ಪುಟ:ಬಾಳ ನಿಯಮ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ಛಲದಿಂದ ನಡೆಯುವ ಕಾದಾಟ. ಇದರ ಕೆಲವಂಶಗಳನ್ನಾದರೂ ಉತ್ಸಾಹ ದಿಂದಿರುವ ಈ ಕಿರುಗೂಸು ಕಾಣಲಿ.” ಎಂದು ಡ್ಯಾನಿ ದೃಢ ನಿಶ್ಚಯ ಮಾಡಿ ಕೂಗಾಡಿದನು. IV ರಿವೆರ ರಂಗದೊಳಗೆ ಪ್ರವೇಶಿಸಿದನು. ಆ ಕಡೆ ಯಾರ ದೃಷ್ಟಿಯೂ ಸುಳಿಯಲಿಲ್ಲ. ಅರ್ಧ ಮನಸ್ಸಿನ ಕೈ ಚಪ್ಪಾಳೆ ಸಡಗರವಿಲ್ಲದೆ ಅವನನ್ನು ಸ್ವಾಗತಿಸಿತು. ಸಭಿಕರಿಗೆ ಅವನಲ್ಲಿ ನಂಬಿಕೆಯೇ ಇರಲಿಲ್ಲ. ಡ್ಯಾನಿಯಂಥ ದೊಡ್ಡ ವ್ಯಕ್ತಿಯ ಕೈಯಲ್ಲಿ ಕೊಲೆಗಾಗಿ ಕಳಿಸಲ್ಪಟ್ಟ ಕುರಿಮರಿಯಂತೆ ಅವನು ಕಂಡನು. ಇಡೀ ಸಭೆ ನಿರಾಶೆಗೊಳ್ಳಲು ಮತ್ತೊಂದು ಕಾರಣವಿತ್ತು. ಡ್ಯಾನಿ ವಾರ್ಡ್ ಮತ್ತು ಬಿಲ್ಲಿ ಕಾರ್ಥೆ ಇವರಿಬ್ಬರ ನಡುವೆ ನಡೆಯಬಹುದಾಗಿದ್ದ ರಭಸದ ಹೋರಾಟಕ್ಕೆ ಜನ ಹಾತೊರೆಯುತಿದ್ದರು. ಆದರೆ ಈಗ ಈ ಬಡ ಜಟ್ಟಿಯ ಪ್ರದರ್ಶನ ನೋಡಬೇಕಾಯಿತು. ಬಾಜಿ ಕಟ್ಟುವ ರೀತಿಯೇ ಬದಲಾಯಿಸಿತು. ಡ್ಯಾನಿಯ ಹೆಸರಿನಲ್ಲಿ ಒಂದಕ್ಕೆ ಎರಡರಷ್ಟು ಮೂರರಷ್ಟು ಹಣವೊಡ್ಡಿದರು. * ಮೆಕ್ಸಿಕದ ಹುಡುಗನು ತನ್ನ ಮೂಲೆಯಲ್ಲಿ ಕುಳಿತು ಕಾಯುತಿದ್ದನು. ಮೆಲ್ಲಗೆ ನಿಮಿಷಗಳು ಉರುಳುತ್ತಿದ್ದುವು. ಡ್ಯಾನಿ ಉದ್ದೇಶಪೂರ್ವಕವಾಗಿ ಅವನನ್ನು ಕಾಯುವಂತೆ ಮಾಡಿದ್ದನು. ಅದೊಂದು ಹಳೆಯ ಉಪಾಯ ; ಕುಳಿತ ಕಲ್ಲೆದೆಯ ಹೊಸ ಯುವಕ ಹೋರಾಳುಗಳನ್ನು ಹೆದರಿಸುವ ಮಾರ್ಗ. ಸುತ್ತಲೂ ಹೊಗೆಬತ್ತಿ ಸೇದುತ್ತಿದ್ದ ಸಭಿಕರನ್ನು ಒಂದೇ ಸಮನೆ ನೋಡುತ್ತಿದ್ದರೆ, ತಮ್ಮಲ್ಲಿ ತಾವೇ ಭೀತರಾಗುವುದಿಲ್ಲವೇ? ಆದರೆ ಅಂಥ ಉಪಾಯ ರಿವರನ ವಿಷಯದಲ್ಲಿ ಯಾವ ಪರಿಣಾಮವನ್ನೂ ಮಾಡಲಿಲ್ಲ. ರಾಬರ್ಟ್ ಹೇಳಿದಂತೆ ರಿವೆರನ ನರವ್ಯೂಹ ಅಷ್ಟು ಅಭೇಧ್ಯವಾಗಿತ್ತು. ತನ್ನ ಮೂಲೆಯಲ್ಲಿ ಆಗಲೇ ಸೋಲುಗಾಳಿಯ ವಾತಾವರಣವಿದ್ದರೂ, ಅವನನ್ನು ಅಲುಗಿಸಲು ಸಾಧ್ಯವಿರ ಲಿಲ್ಲ. ಅಪರಿಚಿತ ಗ್ರಿನ್‌ಗೋಗಳು ಅವನ ಕೈ ಹಿಡಿದಿದ್ದರು. ಅಬ್ಬ! ಅವರು ಎಷ್ಟು ಅನಾಮಧೆಯರು? ಕಾದಾಟದ ಕ್ಲಬ್ಬುಗಳಿಂದ ಕೊಚ್ಚಿಕೊಂಡು ಬಂದ ಕೊಳಕುರಾಶಿಯಂತಿದ್ದರು. ಅವರಿಗೆ ಗೌರವ, ಯೋಗ್ಯತೆ ಒಂದೂ ಇರಲಿಲ್ಲ. ತಮ್ಮ ಮೂಲೆಯಲ್ಲಿ ಕುಳಿತಿರುವವನು ಹೇಗಾದರೂ ಸೋಲುತ್ತಾನೆ-ಎಂಬ ನಿಶ್ಚಯದಿಂದ ಅವರು ಉದಾಸೀನರಾಗಿದ್ದರು.

  • ಸೈಡರ್ ಹೆಗರ್ಟ ಎಂಬುವನು ತನ್ನ ಕಡೆಯ ಮುಖ್ಯ ಸಹಾಯಕ ನಾಗಿದ್ದನು.

10