ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೦ ಬಾಳ ನಿಯಮ ಆದರೂ ಅವು ದಯಾಪರ ವಾಕ್ಯಗಳೇ ಇರಬೇಕೆಂದು ಸಭಿಕರು ನಿರ್ಧರಿಸಿ ಪುನಃ ಹರ್ಷಧ್ವನಿಗೈದರು. ಮೆಲ್ಲಗೆ ಹೇಳಿದ ಆ ಮಾತುಗಳು ರಿವರನಿಗೆ ಮಾತ್ರ ಸ್ಪಷ್ಟವಾಗಿ ಕೇಳಿಸಿತು ; “ ಎಲವೋ ಮೆಕ್ಸಿಕದ ಚಿಕ್ಕಿಲಿಯೇ ! ನಿನ್ನ ಮತ್ಸರದ ಮನೋ ಭಾವವನ್ನು ಮನಸಾರೆ ಹೊಡೆದಟ್ಟುತ್ತೇನೆ.....” . ಇಂಥ ಬೆದರಿಕೆಯ ಮಾತು ಡ್ಯಾನಿಯ ಹುಸಿನಗುವಿನಲ್ಲಿ ತುಟಿಗಳ ಮಧ್ಯ ಬುಸುಗುಟ್ಟಿತು ! ರಿವೆರ ಚಲಿಸಲಿಲ್ಲ. ಎದ್ದೇಳಲೂ ಇಲ್ಲ, ಬರಿಯ ಕಣ್ಣುಗಳಿಂದಲೇ ದೇಶಕಾರಿದನು. “ಏಳಯ್ಯಾ, ಎದ್ದೇಳೋ ಕುನ್ನಿ ! ” ಎಂದು ಹಗ್ಗದ ಹಿಂದೆ ಕುಳಿತಿದ್ದ ಯಾವನೋ ಒಬ್ಬ ಕೂಗಿಕೊಂಡ. ರಿವೆರನಲ್ಲಿ ಆಟಗಾರನ ಸ್ವಭಾವವೇ ಇಲ್ಲವೆಂದು ಜನ ತಿರಸ್ಕಾರ ಸೂಚಕ ಧನಿಗಳಿಂದ ಅಪಹಾಸ್ಯ ಮಾಡಿದರು. ಆದರೂ ರಿನೆರ ನಿಶ್ಚಲನಾಗಿದ್ದನು. ಡ್ಯಾನಿ ಕೈ ಕುಲಕಿದ ಮೇಲೆ, ಅಖಾಡ ರಂಗದಿಂದ ಹಿಂದಕ್ಕೆ ತೆರಳಿದನು. ಅಗಲೂ ಜನ ಹೊಗಳಿಕೆಯ ಕರತಾಡನ ಮಾಡಿದರು. ಅವನು ಮೇಲು ಬಟ್ಟೆಯನ್ನು ಬಿಚ್ಚಿದಾಗ, ಸಭಿಕರೆಲ್ಲ ಎದ್ದು * ಅಬ್ಬಾ ! ' ' ಏನಿದು!' ಮುಂತಾದ ಸಂತೋಷ ಸೂಚಕ ಶಬ್ದಗಳನ್ನು ಹೇಳಿಕೊಳ್ಳುತ್ತಾ ಕುಣಿದಾಡಿದರು. ಡ್ಯಾನಿಯ ದೇಹ ಆರೋಗ್ಯ ಬಲದಿಂದ ಪರಿಪುಷ್ಟವಾಗಿತ್ತು. ಆತನ ಚರ್ಮ ಹೆಂಗಸಿನ ಚರ್ಮದಂತೆ ಬಿಳುಪಾಗಿಯೂ ಮೃದುವಾಗಿಯೂ ಇತ್ತು. ಚಿತ್ತಾಕರ್ಷಕ ಬೆಡಗಿನ ಹಿಂದೆ ಸ್ಥಿತಿಸ್ಥಾಪಕ ಶಕ್ತಿಯೂ ಅಡಗಿತ್ತು. ಎಷ್ಟೋ ಕಾದಾಟಗಳಲ್ಲಿ ಆ ಶಕ್ತಿಯ ಸಮರ್ಥನೆಯನ್ನೂ ತೋರ್ಪಡಿಸಿದ್ದನು. ದೇಹ ವಿಕಾಸಕ್ಕಾಗಿ ಮಾಸಲಾದ ಎಲ್ಲ ಪತ್ರಿಕೆಗಳಲ್ಲೂ ಡ್ಯಾನಿಯ ಭಾವಚಿತ್ರ ಬರುತ್ತಲೇ ಇತ್ತು.

  • ಸೈಡರ್ ಹೆಗರ್ಟ ರಿವೆರನ ಬಟ್ಟೆ ತೆಗೆಯಲು ಬಂದನು. ಸೈಟ್ಟರನ್ನು ತಲೆಯ ಮೇಲಕ್ಕೆಳೆದು ಬಿಚ್ಚಿದನು. ಜನ ಏಕೊ ಏನೊ; ಆಸಮ್ಮತಿ ಸೂಚಿಸುವಂತೆ ಮುಲುಕುತ್ತಿದ್ದರು. ರಿವರನ ಶ್ಯಾಮಲ ವರ್ಣದ ಶರೀರ ತುಂಬಾ ಸಣಕಲಾಗಿ ಕಂಡಿತು. ಬರಿಯ ಮಾಂಸಖಂಡಗಳಿದ್ದರೆ ಏನು ಪ್ರಯೋಜನ ? ಎದುರಾಟದಂತೆ ಅವು ಆಡಂಬರದ ಪ್ರದರ್ಶನವನ್ನು ನೀಡಲಿಲ್ಲ. ಆದರೆ ಅವನ ಎದೆಗಾರಿಕೆಯ ಗೂಢ ಸ್ಥಳ ಸಭಿಕರ ಗಮನಕ್ಕೆ ಬರಲಿಲ್ಲ. ಹಾಗೆಯೆ ರಿವರನ ಒರಟುತನವಾಗಲೀ , ನರವ್ಯೂಹದ ಸೂಕ್ಷರಚನೆಯಾಗಲಿ