ಪುಟ:ಬಾಳ ನಿಯಮ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೫೧ ಯಾರಿಗೂ ತಿಳಿಯದು. ಎಷ್ಟಾದರೂ ಅವನು ಹದಿನೆಂಟು ವರ್ಷದ ಹುಡುಗ; ಅಂದಮೇಲೆ ಗೊತ್ತೇ ಇದೆ ಎಂದು ಜನ ಉದಾಸೀನರಾಗಿದ್ದರು. ಡ್ಯಾನಿಯ ವಿಷಯವೇ ಬೇರೆ; ಅವನು ಇಪ್ಪತ್ತುನಾಲ್ಕು ವರ್ಷದವನು; ನಿಜವಾಗಿಯೂ ಡ್ಯಾನಿಯದು ಮನುಷ್ಯ ದೇಹ,

  • ಇಬ್ಬರೂ ರಂಗಸ್ಥಳದ ಮಧ್ಯೆ ಬಂದು ನಿಂತಾಗ, ಅವರಲ್ಲಿದ್ದ ವ್ಯತ್ಯಾಸ ಇನ್ನೂ ಚೆನ್ನಾಗಿ ಎದ್ದು ಕಾಣುತಿತ್ತು.

ರೆಫರಿ ಅವರಿಬ್ಬರಿಗೂ ಕೊನೆಯ ಸೂಚನೆಗಳನ್ನು ಕೊಟ್ಟನು. - ರಾಬರ್ಟ್ ಪತ್ರಿಕೆಯವರ ಹಿಂದೆ ಕುಳಿತಿದ್ದು ದನ್ನು ರಿವರ ಗಮನಿಸಿದನು. ಎಂದಿಗಿಂತಲೂ ಹೆಚ್ಚಾಗಿ ರಾಬರ್ಟ್ ಕುಡಿದಿದ್ದನು. ಹಾಗೆಯೇ ತತ್ತರಿಸಿ ಮಾತನಾಡುತಿದ್ದನು. “ ಏನೂ ಹೆದರಬೇಡ, ರಿವೆ. ಎಲ್ಲ ಸುಲಭವೆಂದು ಧೈರ್ಯ ತಂದುಕೊ. ಅವನೇನು ನಿನ್ನನ್ನು ಕೊಲ್ಲಲಾರ. ಹೊರಡುವಾಗ ನೂಕಿದರೂ ಗಾಬರಿ ಪಡಬೇಡ. ಆದಷ್ಟು ಏಟು ಬೀಳದಂತೆ ಮರೆಮಾಡಿಕೊ, ಅವನ ಗಮನವನ್ನು ಬೇರೆಯ ಕಡೆ ಸೆಳೆಯಲು ಪ್ರಯತ್ನ ಪಡು, ಆಗಾಗ ಗುದ್ದಲಾಗದಷ್ಟು ಹತ್ತಿರ ನುಗ್ಗಿ ತಪ್ಪಿಸಿಕೊ....ಏನೇ ಆಗಲಿ ನಿನ್ನನ್ನು ಹೆಚ್ಚಾಗಿ ಗಾಯಪಡಿಸಲಾರ. ನೀನು ಹಿಂದೆ ಬರುತಿದ್ದ ಅಭ್ಯಾಸದ ರಂಗಸ್ಥಳಗಳನ್ನು ನೆನೆಸಿಕೊ; ಅಲ್ಲಿ ನಿನ್ನ ಮೇಲೆ ಬೀಳುತ್ತಿದ್ದ ಜಟ್ಟಿಯಂತೆ ಡ್ಯಾನಿಯೂ ಒಬ್ಬ ಎಂದು ಭಾವಿಸು. ಆಗ ಎಲ್ಲ ಸರಿಹೋಗುತ್ತದೆ ..” ರಿವರ ಈ ಮಾತುಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. “ಇವನು ಯಾವಾಗಲೂ ಮಂಕುಕವಿದ ದೆವ್ವದಂತೆ ಇರುತ್ತಾನೆ....” ಎಂದು ರಾಬರ್ಟ್, ಪಕ್ಕದಲ್ಲಿ ಕುಳಿತಿದ್ದಾತನಿಗೆ ಹೇಳಿದನು. ಆಶ್ಚರ್ಯವೇ ಸರಿ; ರಿವೆರ ತನ್ನ ಸಾಭಾವಿಕ ದ್ವೇಷವನ್ನು ತೋರ್ಪಡಿಸದೆ ಸುಮ್ಮನಿದ್ದನು. ಎಲ್ಲೊ ಮರೆತಿರಬೇಕು! ನಿಜ; ರಿವರನ ಕಣ್ಣು ಕೋರೈಸು ವಂತೆ ಅಸಂಖ್ಯಾತ ಬಂದೂಕಗಳು ಎದುರಿಗೆ ಬಂದು ನಿಂತಂತಾಯಿತು! ಮೊದಲ ತರಗತಿಯ ಡಾಲರ್ ಸೀಟಿನಿಂದ ಹಿಡಿದು, ಸಭೆಯ ಎಲ್ಲ ಮುಖಗಳೂ ಬಂದೂಕಗಳಾಗಿ ಮಾರ್ಪಟ್ಟಂತಿದ್ದವು .... ಬೆಂಗಾಡಿನಂತಿರುವ ಮೆಕ್ಸಿಕೋ ವಿನ ತುದಿಭಾಗಗಳು ಕಣ್ಣಿಗೆ ಕಟ್ಟಿದಂತಿದ್ದುವು. ಅಲ್ಲಿಯೇ ಸೂರ್ಯನ ತೀಕ್ಷತೆ ಜೋರಾಗಿರುವುದು, ಆದ್ದರಿಂದಲೇ ಜನ ನೋವಿನಿಂದ ನರಳುತಿ ದ್ದಾರೆ. ಹರಕು ಮುರುಕಾಗಿದ್ದರೂ ಗುಂಪು ಕಟ್ಟಿದ್ದಾರೆ; ಬಂದೂಕಗಳಿಗಾಗಿ