________________
೧! ಮೋಹದ ಬಲೆಯಲ್ಲಿ ಮಧ್ಯೆ ಕಾಣುವ ಕಟ್ಟಡ ಸಾಮಾನ್ಯವಾದುದಲ್ಲ; ಅದೊಂದು ಅರಮನೆ. ಟ್ಯಾನ್ಟಲಸ್ ಮೇಲಿರುವ ಪರ್ವತ ಭವನದಲ್ಲಂತೂ ಸಾವಿರಾರು ಅತಿಥಿಗಳು ತಂಗಿ, ಅದರ ಸುಖ ಸೌಲಭ್ಯಗಳನ್ನು ಅರಿತಿದ್ದಾರೆ. ಅದೇ ರೀತಿ ಜ್ವಾಲಾಮುಖಿಯ ಮನೆ, ಪರ್ವತಾಭಿಮುಖವಾದ 'ಮೌಕ' ಭವನ ಮತ್ತು ಹವಾಯಿ ದ್ವೀಪದ ಹತ್ತಿರ ಸಮುದ್ರಕ್ಕೆ ಅಂಟಿಕೊಂಡಿರುವಂಥ 'ಮಕ್ಕೆ' ಮನೆ -ಇವೆಲ್ಲವುಗಳ ಸೊಬಗನ್ನು ಸವಿಯದವರೇ ಇಲ್ಲ. ಆದರೂ ಈ 'ವೈಕಿಕಿ' ಭವನ ಮತ್ಯಾವುದಕ್ಕೂ ಕಡಿಮೆಯಿಲ್ಲ. ಸೌಂದರ್ಯದ ಅಚ್ಚು ಕಟ್ಟು ಮತ್ತು ಹಣ ವ್ಯಯದ ಮೊತ್ತ ಉಳಿದ ಕಡೆಯಷ್ಟೇ ಆಗಿದೆ.... ಇಬ್ಬರು ಜಪಾನೀ ಆಳುಗಳು 'ಹಿಬಿಸ್ಕಸ್' ಗಿಡವನ್ನು ಕತ್ತರಿಸಿ ಸರಿಮಾಡುತಿದ್ದರು. ಮತ್ತೊಬ್ಬ, 'ಸಿರಿಯಸ್' ಹೂ ಸಾಲನ್ನು ವಿಶಿಷ್ಟ ರೀತಿಯಲ್ಲಿ ನೋಡಿಕೊಳ್ಳುತಿದ್ದನು; ಏಕೆಂದರೆ ಸಂಜೆ ಕಳೆದು ರಾತ್ರಿಯು ಕಾಲಿಡುತಿತ್ತು, ಸಿರಿಯಸ್ ತನ್ನ ಮೊಗ್ಗಿನ ದಳಗಳನ್ನು ಸಡಲಿಸಿ ಭವ್ಯವಾಗಿ ಅರಳುವುದು ರಾತ್ರಿಯ ಹೊತ್ತಿನಲ್ಲಿಯೇ. ಟೀ ಬಟ್ಟಲುಗಳನ್ನು ತರುತಿದ್ದ ಮನೆಯಾಳು ಕೂಡ ಜಪಾನಿನವನು. ಆತನು ಧರಿಸಿದ್ದ ದಪ್ಪ ಬಟ್ಟೆ ಸ್ವಚ್ಛವಾ ಗಿತ್ತು, ಅವನನ್ನೇ ಹಿಂಬಾಲಿಸುತ್ತಾ ಜಪಾನೀ ಹುಡುಗಿಯೊಬ್ಬಳು ಓಡಾಡುತಿ ದ್ದಳು. ತನ್ನ ಜನಾಂಗದ ವಿಶಿಷ್ಟ ಉಡುಪನ್ನು ಹಾಕಿದ್ದ ಆ ಹುಡುಗಿ ಬಣ್ಣದ ಚಿಟ್ಟೆಯಂತೆ ಕಂಡಳು; ಯಜಮಾನಿಯ ಹತ್ತಿರ ಅವಳು ತೋರ್ಪಡಿಸುತಿದ್ದ ಹಾವಭಾವಗಳಂತೂ, ಚಿಟ್ಟೆಯೊಂದು ರೆಕ್ಕೆ ಬಿಚ್ಚಿ ಮನತಣಿಸುವಂತಿತ್ತು. ಇನ್ನೊಬ್ಬಳು ಕೈ ತುಂಬ ಟರ್ಕಿ ಟವಲುಗಳನ್ನು ಹಿಡಿದು, ಉದ್ಯಾನದಲ್ಲಿ ಇದ್ದ ಸ್ನಾನಗೃಹಗಳ ಕಡೆ ಹೊರಟಿದ್ದಳು; ಈಜು ಉಡುಪನ್ನು ಹಾಕಿಕೊಂಡಿದ್ದ ಸಣ್ಣ ಸಣ್ಣ ಮಕ್ಕಳು ಕೊಳದಿಂದ ಛಂಗನೆ ನೆಗೆದು ಹೊರಬರುತ್ತಿದ್ದರು. ಮೈ ಒರಸಲ್ಪಟ್ಟ ಮಕ್ಕಳು ಸಮುದ್ರ ದಂಡೆಯ ಬಳಿ ಓಡುತ್ತಿದ್ದರು. ಅಲ್ಲಿ ತೆಂಗಿನ ಮರಗಳ ಕೆಳಗೆ ಇಬ್ಬರು ಚೀನೀ ದಾದಿಯರು ಮಕ್ಕಳನ್ನು ತಳ್ಳು ಬಂಡಿಯಲ್ಲಿ ಕೂರಿಸುತಿದ್ದರು. ಅವರು ಇನ್ನೂ ಚಿಕ್ಕವಯಸ್ಸಿನ ಸುಂದರ ಹುಡಗಿಯರೆಂದೇ ಹೇಳಬೇಕು. ಚೈನಾ ದೇಶದ ಸೊಗಸಾದ ಬಿಳೀ 'ಯಾಶನ್' ಬಟ್ಟೆಯೇ ಅವರ ಮೇಲುಡುಪು; ಗೆರೆ ಗೆರೆಯಾಗಿದ್ದ ಷರಾಯಿಯೂ ಕೂಡ ಚೆನ್ನಾಗಿ ಒಪ್ಪುತಿತ್ತು. ಉದ್ದವಾದ ಕಪ್ಪು ಕೂದಲಿನ ಜಡೆ ಬೆನ್ನ ಮೇಲೆ ನಲಿದಾಡುತಿತ್ತು. ಇವರೆಲ್ಲರೂ ಅಂದರೆ, ದಾದಿಯರು, ಜವಾನರು ಮತ್ತು ಮೊಮ್ಮಕ್ಕಳು ಮಾರ್ಥ ಸ್ನಾನ್‌ಡೈಲ್ಗಳ ಸಂಸಾರಕ್ಕೆ ಸೇರಿದವರು. ಬಿಳಿಯರ ಸಂಪರ್ಕದಿಂದ