ಪುಟ:ಬಾಳ ನಿಯಮ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೪ ಬಾಳ ನಿಮಯ ಒಂಬತ್ತು ಹೇಳವ ತನಕ ಇದ್ದನು. ಇನ್ನೇನು ಹತ್ತನೆಯ ಸೆಕೆಂಡು ಹೇಳ ಬೇಕು ; ಅಷ್ಟರಲ್ಲಿ ಮೇಲೇಳಲು ಸಿದ್ದನಾದನು....ರೆಫೆರಿ ತಂಬ ನಿಧಾನವಾಗಿ ಸೆಕೆಂಡುಗಳನ್ನು ಎಣಿಸುತ್ತಿದ್ದನು. ಇದರ ಅರ್ಥ ರಿವರನಿಗೆ ತಿಳಿಯಿತು. ಎಲ್ಲ ಗ್ರಿನ್‌ಗೋಗಳ ಜೊತೆಗೆ ರೆಫೆರಿಯೂ ಕೂಡ ವಿರುದ್ದವಾಗಿರುವುದು ಗೊತ್ತಾಯಿತು. ಒಂಬತ್ತನೆಯ ಸೆಕೆಂಡು ಎಣಿಸುವಾಗ ರೆಫೆರಿ ಮೆಲ್ಲಗೆ ರಿವೆರನನ್ನು ಚುಚ್ಚಿ ಹಿಂದಕ್ಕೆ ನೂಕಿದನು. ಇದು ನಿಯಮಕ್ಕೇನೋ ವಿರುದ್ಧ ; ಆದರೆ ಡ್ಯಾನಿಗೆ ಅವಕಾಶಮಾಡಿಕೊಡಬೇಕಲ್ಲ ! ಡ್ಯಾನಿ ನಗುತ್ತಾ ಮೇಲೆಬಿದನು. ದೇಹವನ್ನು ಸುರುಳಿ ಸುತ್ತಿ ಹಿಂದಕ್ಕೆ ಮುಗ್ಗರಿಸಿದನು. ಈ ರೀತಿ ಮಾಡಿದ್ದು ಸರಿಯಲ್ಲ ; ರೆಫರಿ ಮಧ್ಯೆ ಬಂದು ನಿಲ್ಲಿಸಬೇಕಾಗಿತ್ತು. ಆದರೆ ರೆಫರಿ ಸುಮ್ಮನಿದ್ದನು. ಒಡೆದು ಹೋದ ದೋಣಿಗೆ ಅಂಟಿಕೊಂಡವನಂತೆ ಡ್ಯಾನಿ ಕ್ಷಣಕ್ಷಣಕ್ಕೂ ಚೇತರಿಸಿ ಕೊಂಡನು. ಅಂತೂ ತನ್ನ ಮೂಲೆಯಲ್ಲೇ ಕುಳಿತು ಸಂಪೂರ್ಣ ನಿಮಿಷವನ್ನು ವಿನಿಯೋಗಿಸಿ ಮತ್ತೆ ಜೀವ ಉಳಿಸಿಕೊಂಡನು.

  • ಯಾರು ಹೇಳಿದರು ? ಡ್ಯಾನಿ ನಗುತ್ತಿದ್ದಾನೆಯೇ ? ಇಲ್ಲ. ಮುಗುಳು ನಗೆ ಹೊರಕ್ಕೆ ಬರುತ್ತಲೇ ಇಲ್ಲ! ....” ಎಂದು ಯಾರೋ ಗೇಲಿಯೆಬ್ಬಿಸಿದರು. ಅಷ್ಟು ಹೊತ್ತಿನ ತನಕ ನಿಶಬ್ದರಾಗಿದ್ದ ಸಭಿಕರು ಗೊಳ್ಳೆಂದು ನಕ್ಕರು.

“ ಈ ಮೆಕ್ಸಿಕನ್ ಕುನ್ನಿ ಜೋರಾಗಿಯೇ ಒದ್ದಿದ್ದಾನೆ ; ಇರಲಿ ” ಎಂದು ಡ್ಯಾನಿ ಮೂಲೆಯಲ್ಲಿದ್ದ ತನ್ನ ಹಿತಚಿಂತಕರಿಗೆ ಹೇಳಿದನು. ಮಾತು ಮಾತಿಗೆ ಮೇಲುಬ್ಬಸ ಬರುತಿತ್ತು. ಸಹಾಯಕರು ಒಂದೇ ಸಮನೆ ಮೈ ತಿಕ್ಕುತಿದ್ದರು. ಎರಡನೆಯ ಹಾಗೂ ಮೂರನೆಯ ರೌಂಡುಗಳು ಸಪ್ಪೆಯಾಗಿದ್ದವು. ರಂಗದ ತಂತ್ರಗಳಲ್ಲಿ ಪ್ರವೀಣನೂ, ಉಪಾಯಗಾರನೂ ಎನಿಸಿಕೊಂಡಿದ್ದ ಡ್ಯಾನಿ ಸಮಯಕ್ಕೆ ತಕ್ಕ ಬುದ್ದಿಯನ್ನು ಉಪಯೋಗಿಸಿದನು. ಮೊದಲ ರೌಂಡಿನಲ್ಲಿ ದಿಗ್ಧಮೆ ಹಿಡಿಸುವಂಥ ಏಟು ಬಿದ್ದಿತ್ತು; ಆದ್ದರಿಂದಲೇ ಈ ಬಾರಿ ಚೇತರಿಸಿ ಕೊಳ್ಳಲು ಪ್ರಯತ್ನ ಪಟ್ಟನು. ಬಿದ್ದು ಹೋಗುವಂತೆ ನಟಿಸಿ ಏಟುಗಳನ್ನು ತಡೆ. ಗಟ್ಟುವುದರಲ್ಲೇ ಕಾಲಕಳೆದನು. ನಾಲ್ಕನೆಯ ರೌಂಡಿಗೆ ಅವನು ಹಿಂದಿನ ಡ್ಯಾನಿಯಾದನು. ಆದರೆ ಮತ್ತೆ ನರಭಕ್ಷಕನಂತೆ ಮೇಲೆ ಬೀಳಲು ಹಿಂಜರಿದನು; ಏಕೆಂದರೆ ಮೆಕ್ಸಿಕನ್ ಕೂಡ ಟಾರ್ಟರನಂತೆ ಕಾಡುಮನುಷ್ಯನೇ ಆಗಿದ್ದನು. ಪ್ರತಿಯಾಗಿ ಡ್ಯಾನಿ ತನ್ನ ನಿಜಶಕ್ತಿಯನ್ನು ಪ್ರತಿಬಿಂಬಿಸುವ ಆಟದ ವರಿಸೆ ಗಳನ್ನು ಬಿಚ್ಚಿದನು. ಎಷ್ಟಾದರೂ ಅವನು ಅನುಭವಶಾಲಿಯಲ್ಲವೆ ? ಎದುರಾಳಿ