ಪುಟ:ಬಾಳ ನಿಯಮ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೪೭ ಸಲು ಹತ್ತಾರು ಘಂಟೆಗಳ ಶಿಷ್ನಲ್ಲಿ ಸಿಕ್ಕಿ ಒದ್ದಾಡುತಿದ್ದ ಏಳು ಎಂಟು ವಯಸ್ಸಿನ ಮಕ್ಕಳು ಹಾಗೂ ಬಣ್ಣ ಹಾಕುವ ಕೋಣೆಯಲ್ಲಿ ತಿರುಗಾಡುವ ಶವ ಗಳಂತೆ ಕೆಲಸಮಾಡುತ್ತಿದ್ದವರು, ತನ್ನ ಸ್ಮತಿಪಟದಲ್ಲಿ ಗೋಚರಿಸಿದರು. ತನ್ನ ತಂದೆ ಹೇಳುತ್ತಿರಲಿಲ್ಲವೇ? ಬಣ್ಣದ ಕೋಣೆಯೆಂದರೆ ಆತ್ಮಹತ್ಯದ ಬಿಲಗಳು', ಒಂದು ವರ್ಷ ಅಲ್ಲಿ ಕೆಲಸ ಮಾಡಿದರೆ ಸಾಕು, ಸಾವನ್ನು ಸುಖವಾಗಿ ಅಪ್ಪಿಕೊಳ್ಳ ಬಹುದು. ಸಣ್ಣ ಮನೆ ಎದುರಿಗೆ ನಿಂತಂತಿದೆ. ಅಲ್ಲಿ ತನ್ನ ತಾಯಿ ಒರಟು ವಿಧಾನ ಗಳನ್ನು ಅನುಸರಿಸಿ ಮೈಮುರಿದು ಮನೆಯ ಕೆಲಸ ಮಾಡುತ್ತಿದ್ದಳು. ಆದರೂ ಅವಕಾಶಮಾಡಿಕೊಂಡು ತನ್ನನ್ನು ಮುದ್ದಾಡಿ ಪ್ರೀತಿಸುತ್ತಿದ್ದಳು. ತಂದೆಯ ನೆನಪು ! ಉದ್ದವಾದ ಭರ್ಜರಿ ಖಾಸೆಯೊಂದೇ ಸಾಕು. ಆತ ಎಲ್ಲ ಮನುಷ್ಯರಿ ಗಿಂತಲೂ ಮೇಲ್ಮಟ್ಟದಲ್ಲಿದ್ದನು. ಎಲ್ಲರ ವಿಶ್ವಾಸವನ್ನೂ ದೊರಕಿಸಿಕೊಂಡಿದ್ದನು. ಹಾಗೆಯೇ ಆತನ ಉದಾರ ಹೃದಯದಲ್ಲಿ ಹೆಂಡತಿ ಮಕ್ಕಳಿಗೂ ಪ್ರೀತಿ ನೌಹಾರ್ದದ ಸ್ಥಾನಗಳಿದ್ದುವು.... ಆ ಕಾಲದಲ್ಲಿ ತನ್ನನು ಫಲಿಸಿ ರಿವೆ ಎಂದು ಕರೆಯುತ್ತಿರಲಿಲ್ಲ. ಫರ್‌ನಾಂಡಿಸ್‌ ಎಂಬುದು ತನ್ನ ವಂಶದ ಹೆಸರಾಗಿತ್ತು. ಬರಬರುತ್ತ ಆ ಹೆಸರು ಪೋಲೀಸು ಅಧಿಕಾರಿಗಳ ದ್ವೇಷಕ್ಕೆ ಕಾರಣವಾಯಿತು. ಆದ್ದರಿಂದಲೇ ತಾನು ಹೆಸರು ಬದಲಾಯಿಸಿಕೊಂಡದ್ದು ....

  • ಸದಾ ಹಸನ್ಮುಖಿಯಾಗಿದ್ದ ಬಡಾ ಅನಾಮಿಯೆಂದರೆ ಜೋಕ್ಸಿನ್ ಫರ್‌ನಾಂಡಿಸ್! ರಿವೆರನ ದೃಷ್ಟಿಯಲ್ಲಿ ಅವನಿಗೆ ದೊಡ್ಡ ಸ್ಟಾನ. ಆಗ ಅವ ನನ್ನು ಅರ್ಥಮಾಡಿಕೊಳ್ಳಲು ಅನಾಧ್ಯವಾಗಿದ್ದರೂ, ಈಗ ಎಲ್ಲವೂ ತಿಳಿಯು ಇದೆ. ಜೋಕ್ರಿನ್ನನ ಕಾರ್ಯಚಟುವಟಿಕೆಗಳ ನೆನಪಾಗುತ್ತದೆ-ಸಣ್ಣ ಮುದ್ರಣಾಲಯದಲ್ಲಿ ಮೊಳೆ ಜೋಡಿಸುವುದು ಅಥವಾ ಆತುರದಲ್ಲಿ ಲೆಕ್ಕವಿಲ್ಲ ದಷ್ಟು ಕಾಗದಗಳನ್ನು ಗೀಚುವುದು , ಕೆಲವು ಸಾರಿ ಅವನ ಕೈ ನಡುಗುತಿತ್ತು ; ಆತನ ಡೆನ್ನು ತುಂಬಿದ್ದ ವಸ್ತುಗಳು ಓರಣವಿಲ್ಲವೆ ಚೆಲ್ಲಾ ಪಲ್ಲಿಯಾಗಿದ್ದವು.... ರಾತ್ರಿಯ ಹೊತ್ತು ಕಳ್ಳರಂತೆ ಕೂಲಿಗಾರರು ತನ್ನ ತಂದೆಯನ್ನು ಭೇಟಿಮಾಡಲು ಬರುತಿದ್ದರು. ಬಹು ಹೊತ್ತು ಮಾತನಾಡುತಿದ್ದರು. ಆಗ ಸಣ್ಣವನಾಗಿದ್ದ ತಾನು ಮಲಗದೆ ಮೂಲೆಯಲ್ಲಿ ಕುಳಿತು, ಎಷ್ಟೋ ಸಾರಿ ಸಂಭಾಷಣೆಗಳನ್ನು ಕೇಳಿಸಿಕೊಳ್ಳುತ್ತಿರಲಿಲ್ಲವೇ ? ...

ಸೈಡರ್‌ ಹೆಗರ್ಟಯ ಮಾತು ದೂರದಿಂದ ಬಂದಂತೆ ರಿವರನ ಕಿವಿಗೆ ಕೇಳಿಸಿತು: “ಪ್ರಾರಂಭದಲ್ಲೇ ನೆಲದ ಮೇಲೆ ಕೆಳಗೆ ನುಸುಳುವುದು ಬೇಡ. ಸೂಚನೆಗಳನ್ನು ಸರಿಯಾಗಿ ಗಮನಿಸು, ಒಂದಾದರೂ ಹೊಡೆತಕ್ಕೆ ಸಿಕ್ಕಿ ನಿನ್ನ