ಪುಟ:ಬಾಳ ನಿಯಮ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೦ ಬಾಳ ನಿಯಮ ಒಂದು ನಿಮಿಷದ ವಿರಾಮವಿತ್ತು. ಕೆಲ್ಲಿಯು ರಿವೆರನ ಹತ್ತಿರ ಓಡಿ ಬಂದು ಮೂಲೆಯಲ್ಲಿ ಕುಳಿತನು. “ ಬಿಡಯ್ಯಾ, ಇಲ್ಲದಿದ್ದರೆ ಹಾಳಾಗಿ ಹೋಗು, ರಿವರ, ನಾನು ಹೇಳಿದಂತೆ ಕೇಳುವೆಯಾದರೆ ನೀನು ಇವತ್ತು ಸೋಲಲೇ ಬೇಕು. ನಿನ್ನ ಅದೃಷ್ಟ ನನ್ನ ಕೈಯಲ್ಲಿದೆ. ಮುಂದಿನ ಸಾರಿ ಡ್ಯಾನಿಗಿಂತಲೂ ಮೇಲಾಗುವಂತೆ ನಿನ್ನನ್ನು ತಯಾರಿಸಬಲ್ಲೆ. ಆದರೆ ಈಗ ಮಾತ್ರ ಕೆಳಕ್ಕೆ ಬಿದ್ದು ಬಿಡಯ್ಯ !....” ಎಂದು ಕೆಲ್ಲಿ ನಿಷ್ಟುರವಾಗಿ ಕರ್ಕಶ ಧ್ವನಿಯಲ್ಲಿ ಮೆಲ್ಲಗೆ ಹೇಳಿದನು. - ಕೆಲ್ಲಿಯ ಮಾತು ಕೇಳಿಸಿತೆಂದು ರಿವರ ತನ್ನ ಕಣ್ಣುಗಳಿಂದಲೇ ಸೂಚಿಸಿದನು. ಆದರೆ ಒಪ್ಪಿಗೆಯನ್ನಾಗಲೀ, ನಿರಾಕರಣೆಯನ್ನಾಗಲೀ ತೋರ್ಪಡಿಸಲಿಲ್ಲ. ಕೆಲ್ಲಿ ಕೋಪದಿಂದ ಒತ್ತಾಯ ಮಾಡಿದನು : “ಏಕಯ್ಯಾ ಮಾತಾಡು ವುದಿಲ್ಲ ? ” ಸೈಡರ್ ಹೆಗರ್ಟಿ ಕೂಡ ಕೆಲ್ಲಿಯ ಮಾತಿಗೆ ಬೆಂಬಲ ಕೊಟ್ಟನು.

  • ಮಗೂ ! ಈ ಬಾರಿ ಬಿಟ್ಟುಬಿಡು. ಮುಂದೆ ಛಾಂಪಿಯನ್ ಶಿಪ್ಪಿಗೆ ಅನುಕೂಲ ಮಾಡುತ್ತೇನೆ....” ಎಂದು ಕೆಲ್ಲಿ ವಾದಿಸಿದನು.

ರಿವೆರ ಉತ್ತರ ಕೊಡಲಿಲ್ಲ. ಈ ಸಾರಿಯ ಗಂಟೆ ಸದ್ದು ಜೋರಾಗಿತ್ತು; ಸಭಿಕರಿಗೆ ಅರ್ಥವಾಗದಿದ್ದರೂ ರಿವರನಿಗೆ ತಿಳಿಯಿತು. ಏನೋ ಕೇಡಿನ ಸಂಭವ ಇರುವಂತೆ ಕಂಡಿತು. ಆ ಕೇಡು ರಂಗದಲ್ಲೇ ತನ್ನ ಹತ್ತಿರದಲ್ಲೇ ಆಗಲಿದೆ; ಡ್ಯಾನಿಗೆ ಮೊದಲಿದ್ದ ನಿರ್ಧಾರ ಮರುಕಳಿಸಿದಂತಿದೆ. ಅವನು ಅಷ್ಟು ದೃಢವಾಗಿ ಮುಂದುವರಿಯುತಿದ್ದುದನ್ನು ನೋಡಿ ರಿವೆರ ಹೆದರಿದನು. ಏನೋ ಉಪಾಯ ನಡೆಯಲಿದೆ ! ಡ್ಯಾನಿ ಮುನ್ನುಗ್ಗಿದರೂ, ರಿವರ ಎದುರುಬೀಳದೆ ಪಕ್ಕಕ್ಕೆ ಸರಿಯುತ್ತಾ ರಕ್ಷಣೆಗಾಗಿ ಹವಣಿಸಿದನು. ಡ್ಯಾನಿಯು ರಿವೆರನನ್ನು ಗುದ್ದಲಾಗದಷ್ಟು ಹತ್ತಿರ ಸಿಕ್ಕಿಸಿ ಕೊಳ್ಳಲು ಪ್ರಯತ್ನ ಪಟ್ಟನು; ಅಂದಮೇಲೆ ಆ ರೀತಿ ಮಾಡುವುದು ಅವನ ಉಪಾಯಕ್ಕೆ ಒಂದು ರೀತಿಯಲ್ಲಿ ಅವಶ್ಯವಿರಬೇಕು. ರಿವರ ಹಿಂದೆ ಹಿಂದಕ್ಕೆ ಗಿರನೆ ತಿರುಗುತ್ತಿದ್ದರೂ, ಮನಸ್ಸಿನ ಅಳಕು ಹೋಗಲಿಲ್ಲ. ಆದರೂ ಈ ಬಾರಿ ಮಾತ್ರ ಮುಂದುವರಿಯಲು ಅವನಿಗೆ ಮನಸ್ಸೇ ಇಲ್ಲ. ಇನ್ನೇನು ಇಬ್ಬರ ದೇಹವೂ ಹತ್ತಿರ ಬರಬೇಕು; ಆ ಕೊನೆಯ ಕ್ಷಣದಲ್ಲಿ ರಿವೆರ ಭಗ್ಗನೆದ್ದು ಅತಿ ಚುರುಕಿನಿಂದ ಹಿಂಜರಿದನು. ಅಷ್ಟು ಹೊತ್ತಿಗೆ ಸರಿಯಾಗಿ ಡ್ಯಾನಿಯ