ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧೬೩ ಹೆಜ್ಜೆ ಹಾಕುತ್ತಾ ರಿವರನ ಕೈಯಲ್ಲಿ ತತ್ತರಿಸಿ ಹೋಗುತಿದ್ದನು. ಅಂತೂ ರಿವರನ ಎದುರಿಗೆ ಡ್ಯಾನಿ ಸಹಾಯವಿಲ್ಲದವನಾದನು. ಇನ್ನೇನು ರಿನೆರನಿಂದ ಕೊನೆಯ ಏಟು ಬೀಳಬೇಕು ! ಅಷ್ಟರಲ್ಲಿ ರೆಫರಿ ಮತ್ತು ಕ್ಯಾ ಪ್ರನ್ ಇಬ್ಬರೂ ರಿವರನ ಹತ್ತಿರ ಬರುತ್ತಿದ್ದರು. ಆದರೂ ಮಿಂಚಿನಂತೆ ರಿನೆರೆ ಡ್ಯಾನಿಗೆ ಏಟು ಕೊಡದೆ ಬಿಡಲಿಲ್ಲ. ಕಾದಾಟ ನಿಲ್ಲಿಸುವಂತೆ ಸಂಭವವೇ ಇಲ್ಲವಾಯಿತು; ಏಕೆಂದರೆ ಡ್ಯಾನಿ ಮೇಲಕ್ಕೆ ಏಳಲೇ ಇಲ್ಲ.

  • ಎಣಿಸು ! ” ಎಂದು ರಿವರ ರೆಫರಿಗೆ ಕೇಳಿಸುವಂತೆ ಕೂಗಿ ಕೊಂಡನು. ರಿವೆರನ ಗಂಟಲು ಕಟ್ಟಿದಂತಿತ್ತು,

- ಎಣಿಕೆ ಮುಗಿಯಿತು. ಡ್ಯಾನಿಯ ಸಹಾಯಕರು ಬಂದು ತಮ್ಮ ಡ್ಯಾನಿಯ ಕೈ ಕಾಲನ್ನು ಮಡಿಸಿ, ಮೂಲೆಗೆ ಎತ್ತುಕೊಂಡು ಹೋದರು. ರಿವರ ಒತ್ತಾಯದಿಂದ ಕೇಳಿದನು: “ ಯಾರು ಗೆದ್ದವರು ? ” ಇಷ್ಟವಿಲ್ಲದಿದ್ದರೂ ರೆಫರಿ ರಿನೆರನ ಕೈ ಹಿಡಿದು ಮೇಲೆತ್ತಬೇಕಾಯಿತು ! ಆದರೇನಂತೆ ? ರಿವರನಿಗೆ ಯಾರಿಂದಲೂ ಶುಭಾಶಯಗಳು ಬರಲಿಲ್ಲ. ಯಾವ ಹಿಂಬಾಲಕರೂ ಇಲ್ಲದೆ ರಿವರ ತನ್ನ ಮೂಲೆಗೆ ನಡೆದು ಬಂದನು. ಅಲ್ಲಿ ತನಗಾಗಿ ನಿಯಮಿಸಲ್ಪಟ್ಟ ಸಹಾಯಕರು ಕುಳಿತು ಕೊಳ್ಳಲು ಸ್ಕೂಲನ್ನೂ ಹಾಕಿರಲಿಲ್ಲ. ಹಗ್ಗಗಳನ್ನೇ ಹಿಡಿದುಕೊಂಡು ಹಿಂದಕ್ಕೆ ವಾಲಿ ನಿಂತನು. ತಾನು ದ್ವೇಷಿಸುತ್ತಿದ್ದ ಜನರನ್ನು ನಿಧಾನವಾಗಿ ನೋಡಲು ಅವಕಾಶವಿತ್ತು. ಸಣ್ಣ ಕಿಡಿ ಯೊಂದು ಹತ್ತು ಸಾವಿರ ಗ್ರಿನ್‌ಗೋಗಳನ್ನೂ ವ್ಯಾಪಿಸಿ ದ್ವೇಷಕಾರುತ್ತಿದ್ದುದು ಕಂಡು ಬಂತು. ಅವನ ಮೊಣಕಾಲುಗಳು ನಡುಗಿದವು. ಅವನು ತುಂಬ ಆಯಾಸದಿಂದ ಏನೂ ತೋರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಪಿತ್ತೋದ್ರೇಕದಿಂದ ತಲೆ ತಿರುಗುತಿತ್ತು. ತನ್ನ ಕಣ್ಣೆದುರಿಗೆ ವೈರಿ ಮುಖಗಳು ತೂಗಾಡುತ್ತಿರುವಂತೆ ಭಾಸವಾಯಿತು ! ಆಗ ನೆನಪಿಗೆ ಬಂತು ; ತನಗೆ ಕಾಣುತ್ತಿರುವುದು ಬಂದೂಕಗಳು ! ನಿಜ ; ಅವು ತನ್ನವು ! ಇನ್ನೇನು ತೊಂದರೆಯಿಲ್ಲ; ಕ್ರಾಂತಿ ಸುಲಲಿತವಾಗಿ ಮುನ್ನಡೆಯಲಿ..... ಮೋಹದ ಬಲೆಯಲ್ಲಿ ಹನಾಯಿ ಹೆಂಗಸರ ಹಾಗೆ ಧೀರ್ಘಾಯುಗಳಾಗಿ ಯಶಸ್ವೀ ಜೀವನವನ್ನು ನಡೆಸುವಂಥ ಯೋಗ ಮತಾ ವ ಉಷ್ಣ ದೇಶದ ಸ್ತ್ರೀಯರೆಲ್ಲ