ಪುಟ:ಬಾಳ ನಿಯಮ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೭ ಮೆಕ್ಸಿಕನ್ ತಾನೆ ? ಅವರ ಮುಖಭಂಗ ಮಾಡಿದರೆ ಬಂದೂಕುಗಳು ನಮ್ಮ ವಶ ! ಅದಕ್ಕಾ ಗಿಯೇ ತಾನು ಕಾದಾಡುತ್ತಿರುವುದು. ಅಷ್ಟೇ ಅಲ್ಲ ; ತಾನು ಬೇರೆಯಲ್ಲ, ಬಂದೂಕಗಳು ಬೇರೆಯಲ್ಲ. ಕ್ರಾಂತಿಯಲ್ಲಿ ಲೀನವಾಗಿ ಹೋಗಿದ್ದೇನೆ ; ಮೆಕ್ಸಿಕನರ ಸಮಷ್ಟಿ ದೃಷ್ಟಿ ತನ್ನಲ್ಲಿ ಅಡಕವಾಗಿದೆ. ಆದ್ದರಿಂದಲೇ ತಾನು ಇಡೀ ಮೆಕ್ಸಿಕೋ ದೇಶದ ಪರವಾಗಿ ಹೋರಾಡುತ್ತಿರುವುದು.... - ರಿವೆರನ ಬಗ್ಗೆ ಸಭಿಕರು ತುಂಬ ಕೆರಳಿದರು. ಕೋಲು ಮುರಿಯದು, ಹಾವು ಸಾಯದು ಎಂಬಂತೆ ರಿವರನು ಸುಮ್ಮನೆ ಮೊಂಡಾಟ ಮಾಡಲು ಕಾರಣವೇನು ? ಕೆಲವರಿಗೆ ಮಾತ್ರ ಅವನಲ್ಲಿ ಆಸಕ್ತಿಯಿತ್ತು ; ಆ ಜನ ತುಂಬ ಹೊತ್ತಿನ ಆಟಗಳನ್ನು ಅಪೇಕ್ಷಿಸುವ ಜೂಜುಗಾರರಾಗಿದ್ದರು. ಡ್ಯಾನಿಯೇ ಗೆಲ್ಲುತ್ತಾನೆಂದು ನಂಬಿ ಅವರು ಒಂದಕ್ಕೆ ನೂರರಷ್ಟು ಪಂದ್ಯ ಕಟ್ಟಿದ್ದರು. ರಿವರನು ಎಷ್ಟು ರೌಂಡುಗಳನ್ನು ಆಡಬಲ್ಲ ಎಂಬುದರ ಬಗ್ಗೆಯೂ ಚರ್ಚೆ ಯಾಗಿತ್ತು. ಏನಾದರಾಗಲಿ ರಿವರ ಆರು ಅಥವಾ ಹೆಚ್ಚೆಂದರೆ ಏಳು ರೌಂಡುಗಳ ಮೇಲೆ ಹೋಗಲಾರ ಎಂದು ಮುಂಭಾಗದ ಜನ ಘೋಷಿಸಿ ಹಣ ಚೆಲ್ಲಿದ್ದರು. ಇದರಲ್ಲಿ ಬಾಜಿ ಕಟ್ಟಿ ಗೆದ್ದವರು ತುಂಬ ಖುಷಿಯಾದರು; ಆಗಲೇ ಏಳು ರೌಂಡುಗಳು ಸಾಗಿದ್ದರಿಂದ ಅವರ ಹಣ ಸುರಕ್ಷಿತವಾಯಿತು. ಈಗ ತಮ್ಮ ತಮ್ಮ ಕಡೆಯವನನ್ನು ಹುರಿದುಂಬಿಸತೊಡಗಿದರು. - ರಿವರನು ಮೇಲಾಗದಿದ್ದರೂ ಸೋಲಿಗೆ ಮಾತ್ರ ಅವಕಾಶ ಕೊಡಲಿಲ್ಲ. ಎಂಟನೆಯ ರೌಂಡಿನಲ್ಲಿ ಎದುರಾಳಿಯ ಕೆಳಗಿನಿಂದ ಮೇಲಕ್ಕೆ ಗಾಳಿ ಗುದ್ದು ವಂತೆ ಬೀಸತೊಡಗಿದನು. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ; ಒಂಬತ್ತನೇ ರೌಂಡಿನಲ್ಲಿ ರಿವೆರ ಸಭಿಕರನ್ನು ಮತ್ತೆ ಆಶ್ಚರ್ಯ ಚಕಿತರನ್ನಾಗಿ, ಮಾಡಿದನು. ಸುರುಳಿಯ ಮಧ್ಯೆ ಇದ್ದರೂ ಥಟ್ಟನೆ ಬಾಗುವಂತೆ ನಟಿಸುತ್ತಾ ಬಿಡಿಸಿಕೊಂಡನು. ಇಬ್ಬರ ನಡುವೆ ಅಂತರ ಸ್ವಲ್ಪವಾಗಿದ್ದರೂ, ಅವನ ಬಲಗೈ. ಅಷ್ಟರಲ್ಲೇ ಜಾಗ ಮಾಡಿಕೊಂಡು ಸೊಂಟದಿಂದ ಮೇಲೆದ್ದಿತು. ಇನ್ನು ಕೇಳಬೇಕೆ ? ಡ್ಯಾನಿ ನೆಲಕ್ಕೆ ಬಿದ್ದನು. ಜನರ ಗುಂಪು ಗಾಬರಿಗೊಂಡಿತು. ಡ್ಯಾನಿಯ ಬಲಗೈನ ಪ್ರಖ್ಯಾತ 'ಅಪ್ಪರ್ ಕಟ್' ಪ್ರಯೋಗ ಅವನ ಮೇಲೆಯೆ ಪ್ರಯೋಗಿಸಲ್ಪಟ್ಟಿತು. ಡ್ಯಾನಿ ಒಂಬತ್ತನೇ ಸೆಕೆಂಡಿಗೆ ಎದ್ದಾಗ, ರಿವೆರ ಅವನ ಮೇಲೆ ಬೀಳಲು ಪ್ರಯತ್ನಿಸಲಿಲ್ಲ. ಈ ಸಾರಿಯ ವ್ಯತಿರಿಕ್ತ ಸನ್ನಿವೇಶಕ್ಕೆ ತಕ್ಕಂತೆ ರೆಫರಿ ವರ್ತಿಸಿದನು. ಬಹಿರಂಗವಾಗಿಯೆ ಹೋರಾಟದ ಮಾರ್ಗಕ್ಕೆ ತಡೆಹಾಕಿ ಮಧ್ಯೆ ಮಧ್ಯೆ ಬಂದು ನಿಲ್ಲುತ್ತಿದ್ದನು.