ಪುಟ:ಬಾಳ ನಿಯಮ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಬಾಳ ನಿಯಮ ಕಾಯುತ್ತಲಿದ್ದಾರೆ.... ಅವನು ತನ್ನ ಮೂಲೆಯಲ್ಲಿ ನಿಂತು ಕಾದಾಟದ ಆಹ್ವಾನಕ್ಕಾಗಿ ಕಾಯು ಇಲಿದ್ದನು. ಕ್ಯಾನ್ವಾಸ್ ಕುರ್ಚಿಯನ್ನು ಹಿಡಿದಿದ್ದ ಸಹಾಯಕರು ನುಸುಳಿ ಕೊಂಡು ಹಗ್ಗದ ಹೊರಕ್ಕೆ ಹೊರಟರು. ಚೌಕನೆಯ ರಂಗಕ್ಕೆ ಓರೆಯಾಗಿ ಡ್ಯಾನಿ ನಿಂತಿದ್ದನು. ಅವನ ದೃಷ್ಟಿ ರಿವೆರನ ಕಡೆಗಿತ್ತು. ಗಂಟೆ ಹೊಡೆಯಿತು; ಆಟೆ ಪ್ರಾರಂಭವಾಯಿತು. ಸಭಿಕರ ಸಂತೋಷದ ಹುಯ್ಯಲು ಹೇಳತೀರದು. ಪತ್ರಿಕೆಯವರು ಪ್ರಕಟಿಸಿದಂತೆ, ಇದು ನಿಜವಾಗಿಯೂ ಮಲ್ಲಾಮಲ್ಲಿ ಯುದ್ದವೇ ಸರಿ. ಡ್ಯಾನಿ ಥಟ್ಟನೆ ಒಂದೇ ನೆಗೆತಕ್ಕೆ ಮುಕ್ಕಾಲು ದೂರ ಹಾರಿದನು. ಅದು ಮೆಕ್ಸಿಕನ್ ಹುಡುಗನನ್ನು ಕಬಳಿಸುವಂತಿತ್ತು. ಡ್ಯಾನಿ ಕೇವಲ ಒಂದೋ ಎರಡೂ ಗುರುಗಳಲ್ಲಿ ತೃಪ್ತಿ ಹೊಂದಲಿಲ್ಲ; ವಿನಾಶ ತರುವ ಸುಂಟರಗಾಳಿಯಂತೆ ಗಿರನೆ ತಿರುಗುತ್ತ ಬಿಗಿಯುತಿದ್ದನು. ದೂರದಿಂದ ನೋಡುವವರಿಗೆ ರಿವರನ ಆಕೃತಿಯೇ ಕಾಣಿಸುತ್ತಿರಲಿಲ್ಲ; ಡ್ಯಾನಿ ಎಷ್ಟಾದರೂ ಮುಷ್ಟಿಯುದ್ಧದಲ್ಲಿ ಪಾರಂಗತನು; ಎಲ್ಲ ದಿಕ್ಕುಗಳಿಂದಲೂ ನಾನಾ ಕೋನಗಳಲ್ಲಿ ಏಟಿನ ಸುರಿಮಳೆ ಗರೆದನು. ಅವುಗಳನ್ನು ತಡೆಯಲಾರದೆ ರಿವರ ಮಧ್ಯೆ ಮಧ್ಯೆ ಮರೆಯಾಗು ತಿದ್ದನು. ಹಗ್ಗಗಳ ನೇರಕ್ಕೆ ಹೋಗಿ ಬೀಳುತ್ತಿದ್ದನು. ಅಗಾಗ ರೆಫರಿ ಬಂದು ಬಿಡಿಸಬೇಕಾಯಿತು. ಅದನ್ನು ಕಾದಾಟವೆಂದು ಹೇಳಲಾಗದು; ಕಗ್ಗೂಲೆಯನ್ನು ನಡೆಸುವಂಥ ಏರ್ಪಾಟನಂತಿತ್ತು. ಬಿರುಸಿನ ನಿಮಿಷವೆಂದರೆ ಎಂಥ ಸಭಿಕನ ಸ್ಪೂರ್ತಿ ಯನ್ನಾದರೂ ಮುಗಿಸಿ ಬಿಡುವ ರಸಘಳಿಗೆಯಾಗಿತ್ತು. ಡ್ಯಾನಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಭವ್ಯ ಪ್ರದರ್ಶನವನ್ನೇ ನೀಡುತ್ತಿದ್ದನು. ಜನರ ಉತ್ಸಾಹ ಮತ್ತು ಡ್ಯಾನಿಯ ಬಗ್ಗೆ ವಿಶ್ವಾಸ ಎಷ್ಟರಮಟ್ಟಿಗೆ ಇತ್ತೆಂದರೆ, ಮೆಕ್ಸಿಕನ್ ಸುಸ್ತಾಗಿದ್ದರೂ, ಅವನು ಕಾಲ ಮೇಲೆಯೇ ನಿಂತಿದ್ದುದನ್ನು ಜನ ಗಮನಿಸಲೇ ಇಲ್ಲ. ಡ್ಯಾನಿಯಂಥ ನರರಾಕ್ಷಸನ ಆಶ್ರಯದಲ್ಲಿ ಅಡಗಿಹೋಗಿದ್ದ ರಿವೆರನನ್ನು ಹೇಗೆ ತಾನೆ ಕಾಣಲು ಸಾಧ್ಯ ? ಎರಡು ನಿಮಿಷಗಳ ಅಂತರದಲ್ಲಿ ಒಂದು ಸಾರಿ ಮಾತ್ರ ಮೆಕ್ಸಿಕನನ ಸ್ಪಷ್ಟ ಆಕೃತಿಯನ್ನು ಕಾಣಲು ಸಾಧ್ಯವಾಯಿತು. ಅವನ ತುಟಿ ಹರಿದಿತ್ತು ; ಮೂಗಿನಲ್ಲಿ ರಕ್ತ ಸುರಿಯುತಿತ್ತು. ಹಿಂದಕ್ಕೆ ತಿರುಗಿದಾಗ ಬೆನ್ನ ಮೇಲೆ ಕೆಂಪು ಪಟ್ಟಿಗಳನ್ನು ಕಟ್ಟಿದಂತಿತ್ತು; ರಕ್ತ ಹರಿಯುತ್ತಿದ್ದರೂ ಹಗ್ಗಕ್ಕೆ ಬೆನ್ನು ಮಾಡಿ ನಿಂತಿದ್ದರ ಫಲವಿರಬೇಕು. ರಿವೆರನ ಬಗ್ಗೆ ಎರಡು ಮುಖ್ಯ ಅಂಶಗಳನ್ನು ಸಭಿಕರು ಕಾಣದೆ ಹೋದರು ; ಅವನ