ಪುಟ:ಬಾಳ ನಿಯಮ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೫ ಮೆಕ್ಸಿಕನ್ ಯನ್ನು ಸಿಕ್ಕಿಸಿ ಸವೆಸಲು, ನಿಧಾನವಾಗಿ ಲೆಕ್ಕಾಚಾರ ಮಾಡುತ್ತ ಏಟುಗಳನ್ನು ಬಿಗಿಯ ತೊಡಗಿದನು. ರಿವೆರನ ಒಂದು ಹೊಡೆತಕ್ಕೆ ಪ್ರತಿಯಾಗಿ ಡ್ಯಾನಿಯ ಮೂರು ಗುದ್ದುಗಳು ಬಿದ್ದವು. ಡ್ಯಾನಿಯ ಗುದ್ದುಗಳು ಶಿಕ್ಷಾ ದೃಷ್ಟಿಯಿಂದ ಉತ್ತಮವಾಗಿದ್ದರೂ, ಪರಿಣಾಮದಲ್ಲಿ ಅಂಥ ಭಯಾನಕವಾಗಿರಲಿಲ್ಲ. ಅವನು ರಿವೆರನನ್ನು ಗೌರವಿಸದೆ ಇರಲು ಸಾಧ್ಯವಿಲ್ಲ, ಏಕೆಂದರೆ ಎರಡೂ ಮುಷ್ಟಿಗಳಿಂದ ಹೊರಬರುತಿದ್ದ ಮೋಟುಕೈಗಳ ಒದೆತ ಆಶ್ಚರ್ಯಕರವಾಗಿತ್ತು, ರಿವರನಿಗೆ ಆತ್ಮರಕ್ಷಣೆ ಮಾಡಿಕೊಳ್ಳಲು ಕಷ್ಟವಾಗಲಿಲ್ಲ ; ಕ್ರಮಭಂಗ ಮಾಡುವಂಥ ಎಡ ಕೈ ಚಳಕವೇ ಸಾಕಾಗಿತ್ತು; ಮಧ್ಯೆ ಮಧ್ಯೆ ಡ್ಯಾನಿಯ ಬಾಯಿ ಮೂಗುಗಳಿಗೆ ಜಖಂ ಆಗುತಿತ್ತು. ಆದರೆ ಡ್ಯಾನಿಯೂ ಕೂಡ ಒಂದೇ ಭಂಗಿಯಲ್ಲಿ ಕಾದಾಡದೆ ಆಗಾಗ ಬದಲಾಯಿಸುತ್ತಿದ್ದನು; ಆದ್ದರಿಂದಲೇ ಜನ ಅವನನ್ನು ಮುಂದಿನ ಛಾಂಪಿಯನ್ ಎಂದು ಕರೆಯುತಿದ್ದರು. ಡ್ಯಾನಿ ತನ್ನ ತೋಳಿನ ದೂರಕ್ಕಿಂತಲೂ ಹತ್ತಿರದಲ್ಲಿ ಮುಷ್ಟಿ ಕಾಳಗ ಮಾಡಲು ಆರಂಭಿಸಿದನು. ಈ ಕೈ ಕೈ ಕಾಳಗವಲ್ಲಿ, ಬೇಕಂತಲೆ ಕೂರವಾಗಿ ವರ್ತಿಸಿದನು. ಇದರಿಂದ ಎದುರಾಳಿಯ ಎಡ ಕೈ ಚಾಚಿನ ಹೊಡೆತ ತಪ್ಪಿಸಿ. ಕೊಳ್ಳಲು ಅವಕಾಶವಾಯಿತು. ಮಧ್ಯೆ ಮಧ್ಯೆ ಸಭಿಕರು ಉತ್ಸಾಹದಿಂದ ಕುಣಿದಾಡಿದರು. ದಮ್ಮು ಕಟ್ಟಿದ ಡ್ಯಾನಿ ಒಂದು ಸಾರಿಯಂತೂ ರಿವೆರನನ್ನು ಮೇಲೆ ಹಾರಿಸಿದನು. ಪುಟ ಏರಿದಂತೆ ಮೆಕ್ಸಿಕನ್ ಗಾಳಿಯಲ್ಲಿ ತೂರಾಡಿ ಚಾಪೆಯ ಮೇಲೆ ಬಿದ್ದನು. ಆದರೂ ಅವನು ಒಂದೇ ಮೊಣಕಾಲ ಮೇಲೆ ನಿಂತಿದ್ದನು. ರೆಫರಿಯು ಬಹು ಬೇಗ ಸೆಕೆಂಡುಗಳನ್ನು ಎಣಿಸುತ್ತಿದ್ದನು. ಆ ಅಂಶ ವೆರನ ಅಂತರಾತ್ಮಕ್ಕೆ ಆಗಲೇ ಹೊಳೆದಿತ್ತು. ಪ್ರಪಂಚವೇ ಹೀಗೆ ; ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ....ಏಳನೇ ರೌಂಡಿನಲ್ಲೂ ರೆಫರಿಯ ಮನೋಧರ್ಮ ಸ್ಪಷ್ಟವಾಯಿತು. ಡ್ಯಾನಿಯ 'ಅಪ್ಪರ್ ಕಟ್' ವಿಧಾನ ಪ್ರಭಾವಯುತವಾಗಿದ್ದರೂ, ರಿವರನನ್ನು ಬೀಳಿಸುವಂತಿರಲಿಲ್ಲ. ರಿವೆರ ತೂಗಾಡಿ ತತ್ತರಿಸುತಿದ್ದನು; ಅಷ್ಟೆ. ಆದರೆ ಅ ಕ್ಷಣದಲ್ಲಿ ಅವನು ಅಸಹಾಯನೂ ಅರಕ್ಷಿತನೂ ಆಗಿದ್ದನು. ಅದೇ ಸಮಯವನ್ನು ಉಪಯೋಗಿಸಿ ಕೊಂಡು ಡ್ಯಾನಿ ಅವನನ್ನು ಹಗ್ಗಗಳ ಮಧ್ಯೆ ಸೇರಿಸಿ ತೀಡತೊಡಗಿದನು. ರಿವೆರನ ದೇಹ ಛಂಗನೆ ನೆಗೆದು ಕೆಳಗೆ ಕುಳಿತಿದ್ದ ಪತ್ರಿಕೆಯವರ ತಲೆಯ ಮೇಲೆ ಬಿತ್ತು. ಆ ಪತ್ರಿಕೆಯವರು ಅದೇ ರಭಸದಲ್ಲಿ ಅವನನ್ನು ಮುಂದಕ್ಕೆ ತಳ್ಳಿದರು. ರಿವೆರ ಪುನಃ ಹಗ್ಗಗಳ ಹೊರಗಿದ್ದ ವೇದಿಕೆಯ ತುದಿಯಲ್ಲಿ