ಪುಟ:ಬಾಳ ನಿಯಮ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ರಿವರನು ಹತ್ತನೆಯ ರೌಂಡಿನಲ್ಲೂ ಮೇಲುಗೈಯಾಗಿ ಎದುರಾಳಿಯ ಕೆನ್ನೆಗೆ ಎರಡು ಬಾರಿ ಬೀಸಿದನು. ಡ್ಯಾನಿ ಹುಚ್ಚನಂತಾದನು. ಏನೂ ತೋರ ದವನಾಗಿ ನರರಾಕ್ಷಸನ ಹಾದಿ ಪುನಃ ಹಿಡಿದನು. ಚಕ್ರಮಾರುತದಂತೆ ಗಿರನೆ ತಿರುಗಿದನು. ರಭಸದಿಂದ ಮೇಲೆ ಬೀಳಲು ಹವಣಿಸಿದರೂ, ಡ್ಯಾನಿಗಿಂತಲೂ ರಿವರ ಘಾಟಿಯಾಗಿದ್ದನು. ಅವನು ಡ್ಯಾನಿಯ ದೃಷ್ಟಿ ಪಧವನ್ನು ಮಬ್ಬು ಗೋಳಿಸಿ, ಮೂರು ಸಾರಿಯೂ ಅವನನ್ನು ಒಂದೇ ಸಮನೆ ನೆಲಕ್ಕೆ ಕೆಡವಿದನು. ಹಿಂದಿನಂತೆ ಡ್ಯಾನಿಗೆ ಬೇಗ ಚೇತರಿಸಿಕೊಳ್ಳಲೂ ಸಾಧ್ಯವಾಗಲಿಲ್ಲ, ಹನ್ನೊಂದನೆ ಕೌಂಡಿಗೆ ತುಂಬ ಯೋಚಿಸಿ ಹೊರಡಬೇಕಾಯಿತು. ಅಲ್ಲಿಂದ ಹದಿನಾಲ್ಕರ ತನಕ ಡ್ಯಾನಿಯು ತನ್ನ ವ್ಯಕ್ತಿತ್ವವನ್ನು ಪ್ರದರ್ಶಿಸುವಂಧ ಪಂದ್ಯವಾಡಿದನು. ಬಿದ್ದೇಳುವಂತೆ ನಟಿಸಿದರೂ ಬಹು ಜಾಗರೂಕನಾಗಿದ್ದನು. ಮಿತವಾದ ಹೋರಾಟವನ್ನು ನಡೆಸಿದನು. ಕ್ಷಣ ಕ್ಷಣಕ್ಕೂ ಶಕ್ತಿ ಸಂಪಾದಿಸಲು ಗಮನ ವಿಟ್ಟನು. ತನಗೆ ತಿಳಿದ ಎಲ್ಲ ಉಪಾಯ ಮಾರ್ಗಗಳನ್ನೂ ಉಪಯೋಗಿಸಿದನು. ಅಪಘಾತವಾದಂತೆ ಹಿಂದಕ್ಕೆ ಸರಿಯುತ್ತಿದ್ದನು. ತೋಳಿನ ಮಧ್ಯೆ ರಿವನ ಕೈಗವನನ್ನು ಸಿಕ್ಕಿಸಿಕೊಂಡು ಹೆಣಗಾಡಿಸಿದನು. ತನ್ನ ಕೈಗವಸನ್ನು ರಿವೆರನ ಬಾಯಿಯ ನೇರಕ್ಕೆ ಹಿಡಿದು ಉಸಿರಾಡಲು ತೊಂದರೆಪಡಿಸಿದನು. ಹತ್ತಿರ ಬಂದಾಗ ರವೆರನ ಕಿವಿಯಲ್ಲಿ ಸಣ್ಣ ಮಾತುಗಳಾಡಿ ನಿಂದಿಸುತ್ತಿದ್ದನು. ರೆಫರಿ ಯಿಂದ ಹಿಡಿದು ಸಭೆಯಲ್ಲಿನ ಪ್ರತಿಯೊಬ್ಬರೂ ಡ್ಯಾನಿಯ ಪಕ್ಷವಹಿಸಿ ಸಹಾಯ ಮಾಡಲೂ ಸಿದ್ಧರಾಗಿದ್ದರು. ಅವನ ತಲೆಯಲ್ಲಿ ಯಾವ ಯೋಚನೆ ಇರಬಹು ದೆಂದು ಅವರಿಗೆ ತಿಳಿದಿತ್ತು ... ಈವರೆಗೂ ಅಜ್ಞಾತನಾಗಿದ್ದವನ ಕೈವಾಡದಿಂದ ತಾನು ಸೋಲುವುದೆಂದರೆ ಆಶ್ಚರ್ಯವಲ್ಲವೆ ? ತನ್ನ ಶಕ್ತಿಯನ್ನೆಲ್ಲ ಕೇಂದ್ರೀಕರಿಸಿ ಒಂದೇ ಮುಷ್ಠಿ ಪ್ರಹಾರ ಕೊಡಲು ಸಿದ್ದನಾಗಬೇಕು; ಪ್ರವಾಹವನ್ನು ಹಿಂತಿರು ಗಿಸುವಷ್ಟು ಅದು ಪ್ರಭಾವಶಾಲಿಯಾಗಿರಬೇಕು. ಹಿಂದೆ ಒಬ್ಬ ಪ್ರಖ್ಯಾತ ಜಟ್ಟಿ ಮಾಡಿದಂತೆ, ಒಂದು ಕೈಯಲ್ಲಿ ಹೊಟ್ಟೆಯ ಕುಳಿಯಲ್ಲಿಯ ನರಗಳ ಜಾಲ ವನ್ನು ಕಲಕಿ, ಮತ್ತೊಂದರಲ್ಲಿ ದವಡೆಗೆ ಬೀರಿದರೆ ತೀರಿತು. ನಾನು ಆ ಕಾರ್ಯ ಮಾಡಲು ಶಕ್ತ, ಕಾಲ ಮೇಲೆ ನಿಂತಿರುವ ತನಕ ತೋಳ ಶಕ್ತಿಗೆ ತೊಂದರೆಯಿಲ್ಲ. ಎಷ್ಟಾದರೂ ತಾನು ಮುಷ್ಟಿ ಪ್ರಹಾರಕ್ಕೆ ಹೆಸರಾದವನಲ್ಲವೇ ? ಇದೇ ಡ್ಯಾನಿಯ ಯೋಚನೆಯಾಗಿತ್ತು. ಪ್ರತಿ ರೌಂಡುಗಳ ಮಧ್ಯ ವಿರಾಮದಲ್ಲಿ ರಿವೆರನ ಸಹಾಯಕರು ಯಾವ ಸಹಾಯವನ್ನೂ ಮಾಡಲಿಲ್ಲ; ಅವರು ಕೂಡ ರಿವರನನ್ನು ಕಡೆಗಣಿಸಿದ್ದರು.