ಪುಟ:ಬಾಳ ನಿಯಮ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೫4 ಹೃದಯದ ತುಡಿತ ಹಿಂದಿನಂತೆಯೇ ಇತ್ತು ಮತ್ತು ಕಣ್ಣುಗಳಂತೂ ಕಿಡಿ ಕಾರುತ್ತಲೇ ಇದ್ದವು. ಮನುಷ್ಯನನ್ನೇ ತಿನ್ನುವಂಥ ಗುದ್ದಾಟಗಳು ರಿವರನಿಗೆ ಹೊಸದಲ್ಲ ; ಅಭ್ಯಾಸದ ಕ್ರೂರ ಹೋರಾಟಗಳಲ್ಲಿ ಎಷ್ಟೋ ಉತ್ಸಾಹಿ ಛಾಂಪಿಯನ್ನುಗಳು ತನ್ನ ಮೇಲೆ ಬಿದ್ದಾಗ ಆ ಅನುಭವವಾಗಿತ್ತು....ತನ್ನಲ್ಲಿ ಎಂಥ ಸಹನೆಯಿತ್ತು ? ಅದಕ್ಕೆಲ್ಲ ಕಾರಣ ತನಗೆ ದೊರೆಯುತಿದ್ದ ಪರಿಹಾರ. ಅರ್ಧ ಡಾಲರಿನಿಂದ ಹಿಡಿದು ಹದಿನೈದು ಡಾಲರ ತನಕ ಸಿಗುತ್ತಿತ್ತು. ಜಟ್ಟಿ ಕಾಳಗ ನಿಜವಾಗಿಯೂ ಕಠಿಣ ಶಿಕ್ಷಣವಾಗಿತ್ತು. ತಾನು ಬಹಳ ಕಷ್ಟ ಪಟ್ಟು ಕಲಿತಿದ್ದನು. ಇದ್ದಕ್ಕಿದ್ದಂತೆ ಆಶ್ಚರ್ಯಕರ ಘಟನೆ ನಡೆದುಹೋಯಿತು. ಗಿತ್ರನೆ ಸುತ್ತುತ ಮಸುಕುಮಾಡುತಿದ್ದ ಯಕ್ಷಿಣೀ ವಿದ್ಯೆ ನಿಂತುಹೋಯಿತು ! ರಿವರ ಒಬ್ಬನೇ ನಿಂತಿದ್ದನು. ಎದುರಿಸಲಾಗದಂಥ ಬಲಿಷ್ಠನಾಗಿದ್ದ ಡ್ಯಾನಿ ಬೆನ್ನಿಗೆ ಒರಗಿಕೊಂಡು ಕೆಳಕ್ಕೆ ಬಿದ್ದನು. ಪ್ರಜ್ಞೆ ನಿಧಾನವಾಗಿ ಬಂದಂತೆ ಅವನ ದೇಹ ಕಂಪಿಸುತಿತ್ತು, ಆವನೇನೋ ತತ್ತರಿಸಿ ತಾನಾಗಿಯೇ ಕೆಳಕ್ಕೆ ಬೀಳಲಿಲ್ಲ. ಆದರೆ ರಿವರ ತನ್ನ ಬಲಗೈಯನ್ನು ಥಟ್ಟನೆ ಬೀಸಿ ಮೊಣಕ್ಕೆ ಬಾಗಿನಿಂದ ಹೊಡೆ ದಿದ್ದನು; ಅದರಿಂದಲೇ ಡ್ಯಾನಿ ತಕ್ಷಣ ಸಾವಿನ ಸೆಳೆತಕ್ಕೆ ಸಿಕ್ಕಿದವನಂತೆ ಮಧ್ಯಮಾರ್ಗದಲ್ಲೇ ಬಿದ್ದು ಹೋದನು.

  • ರೆಫರಿಯ ಸಡಗರ ವಿಪರೀತ, ರಿವರನನ್ನು ಜೋರಾಗಿ ಹಿಂದಕ್ಕೆ ತಳ್ಳಿ ಮಹಾಮಲ್ಲನ ಮೇಲೆ ನಿಂತು ಸೆಕೆಂಡುಗಳನ್ನು ಎಣಿಸತೊಡಗಿದನು. ಬಹು ಮಾನ ಪಂದ್ಯದಲ್ಲಿ ನೆಲಕಚ್ಚುವಂಥ ಏಟು ಬಿಗಿದ ಮಹಾವ್ಯಕ್ತಿಯನ್ನು ಪ್ರೋತ್ಸಾಹಿಸುವುದು ವಾಡಿಕೆಯಲ್ಲವೇ? ಆದರೆ ಈ ಸಭಿಕರು ಸಂತೋಷ ಧ್ವನಿಯಲಿಲ್ಲ. ರಿವರನು ಡ್ಯಾನಿಯನ್ನು ಹೀಗೆ ಬೀಳಿಸುವನೆಂದು ಯಾರೂ ತಿಳಿದಿರಲಿಲ್ಲ. ಇಡೀ ಸಭೆ ನಿಶ್ಯಬ್ದವಾಯಿತು. ರೆಫರಿಯಿಂದ ನಿಧಾನವಾಗಿ ಹೊರಬರುತಿದ್ದ ಸೆಕೆಂಡುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಸಭಿಕರು ಕಾಯುತಿದ್ದರು.

ಇಂಥ ನಿಶ್ಯಬ್ದ ವಾತಾವರಣದಲ್ಲಿ ರಾಬರ್ಟನು ಉಬ್ಬಿಹೋದನು. “ನಾನು ಆಗಲೇ ಹೇಳಲಿಲ್ಲವೇ? ಅವನು ಎರಡೂ ಕೈಗಳಿಂದ ಕಾದಾಡು ವವನು !” ಎಂದು ಜೋರಾಗಿ ಕೂಗಿದನು. ಐದನೇ ಸೆಕೆಂಡಿಗೆ ಡ್ಯಾನಿ ಮುಖವಡಿಯಾಗಿ ಉರುಳುತಿದ್ದನು. ಏಳನೇ ಸೆಕೆಂಡ್ ಎಣಿಸಿದಾಗ ಮೊಣಕಾಲೊಂದರ ಮೇಲೆ ನಿಂತನು. ಹಾಗೆಯೆ