ಪುಟ:ಬಾಳ ನಿಯಮ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೪೯ ಸಂಶಯವೂ ಇಲ್ಲವೆಂದು ಜನ ಡ್ಯಾನಿಯ ಹೆಸರನ್ನು ಮತ್ತೆ ಮತ್ತೆ ಘೋಷಿಸಿದರು. ಡ್ಯಾನಿ ಉಲ್ಲಾಸದಿಂದ ಹಗ್ಗಗಳನ್ನು ಹಾದು ಮಲ್ಲ ರಂಗಕ್ಕಿಳಿದನು. ಎಲ್ಲೆಲ್ಲಿ ನೋಡಿದರೂ ಕೊನೆ ಮೊದಲಿಲ್ಲದ ಹಸನ್ಮುಖಿಗಳು; ಅವರನ್ನು ತೃಪ್ತಿಪಡಿಸಲೋ ಎಂಬಂತೆ ಡ್ಯಾನಿ ನಾನಾ ರೀತಿಯ ಮುಖ ಭಂಗಿಗಳಿಂದ ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. ಅವನಷ್ಟು ಸರಸಿ ಯಾದ ಹೋರಾಳುಗಳು ಸಿಗಲಾರರು. ಆತನ ಒಳ್ಳೆಯ ಗುಣಗಳೂ, ಸ್ನೇಹಪರ ಭಾವನೆಗಳೂ ಮುಖದಲ್ಲೇ ಸೂಚಿತವಾಗಿದ್ದುವು. ಕ್ಷಣ ಕ್ಷಣಕ್ಕೂ ಅವು ಎದ್ದು ಕಾಣುತಿದ್ದುವು. ಎಲ್ಲರೂ ಅವನ ಪರಿಚಯಸ್ಥರೇ ! ಹಗ್ಗದ ಹೊರಗೆ ಕೈ ಚಾಚಿ ಸ್ನೇಹಿತರ ಕೈ ಕುಲುಕಿದನು. ಮಾತು ಮಾತಿಗೆ ಹಾಸ್ಯದ ಹೊನಲನ್ನೇ ಹರಿಸಿದನು. ದೂರವಿದ್ದ ಜನ ಸಂತೋಷವನ್ನು ತಡೆಯಲಾರದೆ, ಜೋರಾಗಿ ಅರಚುತಿದ್ದರು : " ಓ ಡ್ಯಾನಿ ! ನಮ್ಮ ಡ್ಯಾನಿ ! ” ಆ ಜಯಘೋಷ ನಿಲ್ಲ ಬೇಕಾದರೆ ಐದು ನಿಮಿಷವಾಯಿತು. ರಿವರನನ್ನು ಕೇಳುವವರೇ ಇಲ್ಲ. ಸಭಿಕರು ಅವನನ್ನು ಲಕ್ಷಕ್ಕೆ ತೆಗೆದುಕೊಂಡಿರಲಿಲ್ಲ. ಚೆನ್ನಾಗಿ ತಿಂದು ಕೊಬ್ಬಿದ್ದ ಸೈಡರ್ ಹೆಗರ್ಟ, ರಿವೆರನ ಹತ್ತಿರ ಮುಖ ಚಾಚಿ ಎಚ್ಚರಿಕೆಯಿತ್ತನು ; “ ಹೆದರಬೇಡ. ಹಿಂದೆ ಕೊಟ್ಟ ಸೂಚನೆಗಳನ್ನು ಜ್ಞಾಪಕದಲ್ಲಿಟ್ಟುಕೊ ಅಂತೂ ಕಡೆಯ ತನಕ ಹೋರಾಡಬೇಕು. ನೀನೇನಾದರು ಆಗಾಗ ಕೆಳಕ್ಕೆ ಬಿದ್ದರೆ, ಡ್ರೆಸಿಂಗ್ ರೂಮಿನಲ್ಲಿ ನಾವೇ ಇರುತ್ತೇವೆ ! ಚುರುಕಿ ನೇಟು ಕೊಟ್ಟು ಮತ್ತೆ ಏಳಿಸಲು ನಮಗೆ ಅವಕಾಶಕೊಟ್ಟಿದ್ದಾರೆ. ಗೊತ್ತಾಯಿತೋ? ಒಟ್ಟಿನಲ್ಲಿ ನೀನು ವೀರಾವೇಶದಿಂದ ಕಾದಾಡಬೇಕು...” ಡ್ಯಾನಿವಾರ್ಡ್ ಮಧ್ಯರೇಖೆಯನ್ನು ದಾಟಿದಾಗ, ಜನ ಒಂದೇ ಸಮನೆ ಚಪ್ಪಾಳೆ ತಟ್ಟಲು ಆರಂಭಿಸಿದರು. ಅವನು ಮುಂದಕ್ಕೆ ಬಗ್ಗಿ ರಿವೆರನ ಬಲಗೈ ಯನ್ನು ತನ್ನ ಎರಡು ಕೈಗಳಲ್ಲೂ ಹಿಡಿದುಕೊಂಡು, ಆವೇಗಪರ ಸೌಹಾರ್ದ ದಿಂದ ಕುಲುಕಿದನು. ಮುಗುಳುನಗೆ ಸೂಸುತಿದ್ದ ಡ್ಯಾನಿಯ ಮುಖ ರಿವರನ ಹತ್ತಿರ ಬಾಗಿತ್ತು. ಅಬ್ಬ ! ಸೋದರ ಪ್ರೇಮದಿಂದ ಎದುರಾಳಿಯನ್ನು ನೋಡು ತಿದ್ದಾನೆ; ಡ್ಯಾನಿಯಲ್ಲಿ ನಿಜವಾಗಿಯೂ ಆಟಗಾರನ ಸ್ಫೂರ್ತಿಯೂ ಹೊಂದಾಣಿ ಕೆಯೂ ಅಡಗಿವೆ ಎಂದು ಜನ ತಿಳಿದು ಮತ್ತಷ್ಟು ಜೋರಾಗಿ ಡ್ಯಾನಿಯನ್ನು ಹೊಗಳಿದರು. ಡ್ಯಾನಿಯ ತುಟಿಗಳು ಅಲುಗಾಡಿದವು. ಹೊರಬಂದ ಶಬ್ದ ಕೇಳಿಸಲಿಲ್ಲ;