________________
ಮೆಕ್ಸಿಕನ್ ೧೫೯ ಟವಲಿನಿಂದ ಬೀಸುತ್ತಿದ್ದರು ; ನಿಜ. ಅದರಿಂದ ಹೊರಟ ಅಲ್ಪ ಗಾಳಿ ಶ್ವಾಸವೇಳೆ ಯುತಿದ್ದ ರಿವರನಿಗೆ ಅಪ್ಯಾಯಮಾನವಾಗಿರಲಿಲ್ಲ. ಸೈಡರ್ ಹೆಗರ್ಟ ದೊಡ ದಾಗಿ ಬುದ್ಧಿವಾದ ಹೇಳಲು ಬಂದನು ; ಅವನು ಹೇಳುತ್ತಿರುವುದೆಲ್ಲ ತನ್ನನ್ನು ದಾರಿ ತಪ್ಪಿಸಲು ಮಾಡುವ ಪ್ರಯತ್ನ ವೆಂದು ರಿವರನಿಗೆ ತಿಳಿದಿತ್ತು. ಪ್ರತಿ ಯೊಬ್ಬರೂ ರಿವರನನ್ನು ಸುತ್ತಗಟ್ಟಿ ದ್ರೋಹವೆಸಗಲು ಕಾಯುತ್ತಿದ್ದಂತೆ ಭಾಸವಾಯಿತು. ಹದಿನಾಲ್ಕನೆಯ ರೌಂಡಿನಲ್ಲಿ ಪುನಃ ಡ್ಯಾನಿ ಕೆಳಕ್ಕೆ ಬಿದ್ದನು! ಆದರೆ ರಿವರನಿಗೆ ಸುಸ್ತಾಗಿ ಕೈ ಜೋತುಬಿತ್ತು, ಅವನೂ ವಿಶ್ರಾಂತಿ ಪಡೆಯುತ್ತಾ ನಿಂತನು. ರೆಫರಿ ಅರ್ಧ ಮನಸ್ಸಿನಿಂದ ಎಣಿಸುತ್ತಿದ್ದನು. ಪಕ್ಕದ ಮೂಲೆಯಲ್ಲಿ ನಡೆಯುತಿದ್ದ ಅಸೂಯೆಯ ಪಿಸುಮಾತುಗಳು ವರನ ಕಿವಿಗೆ ಬಿದ್ದು ವು. ಅವನ ಕಿವಿಗಳು ಬೆಕ್ಕಿನ ಕಿವಿಗಳಂತೆ ತೀಕ್ಷಣವಾಗಿದ್ದರಿಂದ ಕೆಲವನ್ನಾದರೂ ಗ್ರಹಿಸಲು ಶಕ್ಯವಾಯಿತು. ಮೈಕೇಲ್‌ಕೆಲ್ಲಿಯ ರಾಬರ್ಟನ ಹತ್ತಿರ ಬಗ್ಗೆ ಪಿಸುಗುಟ್ಟು ತಿದ್ದನು... ಮೈಕೇಲ್ ಈ ರೀತಿ ಹೇಳುತ್ತಿದ್ದುದು ಕೇಳಬಂತು; ಆಗಲೇ ತೀರಬೇಕು; ಡ್ಯಾನಿ ಗೆಲ್ಲಲೇಬೇಕು. ಇಲ್ಲದಿದ್ದರೆ ನನಗೇ ಕ್ಷೌರ ! ಸ್ವಂತವಾಗಿ ಬಂದು ಟನ್ ಹಣ ಇದಕ್ಕಾಗಿ ತೆಗೆದಿಟ್ಟೆ ! ಹದಿನೈದರಲ್ಲೂ ಅವನ ಕೈ ಮೇಲಾದರೆ ನನ್ನ ಗತಿ ಮುಗಿಯಿತು. ರಾಬರ್ಟ್, ಒಂದು ಮಾತು ಹೇಳುತ್ತೇನೆ. ಈ ಹುಡುಗ ನಿನ್ನ ಮಾತಿಗೆ ಬೆಲೆ ಕೊಡುತ್ತಾನೆ. ಏನಾದರೂ ತಡೆಮಾತು ಹಾಕಯ್ಯಾ ....” ರಾಬರ್ಟ್ ತಲೆದೂಗುತಿದ್ದನು. ರಿವೆರ ಇನ್ನೂ ಕೇಳಿಸಿಕೊಳ್ಳಲು ಇಷ್ಟ ಪಟ್ಟನು. ಅದರೆ ಅಷ್ಟರಲ್ಲಿ ಡ್ಯಾನಿ ಮೇಲೆಬಿದ್ದನು. ಮತ್ತೆ ರಿವೆರನ ಕಣ್ಣಿಗೆ ಯಾವ ದೃಶ್ಯವೂ ಬೀಳಲಿಲ್ಲ. ಒಟ್ಟಿನಲ್ಲಿ ಎಲ್ಲರೂ ತನ್ನನ್ನು ಚುಚ್ಚು ತಿದ್ದಾರೆ; ಅಲ್ಲವೇ ? ಅದೇ ರಭಸದಲ್ಲಿ ಡ್ಯಾನಿಯನ್ನು ಮತ್ತೆ ಬೀಳಿಸಿದನು. ಅದರ ಫಲವಾಗಿ ತಾನೇ ವಿಶ್ರಾಂತಿ ಪಡೆಯಬೇಕಾಯಿತು. ಕೆಗಳು ಮತ್ತಷ್ಟು ಜೋತು ಬಿದವು. ರಾಬರ್ಟ್ ಎದ್ದು ನಿಂತು, “ ಅವನ ತೀರ್ಮಾನ ಮುಗಿಯಿತು. ನಿನ್ನ ಮೂಲೆಗೆ ನೀನು ಹೋಗು ” ಎಂದನು. ದರ್ಪದಿಂದಲೇ ಮಾತನಾಡುತಿದ್ದನು. ಹಿಂದೆ ರಿವರನು ಅಭ್ಯಾಸ ಮಾಡುತಿದ್ದಾಗಲೂ, ರಾಬರ್ ಅದೇ ರೀತಿ ಹೇಳುತಿದ್ದನು. ಆದರೆ ರಿವೆರನ ಕಣ್ಣುಗಳಲ್ಲಿ ದ್ವೇಷ ತುಂಬಿ ಬಂತು ; ಡ್ಯಾನಿ ಯಾವಾಗ ಏಳುತ್ತಾನೋ ಎಂದು ಕಾಯುತ್ತಿದ್ದನು.