾಡಿದುದನ್ನು ನೆನೆದುಕೊ” ಎಂದು ಕೆಲ್ಲಿ ಕೂಗಾಡಿದನು. ರಿವೆರನ ಉತ್ತರ; “ನನಗೆ ಬೇಕಾದುದು ಹಣ.” “ಸಾವಿರ ವರ್ಷ ಹೋರಾಡಿದರೂ ನನ್ನನ್ನು ಜಯಿಸಲಾರೆ.” ಎಂದು ಡ್ಯಾನಿ ಖಡಾಖಂಡಿತವಾಗಿ ಹೇಳಿಬಿಟ್ಟನು. ರಿವೆರ ಸರಿಯಾದ ಪ್ರತ್ಯುತ್ತರವನ್ನೇ ಕೊಟ್ಟನು : “ಹಾಗಿದ್ದರೆ ಏತ ಕಾಗಿ ಸುಮ್ಮನಿರುವೆ? ದುಡ್ಡು ಅಷ್ಟು ಸುಲಭವಾಗಿ ದೊರುಕುವುದಿದ್ದರೆ ಅದರ ಹಿಂದೆಯೇ ಓಡಬಹುದಲ್ಲ ?” “ಹಾಗೋ, ನನಗೆ ಉಪಕಾರ ಮಾಡುತ್ತೀಯೋ ! ಬಾ ರಂಗಸ್ಥಳಕ್ಕೆ. ಈ ರೀತಿ ಅಣಕಿಸಿದರೆ ನಿನ್ನನ್ನು ಭೂಗತಮಾಡಿಬಿಡುತ್ತೇನೆ. ತಿಳಿಯಿತೋ, ಪೋರ? ಕೆಲ್ಲಿ, ಏಕೆ ತಡಮಾಡುತ್ತೀಯೆ ? ಗೆದ್ದವನು ಎಲ್ಲವನ್ನು ತೆಗೆದುಕೊಳ್ಳುವ ಎಂಬ ಕಟ್ಟಳೆಯನ್ನು ಬರಿ. ಕ್ರೀಡಾ ಕಾಲಂ'ಗಳಲ್ಲಿ ಪ್ರಚಾರಮಾಡು, ಇದು.