ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೨ ಬಾಳ ನಿಯಮ ಇಂಥಾದ್ದನ್ನು ಮಾರಿಸಿರುವ ಬೆಂಕಿಯನ್ನು ಅವನ ತುಳಿದಿದ್ದಾನೆ. ಅಲೆ ಅಲೆಯಾಗಿ ಬೀಳುತ್ತಿದ್ದ ಸಭಿಕರ ಕೂಗು ರಿವೆರನ ದೇಹಕ್ಕೆ ಶಾಖ ತರುವಷ್ಟು ಪ್ರಭಾವಶಾಲಿಯಾಗಿರಲಿಲ್ಲ; ಬೇಸಗೆಯ ಸಂಧ್ಯೆಯಲ್ಲಿ ಬೀಳುವ ತಂಪಿನಂತಿತ್ತು. ಹದಿನೇಳನೆ ರೌಂಡಿನಲ್ಲಿ ರಿವರನಿಗೆ ಭಾರಿ ಏಟೇ ಬಿತ್ತು. ಗಿರ್ಕಿ ಹೊಡೆಯುತ್ತಾ ಹಿಂದಕ್ಕೆ ಬಿದ್ದನು. ಕೈಗಳು ಯಾವ ಆಶ್ರಯವನ್ನೂ ಹೊಂದದೆ ಇಳಿಯಬಿತ್ತು.'ಡ್ಯಾನಿಯು ತನಗೆ ಅದೃಷ್ಟ ಖುಲಾಯಿಸಿತೆಂದು ಯೋಚಿಸಿದನು; ಹುಡುಗನನ್ನು ಹಿಗ್ಗಾಮುಗ್ಗ ಎಳೆಯಲು ಅವಕಾಶ ಸಿಕ್ಕಿತೆಂದು ತಿಳಿದನು. ಆ ಭಾವನೆ ಡ್ಯಾನಿಯಲ್ಲಿ ಮತ್ತಷ್ಟು ಬೆಳೆಯಲು ರಿವರನೇ ಅವಕಾಶ ಕೊಟ್ಟನು; ಅದಕ್ಕಾಗಿಯೇ ತಾನು ಅತಿ ಕಷ್ಟ ಪಡುತ್ತಿರುವಂತೆ ನಟಿಸಿದನು, ಡ್ಯಾನಿ ತನ್ನ ದೇಹರಕ್ಷಣೆಯ ವಿಷಯದಲ್ಲಿ ಬೇಜವಾಬ್ದಾರನಾದನು. ಅದೇ ಸಮಯದಲ್ಲಿ ಅವನನ್ನು ರಿವೆರ ಹಿಡಿದುಬಿಟ್ಟನು; ಥಟ್ಟನೆ ಬಾಯಿಯ ನೇರಕ್ಕೆ ಜಾಡಿಸಿಬಿಟ್ಟನು. ಡ್ಯಾನಿ ಕೆಳಕ್ಕೆ ಬಿದ್ದನು. ಅವನು ಮತ್ತೆ ಎದ್ದಾಗ ರಿವೆರ ಸುಮ್ಮನೆ ನಿಂತಿರಲಿಲ್ಲ. ತಕ್ಷಣ ಬಲಗೈಯಿಂದ ಡ್ಯಾನಿಯ ಕುತ್ತಿಗೆ ಮತ್ತು ದವಡೆಯ ಭಾಗಗಳನ್ನು ಜಗಿಸಿ, ಕೆಳ ಕೆಳಕ್ಕೆ ಮರ ಕೊಚ್ಚುವವನಂತೆ ಬಿಗಿಯುತಿದ್ದನು ! ಮೂರು ಬಾರಿ ಅದೇ ಪ್ರಯೋಗ ನಡೆಸಿದನು. ಈ ಗುದ್ದುಗಳನ್ನು 'ಘಲ್' ಎಂದು ಯಾವ ರೆಫರಿಯೂ ಹೇಳುವಹಾಗಿಲ್ಲ. “ ಓ, ಬಿಲ್; ಅಯ್ಯಾ, ಬಿಲ್ ! ” ಎಂದು ರೆಫರಿಯನ್ನು ಕೆಲ್ಲಿ ಪೀಡಿಸ ತೊಡಗಿದನು. “ ನಾನು ಮಾಡಲಾರೆ. ಅವನು ನನಗೆ ಮಾತನಾಡಲು ಸಂದರ್ಭವೇ ಕೊಡುತ್ತಿಲ್ಲ” ಎಂದು ರೆಫರಿ ಅಧಿಕಾರ ವಾಣಿಯಿಂದ ಒದರಿಬಿಟ್ಟನು. ಜಜ್ಜಿ ಹೋಗುತಿದ್ದರೂ ಹೆದರದೆ ಡ್ಯಾನಿ ದಮ್ಮು ಕಟ್ಟಿ ಮೇಲೇಳುತಿದ್ದನು. ರಂಗದ ಹತ್ತಿರವಿದ್ದ ಕೆಲ್ಲಿ ಮತ್ತು ಇತರರಿಗೆ ಭಯವಾಯಿತು; ಆಟವನು ನಿಲ್ಲಿಸಬೇಕೆಂದು ಪೋಲೀಸರಿಗೆ ಕೂಗಿಕೊಂಡರು. ಆದರೆ ಡ್ಯಾನಿಯ ಕಡೆಯವರು ಒರಸುವುದಕ್ಕೆ ದೌಲನ್ನು ಕೂಡ ಎಸೆಯಲಿಲ್ಲ. ಬೊಜ್ಜು ಮೈಯಿನ ಪೋಲೀಸ್ ಕ್ಯಾಪ್ಟನ್ ವಕ್ರವಕ್ರವಾಗಿ ಕಾಲುಹಾಕುತ್ತಾ ಹಗ್ಗಗಳ ಮೂಲಕ ಹತ್ತಲು ಪ್ರಯತ್ನಿಸುತ್ತಿದ್ದನು. ಅದು ರಿವೆರನ ಕಣ್ಣಿಗೂ ಬಿತ್ತು; ಏತಕ್ಕಾಗಿ ಎಂದು ಅವನಿಗೆ ಸಂಪೂರ್ಣ ಅರ್ಥವಾಗಲಿಲ್ಲ....ಯಾರು ಕಂಡಿದ್ದಾರೆ ? ಗ್ರೀನ್ ಗೋಗಳು ಪಂದ್ಯವಾಡುವುದರಲ್ಲಿ ನಾನಾ ಬಗೆಯ ಮೋಸಮಾರ್ಗಗಳನ್ನು ಅನುಸರಿಸಬಹುದು-ಡ್ಯಾನಿ ಸ್ವಲ್ಪ ಹೊತ್ತು ಕಾಲ ಮೇಲೆ ನಿಂತರೂ, ತಪ್ಪು