ಪುಟ:ಬಾಳ ನಿಯಮ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೪ ಬಾಳ ನಿಯಮ ಇಲ್ಲ. ಅಷ್ಟೇಕೆ ? 'ಹೌ' ಮರದ ಕೆಳಗೆ ಕುಳಿತಿರುವ ಹೆಂಗಸನ್ನು ನೋಡಿ; ವೇಷ ಭೂಷಣದ ಆಡಂಬರವಿಲ್ಲ ಅಥವಾ ವಯಸ್ಸು ಗೊತ್ತಾಗದಿರುವಂತೆ ಮಾಡಿಕೊಳ್ಳುವ ಮುಸುಕಿನ ತಂತ್ರವೂ ಇಲ್ಲ. ಅವಳ ವಯಸ್ಸು ಎಷ್ಟೆಂದು ಹೇಳೋಣ ? ಹವಾಯಿ ದ್ವೀಪವನ್ನು ಬಿಟ್ಟು, ಪ್ರಪಂಚದ ಮತ್ತಾವ ದೇಶದಿಂದಲಾದರೂ ಸಮರ್ಥ ನ್ಯಾಯಾಧೀಶರನ್ನು ಕರೆದುಕೊಂಡು ಬನ್ನಿ ; ಪರವಾಗಿಲ್ಲ. ಅವರ ತೀರ್ಮಾನದಂತೆ ಇಷ್ಟಂತೂ ನಿಶ್ಚಯ : ಆ ಹೆಂಗಸಿನ ವಯಸ್ಸು ಐವರ ಹತ್ತಿರ ನಿಲ್ಲುತ್ತದೆ....ಆದರೆ ಅವಳ ನಿಜವಾದ ವಯಸ್ಸು, ಅವಳ ಮಕ್ಕಳಿಗೂ ಮೊಮ್ಮಕ್ಕಳಿಗೂ ಮತ್ತು ನಲವತ್ತು ವರ್ಷಗಳಿಂದಲೂ ಗಂಡನಾಗಿರುವ ರಾಷ್ಟೊ ಸ್ಕಾನ್‌ಡೈಲ್ಲನಿಗೂ ಗೊತ್ತಿದೆ. ಈಗ ಅವಳಿಗೆ ಅರವತ್ತು ನಾಲ್ಕು ಮತ್ತು ಮುಂದಿನ ಜೂನ್ ಇಪ್ಪತ್ತೆರಡನೆಯ ತಾರೀಖಿಗೆ ಅರುವತ್ತೈದು ವರ್ಷವಾಗುತ್ತದೆ. ಓದುವಾಗ ಮಾತ್ರ ಮೂಗಿನ ನೇರಕ್ಕೆ ಲೆನ್ನು ಹಿಡಿಯುತ್ತಾಳೆ ; ಮಕ್ಕಳಾಟ ನೋಡುವಾಗ ಅದರ ಅಗತ್ಯ ಬೇಕಿಲ್ಲ ; ಆದರೂ ಅಷ್ಟು ವಯಸ್ಸಾದವಳಂತೆ ಅವಳು ಕಾಣಿಸುವುದೇ ಇಲ್ಲ.... ಅದೊಂದು ಸೊಗಸಾದ ಸನ್ನಿವೇಶ; 'ಹೌ' ಮರದಷ್ಟೇ ಉದಾತ್ತವಾಗಿತ್ತು. ಅವಳು ಮನೆಯೊಂದರಲ್ಲಿ ಕುಳಿತಿದ್ದಂತೆ ಕಂಡಿತು ; ಏಕೆಂದರೆ ಹೌ ಮರ ಅಷ್ಟು ವಿಶಾಲವಾಗಿತ್ತು ಮತ್ತು ನೆರಳಿನ ತಂಪು ಆಪ್ಯಾಯಮಾನವಾಗಿತ್ತು. ಭೂಮಿಯ ಭಾಗ ಇರುವ ತನಕ ಅಲಂಕಾರದ ಉದ್ಯಾನ ಹರಡಿತ್ತು. ಅಲ್ಲೇ ಒಂದು ಭವ್ಯವಾದ ಬಂಗಲೆಯನ್ನು ಕಾಣಬಹುದು. ಪ್ರಕೃತಿಯ ದೃಶ್ಯವನ್ನು ಅನುಕರಿಸಿ ಕಟ್ಟಿದಂತಿತ್ತು. ಅದೊಂದು ಶ್ರೇಷ್ಟ ತರಗತಿಯ ಅತಿ ಬೆಲೆ ಬಾಳುವಂಥ ಕಟ್ಟಡ, ಅಲ್ಲಿ ನಿಂತು ಸಮುದ್ರದ ಕಡೆ ನೋಡಬೇಕು ; ನೂರು ಅಡಿಗಳಷ್ಟು ಎತ್ತರದ ತೆಂಗಿನ ತೋಟಗಳು ಒಂದೇ ಅಂಚಿನಲ್ಲಿ ಹರಡಿರುವುದು ಅದರಾಚೆ ಇರುವುದೇ ಸಾಗರ, ನೀರಿನ ಮಟ್ಟಕ್ಕೆ ಸರಿಯಾಗಿ ಅಥವಾ ಸ್ವಲ್ಪ ಕೆಳಗಡೆ ಬಂಡೆಯ ಸಾಲುಗಳಿವೆ. ಅದಕ್ಕಿಂತಲೂ ದೂರ ಗಾಢ ನೀಲಿಯ ಬಣ್ಣ ವೊಂದೇ. ದಿಗಂತವನ್ನು ಮುಟ್ಟುವ ಹೊತ್ತಿಗೆ ಬಣ್ಣ ತಿಳಿಯಾಗುತ್ತದೆ. ಆ ಬಂಡೆಸಾಲುಗಳ ಮಧ್ಯದಲ್ಲೇ ಬೇಕಾದಷ್ಟು ವಿವಿಧ ಬಣ್ಣಗಳ ಪ್ರಶಸ್ತಿ ಶಿಲೆಗಳು ಮತ್ತು ವಿದ್ಯುದ್ದುಣಗಳನ್ನುಳ್ಳ ಖನಿಜವಸ್ತುಗಳೂ ಇರುವುವು. ಆ ಮನೆ ಮಾರ್ಥ ಸ್ನಾನ್‌ಡೊಲ್ಲಳಿಗೆ ಸೇರಿದ್ದು. ಅಂಥ ಇನ್ನೂ ಐದು ಮನೆಗಳು ಅವಳ ವಶದಲ್ಲಿವೆ. 'ಹೊನಲು'ವಿನಿಂದ ಸ್ವಲ್ಪ ದೂರದಲ್ಲೇ ಪಟ್ಟಣದ ಮನೆಯಿದೆ. ನೌನು ನದಿಯ ಎರಡು ಪ್ರಪಾತಗಳ