ಪುಟ:ಬಾಳ ನಿಯಮ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾಳ ನಿಮಯ ಪ್ಯಾದೆಯನ್ನು ಗಿಟ್ಟಿಸು....” ಹತ್ತು ನಿಮಿಷವಾಯಿತು. ರಿವೆರ ತನ್ನ ಮೂಲೆಯಲ್ಲೇ ಕುಳಿತಿದ್ದನು. ಡ್ಯಾನಿ ರಂಗಕ್ಕೆ ಬರುವ ಸಂಭವ ಕಾಣಲಿಲ್ಲ. ಅವನು ಕಾಲ ತಳ್ಳುವಂಥ ಉಪಾಯವನ್ನು ಎಲ್ಲಿಯ ತನಕ ಸಾಧಿಸುತ್ತಾನೋ ಗೊತ್ತಿಲ್ಲ. ಆ ಅವಕಾಶದಲ್ಲೇ ರಿವರನಿಗೆ ಮತ್ತಷ್ಟು ಹಿಂದಿನ ನೆನಪುಗಳು ಬರತೊಡಗಿದವು..... ಬೂದಿ ಮುಚ್ಚಿದ ಕೆಂಡ ಪುನಃ ಉರಿಯುವಂತಾಯಿತು. ತಾನು ಕಂಡ ಮುಷ್ಕರಗಳು ಭಯಂಕರವಾಗಿದ್ದವು. ಅದಕ್ಕೆ ಪ್ರತಿಯಾಗಿ ಕೂಲಿಗಾರರನ್ನೇ ಬಹಿಷ್ಕರಿಸುವ ಏರ್ಪಾಟೂ ನಡೆದಿತ್ತು ; ರಯೋ ಬ್ಲಾನ್ ಕೋದ ಕೂಲಿಯಾಳುಗಳು ಪ್ರೋಬ್ಲಾದ ಪುಂಡರೊಡನೆ ಸಹಕರಿಸಿದ್ದೇ ಮುಖ್ಯ ಕಾರಣವೆಂದು ಯಜಮಾನರು ಘೋಷಿಸಿದರು. ಹಸಿವಿನ ಬಾಧೆ ಹೇಳತೀರದು. ಬೆಟ್ಟಗಳ ಮೇಲೆಲ್ಲಾ ಹಾದು, ಕೈಗೆ ಸಿಕ್ಕಿದ್ದನ್ನು ಗಬಕ್ಕನೆ ತಿಂದಾಗ, ಹೊಟ್ಟೆಯಲ್ಲಿ ವಾಕರಿಕೆ ಬಂದು ನರಳಬೇಕಾಯಿತು. ಕಂಪನಿಯ ಹಿಂಭಾಗದಲ್ಲಿ ಬೇಕಾದಷ್ಟು ಜಾಗವಿದ್ದರೂ ಪ್ರಯೋಜನವಿರಲಿಲ್ಲ. ಜನರಲ್ ರೋಸೆಲಿಯೊ, ಮಾರ್ಟಿನೆಸ್, ಪೊರ್‌ಫಿರಿಯೋ ಮುಂತಾದ ಡಿಯಾಸನ ಸೈನಿಕರು ಸಾಮಾನ್ಯ ರಲ್ಲ. ಮೃತ್ಯುವನ್ನು ಆಹ್ವಾನಿಸುವಂತೆ ರೈಫಲ್ಗಳು ಒಂದೇ ಸಮನೆ ಹಾರಿ ಸಲ್ಪಟ್ಟವು. ಕೂಲಿಕಾರರ ತಪ್ಪುಗಳು ಅವರವರ ರಕ್ತದಿಂದಲೇ ಪುನಃ ಸಾರಿ ಸಲ್ಪಟ್ಟವು. ಅಬ್ಬ! ಆ ರಾತ್ರಿ! ವಿಸ್ತಾರವಾದ ಬಂಡಿಗಳ ಮೇಲೆ ಶವಗಳನ್ನು ಹೇರಿಸಿದ್ದರು ; ವೆರಾಕ್ರನ್ಗೆ ರವಾನಿಸಿದರು ; ಅಲ್ಲಿ ಸಮುದ್ರ ಕೊಲ್ಲಿಯ ಷಾರ್ಕ್ ಮಾನುಗಳಿಗೆ ಒಳ್ಳೆಯ ಆಹಾರ ಸಿಕ್ಕಿದಂತಾಯಿತು. ತನ್ನ ತಂದೆ ತಾಯಿಗಳು ಸತ್ತ ರೀತಿಯ ಘೋರವಾಗಿತ್ತು. ದೊಡ್ಡ ರಾಶಿಯನ್ನು ತಡಕಿದಾಗ ನಗ್ನವಾಗಿ ವಿಕಾರಗೊಂಡಿದ್ದ ಎರಡು ಶವಗಳು ಕಂಡವು. ತನ್ನ ತಾಯಿಯಿದ್ದ ಸ್ಥಿತಿ ಚೆನ್ನಾಗಿ ಜ್ಞಾಪಕವಿದೆ- ದೇಹವನ್ನು ಆರು ಇತರ ಶರೀರಗಳು ಅದುಮಿದ್ದವು ; ಮುಖ ಮಾತ್ರ ಹೊರಕ್ಕೆ ಚಾಚಿತ್ತು. ಮತ್ತೆ ಡಿಯಾಸ್ ಸೈನಿಕರ ರೈಫಲ್‌ಗಳು ಶಬ್ದ ಮಾಡಿದವು. ಆಗ ತಾನು ನೆಲಕ್ಕೆ ಕುಸಿದು, ಬೇಟೆಗೆ ಸಿಗದೆ ಓಡುವ ಪ್ರಾಣಿಯಂತೆ, ನುಸುಳಿಕೊಂಡು ಬರಲಿಲ್ಲವೇ ? ಸಮುದ್ರವು ಭೋರ್ಗರೆಯುವಂತೆ ಮೇಲೆ ಬಿದ್ದ ಜನರ ಕೂಗಾಟ ರಿವೆರನನ್ನು ಎಚ್ಚರಿಸಿತು. ಡ್ಯಾನಿ ವಾರ್ಡ್ ಬರುತ್ತಿದ್ದುದನ್ನು ಕಂಡನು; ಅವನ ಹಿಂದೆ ತರಬೇತುಗಾರರ ಮತ್ತು ಸಹಾಯಕರ ಪರಿವಾರವೇ ಇತ್ತು. ಡ್ಯಾನಿ ಮಧ್ಯ ಸ್ಥಳವನ್ನು ಪ್ರವೇಶಿಸಿದಾಗ ಇಡೀ ಜನ ಸಮುದಾಯ ಜನಪ್ರಿಯ ವೀರನನ್ನು ಅಟ್ಟಹಾಸದಿಂದ ಸ್ವಾಗತಿಸಿತು. ಅವನು ಗೆಲ್ಲುವುದರಲ್ಲಿ ಯಾವ