ಪುಟ:ಬಾಳ ನಿಯಮ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ನಿಂತನು. ಮೊಣಕಾಲ ಮೇಲೆ ನಿಂತಿದ್ದನು. ರೆಫರಿ ಯಥಾಪ್ರಕಾರ ಸೆಕೆಂಡು ಗಳನ್ನು ಬೇಗ ಬೇಗ ಎಣಿಸತೊಡಗಿದನು. ಹಗ್ಗಗಳನ್ನು ಹಾದು ರಂಗಸ್ಥಳ ವನ್ನು ಪ್ರವೇಶಿಸದಿದ್ದರೆ ರಿವೆರನ ಗತಿ ಮುಗಿಯಿತು. ಡ್ಯಾನಿಯಾದರೋ ಅದೇ ಸ್ಥಳದಲ್ಲಿ ಕಾಯುತಿದ್ದನು. ಅಂಥ ಪೂರ್ವಸಿದ್ಧತೆಗೆ ಅವಕಾಶಕೊಡುವುದು ತಪ್ಪು. ಆದರೆ ರೆಫರಿ ಏನೂ ಪ್ರಶ್ನಿಸಲಿಲ್ಲ ; ಡ್ಯಾನಿಯನ್ನು ಹಿಂದಕ್ಕೆ ತಳ್ಳಲೂ ಇಡೀ ಸಭೆ ಸಂತೋಷ ಸಾಗರದಲ್ಲಿ ಮುಳುಗಿತ್ತು. “ ಕೊಲ್ಲು, ಕೊಲ್ಲಯ್ಯಾ, ಡ್ಯಾನಿ, ಅವನನ್ನು ಬಿಡಬೇಡ ” ಎಂದು ಜನ ಕೂಗಾಡಿದರು. ಎಲ್ಲರ ಧ್ವನಿಯೂ ಒಟ್ಟಿಗೆ ಸೇರಿದಾಗ ತೋಳ ಸಮುದಾಯದ ಯುದ್ಧ ಘೋಷಣೆಯಂತಿತ್ತು, ಡ್ಯಾನಿ ತಾಕತ್ತು ಪಡೆಯುತ್ತಿದ್ದನು. ಆದರೆ ಒಂಬತ್ತು ಸೆಕೆಂಡಿನ ತನಕ ರಿವರ ಕಾಯದೆ ಎಂಟನೇ ಸೆಕೆಂಡಿಗೇ ನುಗ್ಗಿದನು; ಡ್ಯಾನಿಯ ದೇಹಕ್ಕೆ ಹತ್ತಿರ ಸುಳಿದು ಸುತ್ತಿಕೊಂಡನು. ಡ್ಯಾನಿ ಹೇಗೆ ತಾನೆ ಗುದ್ದು ಕೊಟ್ಟಾನು ? ಆದರೆ ಅನ್ಯಾಯಕ್ಕೆ ಪ್ರಸಿದ್ಧನಾದ ರೆಫರಿ ಮಹಾಶಯ ಸಹಾಯಕ್ಕೆ ಬಂದನು ; ರಿವೆರನನ್ನು ಬಿಡಿಸಿ ಎಳೆದು, ಡ್ಯಾನಿಯಿಂದ ಏಟು ತಿನ್ನುವಂತೆ ಅವಕಾಶ ಮಾಡಿಕೊಟ್ಟನು ! ಅಷ್ಟಾದರೂ ರಿವರ ಜೀವದಿಂದಲೇ ಇದ್ದನು; ತಲೆಯಲ್ಲಿ ಹೊಕ್ಕಿದ್ದ ಭ್ರಮೆ ಮಾಯವಾಯಿತು. ತಾನು ದ್ವೇಷಿಸುತ್ತಿದ್ದ ಗ್ರಿನ್‌ಗೋಗಳು ಪ್ರತಿ ಯಾಗಿ ಎಂಥ ಅನೀತಿ ಮಾರ್ಗವನ್ನು ಅನುಸರಿಸಬಲ್ಲರು ಎಂದು ತಿಳಿಯಿತು. ಹಾಗೆಂದು ತಾನು ಸುಮ್ಮನಿರಲು ಸಾಧ್ಯವೇ ? ... ಮತ್ತೆ ತಾನು ನಡೆದು ಬಂದ ದಾರಿಯ ಜ್ಞಾಪಕವಾಯಿತು-ಈಗಲೂ ಮರಳುಗಾಡಿನ ರೈಲುಮಾರ್ಗದಲ್ಲಿ ಜನ ತಳಮಳಗೊಂಡಿದ್ದಾರೆ. ಅಮೇರಿಕನ್ (ಕನಿಷಬಿಲ್ಲೆ ಗಳು ದೊಡ್ಡವರಾಗಿ ದ್ದಾರೆ; ನೀರು ತೊಟ್ಟಿಗಳ ಹತ್ತಿರ ಅಲೆಮಾರಿಗಳ ತಂಡವಿದೆ; ಮಾತೆತ್ತಿದರೆ ಜೈಲಿಗೆ ಆಹ್ವಾನಗಳು ಬರುತ್ತಿವೆ....ರಯೋಬ್ಲಾಸ್ಕೋದ ಮುಷ್ಕರವಾದ ಮೇಲೆ ತನ್ನವರ ಸ್ಥಿತಿಗತಿಗಳು ಅಸಹ್ಯ ಪರಂಪರೆಯಾಗಿವೆ. ಆದರೂ ಅವನಿಗೆ ಉಜ್ವಲವಾದ ದಿವ್ಯನೋಟ ಕಾಣದೆ ಇಲ್ಲ ; ರಕ್ತ ಕ್ರಾಂತಿಯ ಗಾಳಿ ಈಗಾಗಲೆ ತನ್ನ ನಾಡಿನ ಮೇಲೆ ಬೀಸತೊಡಗಿದೆ. ತನ್ನ ಮುಂದೆ ಬಂದೂಕಗಳು ನಿಂತಂತೆ ಕಾಣುತ್ತಿದೆ; ನಿಜ, ದ್ವೇಷಕಾರುತ್ತಿರುವ ಪ್ರತಿಯೊಂದು ಮುಖವೂ ಬಂದೂಕು