ಪುಟ:ಬಾಳ ನಿಯಮ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ܘܬܘ ಮೆಕ್ಸಿಕನ್ ಮೂಲೆಯಲ್ಲಿದ್ದವರು, 'ಪೌಲ್” “ಪೌಲ್”, ಎಂದು ಕೂಗಿದರು; ರಿವರ ತಮ್ಮನ್ನು ಹಾಸ್ಯಮಾಡಿ ಮೋಸಗೊಳಿಸಿದನೆಂದು ಕಿಡಿ ಕಾರಿದರು. ರೆಫರಿಯ ತುದಿ ನಾಲಗೆಯಲ್ಲಿದ್ದ ತೀರ್ಮಾನ ಹೊರಬರಲೇ ಇಲ್ಲ. ಗ್ಯಾಲರಿಯಲ್ಲಿದ್ದ ಹುಡುಗನೊಬ್ಬ ಚೀರಿದ: “ ಇದೇನು ಕಚ್ಚಾ ಕೆಲಸವಯ್ಯ!....” ರಿನೆರ ಕುಣಿ ಕುಣಿಯುತ್ತ ಹಿಮ್ಮೆಟ್ಟುತಿದ್ದಾಗ, ಡ್ಯಾನಿಯಾದರೋ ಅವನನ್ನು ಬಹಿರಂಗವಾಗಿಯೆ ಬೈಯುತ್ತಾ ಚುಚ್ಚುತಿದ್ದನು. * ಇನ್ನು ಮೇಲೆ ಗುದ್ದಾಟ ಆಡುವುದಿಲ್ಲವೆಂದು ರಿವೆರ ನಿರ್ಧರಿಸಿದನು. ಅಂದರೆ ಗೆಲ್ಲುವ ಅರ್ಧ ಛಾನ್ಸ್ ಕೂಡ ಹೋದಂತಾಯಿತು. ಗೆಲ್ಲಲು ಉಳಿದಿರುವ ಒಂದೇ ಮಾರ್ಗ: ತೋಳಿನಷ್ಟು ದೂರವಾದರೂ ನಿಂತು ಮಾಡುವ ಮುಷ್ಠಿ ಯುದ್ಧ, ಅದೃಷ್ಟ ಖೋತವಾಗಿದೆ; ಜೊತೆಗೆ ತನ್ನ ಆಟವನ್ನು 'ಫೇಲ್' ಎಂದು ನಿರ್ಧರಿಸುವ ಜನ ಬೇರೆ ! ಮತ್ತೆ ಎರಡು ರೌಂಡುಗಳು ಡ್ಯಾನಿಯದೇ ಮೇಲುಕೈ, ಎಚ್ಚರಿಕೆಯ ನಿಯಮಗಳನ್ನು ಗಾಳಿಗೆ ತೂರಿಬಿಟ್ಟನು. ಹತ್ತಿರ ಬರದಿದ್ದ ಹುಡುಗನನ್ನು ಮೇಲೆ ಮೇಲೆ ಅಪ್ಪಳಿಸಿದನು. ಅಂತೂ ಅವನ ಅಪಾಯಕಾರಿ 'ಕ್ಲಿಂಚ್'ಗೆ ಸಿಗದಿದ್ದ ರಿವೆರ ಡಸನ್‌ಗಟ್ಟಳೆ ಗುದ್ದುಗಳನ್ನು ತಿನ್ನಬೇಕಾಯಿತು. ನೋಡು ವವರಿಗೆ ಚೆನ್ನಾಗಿತ್ತು. ಡ್ಯಾನಿಯ ಜಯಭೇರಿಯನ್ನು ಸಭಿಕರೇ ಊದ ತೊಡಗಿದ್ದರು. ಅವರ ಉತ್ಸಾಹ ಅಷ್ಟಿಷ್ಟಲ್ಲ. ಸುತ್ತಲಿನ ಕಾಲು ಕೈಗಳಮೇಲೆ ಉತ್ಸಾಹದಿಂದ ಹುಚ್ಚರಂತೆ ನೆಗೆದಾಡಿದರು. ತಮ್ಮ ಕಡೆಯವನು ಗೆಲ್ಲುತಿದ್ದಾನೆಂದ ಮೇಲೆ, ಅವರಿಗೆ ಇನ್ಯಾವ ಕಡೆಯೂ ಗಮನವಿಲ್ಲ. ಅರ್ಥವೂ ಆಗುವುದಿಲ್ಲ. “ ಏಕಯ್ಯಾ ಕಾದಾಡುವುದಿಲ್ಲ ? ” ಎಂದು ಜನ ರೊಚ್ಚೆದ್ದು ರಿವೆರನನ್ನು ಪ್ರಶ್ನಿಸಿದರು; “ನೀನೊಬ್ಬ ಹೇಡಿ!” “ಎಲವೋ ನಾಯಿ, ಬೀದೀ ನಾಯಿ ! ಆಟ ತೋರಿಸಯಾ....” “ ಡ್ಯಾನಿ, ಅವನನ್ನು ಬಿಡಬೇಡ ! ಮುಗಿಸಿಬಿಡು ! ” “ ನಿನಗೆ ಸಿಗುವುದು ಖಂಡಿತ ! ಅವನನ್ನು ಸಾಯಿಸು. ! ” ಇಡೀ ಸಭೆಯಲ್ಲಿ ಎಣಿಸಿದರೆ, ವಾತಾವರಣಕ್ಕೆ ಹೊಂದದ ಒಬ್ಬನೇ ಒಬ್ಬ ಶೀತಲ ಮನುಷ್ಯನಿದ್ದನು ; ಅವನೇ ರಿವೆ. ಆದರೆ ರಕ್ತಗತ ಸ್ವಭಾವದಲ್ಲಿ ಅವನಷ್ಟು ಉರಿದುಬೀಳುವ ಉದ್ರೇಕಿಗಳು ಅಪರೂಪ. ಹಾಗಿದ್ದರೂ ಈಗೇಕೆ ಸುಮ್ಮನಿದ್ದಾನೆ ?.... ಈ ಸಭೆಯ ಹತ್ತು ಸಾವಿರ ಕರ್ಕಶ ಧ್ವನಿಗಳೂ ಯಾವ ಮಹಾ ! 11