ಪುಟ:ಬಾಳ ನಿಯಮ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೬೭ ಯಂತೆಯೇ ರೋಮಾಂಚನಗೊಂಡಿದ್ದರು. ಈಗ ಸ್ವಲ್ಪ ಕಡಿಮೆಯಾಗುತ್ತ ಬಂತು. ಪ್ರೀತಿಯ ತಿಳಿನೀರು ಕಣ್ಣಲ್ಲಿ ಹರಿದ ನಿರ್ಮಲಗೊಳಿಸಿತು. ಟೀ ಕುಡಿಯಲು ಕುಳಿತಾಗ ಇಬ್ಬರೂ ಸಮಸ್ಥಿತಿಗೆ ಬಂದು, ಒಬ್ಬರನ್ನೊಬ್ಬರು ದೃಷ್ಟಿಸಿನೋಡಿದರು. ಇಬ್ಬರಲ್ಲೂ ಕಾಲು ಅಂಶದಷ್ಟು ಹವಾಯಿ ರಕ್ತದ ಒತ್ತಡವನ್ನೇ ಕಾಣಬಹುದು. ಆದ್ದರಿಂದಲೇ ಅವರ ದೇಹಗಳು ಬೆಚ್ಚಗಿದ್ದವು ; ಹೃದಯದಲ್ಲಿ ಪ್ರೀತಿ ವಿಶ್ವಾಸಗಳು ಉಕ್ಕೇರುತಿದ್ದವು. * ಬೆಲ್ಲ ಎಷ್ಟು ಮಕ್ಕಳಿಗೆ ದೊಡ್ಡಮ್ಮ! ಅಬ್ಬ, ಆ ಮಕ್ಕಳೆಲ್ಲಾ ಅಲೆ ಅಲೆ ಯಾಗಿ ಅವಳ ಹತ್ತಿರ ಓಡಿಬಂದವು ! ಅಗತಾನೆ ಈಜಿ ಬಂದ ಮಕ್ಕಳು ಕೇಳ ಬೇಕೆ ? ಬೀಚಿನಲ್ಲಿ ಕಾಯುತಿದ್ದ ದಾದಿಯರ ಹತ್ತಿರ ಹೋಗುವುದಕ್ಕಿಂತ ಮುಂಚೆ ಅವರೆಲ್ಲರೂ ಬೆಲ್ಲಳ ಸುತ್ತ ಕುಣಿದಾಡಿದರು. ತೋಳುಗಳಿಂದ ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಮುತ್ತಿಟ್ಟರು. “ಎಷ್ಟೋ ದಿನಗಳಿಂದ ಬೀಚಿಗೆ ಓಡಿಬಿಡಲೇ ಎಂದು ನನಗನ್ನಿಸಿದೆ ವಾಣಿಜ್ಯ ಮಾರುತ ಬೀಸುವುದೇ ನಿಂತುಹೋಗಿದೆ....” ಎಂದು ಮಾರ್ಥ ವಿವರಿಸಿದಳು. “ಇಲ್ಲಿಗೆ ನೀನು ಬಂದು ಎರಡು ವಾರವಾಯಿತು. ಅಷ್ಟು ಕಾಲವನ್ನೂ ಇಲ್ಲೇ ಕಳೆದಿರುವಾಗ ಇನ್ನೇಕೆ ಯೋಚನೆ ?....” ಎಂದು ಬೆಲ್ಲ ಪ್ರೀತಿಪೂರ್ವಕ ವಾಗಿ ತಂಗಿಯ ಕಡೆ ನೋಡಿದಳು. ಮತ್ತೆ ಹೇಳಿದಳು : “ನೀನು ಇಲ್ಲಿರು ವುದನ್ನು ಸೋದರ ಎಡ್ವರ್ಡ್ ತಿಳಿಸಿದ.....ಹಡಗಿನಲ್ಲಿ ಅವನ ಭೇಟಿಯಾಗಿತ್ತು.” “ಎರಡು ವಾರಗಳು ಏನು ಮಹಾ ! ಅದೇನು ನನಗೆ ಜಾಸ್ತಿಯಾಗಿ ಕಾಣುವುದಿಲ್ಲ' ಎಂದು ಮಾರ್ಥ ಆಶ್ಚರ್ಯ ಚಕಿತಳಾಗಿ ಹೇಳಿದಳು.

  • ಆನಿ ಎಲ್ಲಿ ? ಮಾರ್ಗರೆಟ್ ಎಲ್ಲಿ ? ಒಬ್ಬರೂ ಕಾಣುವುದಿಲ್ಲ” ಎಂದು ಬೆಲ್ಲ ಕೇಳಿದಳು.

ಭಾರಿಯಾಕಾರದ ಭುಜ ಎಗುರಿತು, ಮಾರ್ಥಳಿಗೆ ಕೋಪನಾಗಲೀ ತಿರಸ್ಕಾರವಾಗಲೀ ಇಲ್ಲವೇ ಇಲ್ಲ. ಮದುವೆಯಾಗಿದ್ದರೂ ಮನಬಂದಂತೆ ತನ್ನ ಹೆಣ್ಣು ಮಕ್ಕಳು ತಿರುಗುತ್ತಿದ್ದಾರೆಂದು ಅವಳಿಗೆ ಗೊತ್ತು. ಆದರೂ ಮಾತೃ ಹೃದಯ ವಾತ್ಸಲ್ಯದಿಂದ ತುಂಬಿಹೋಗಿ ಎಲ್ಲವನ್ನೂ ಕ್ಷಮಿಸಿಬಿಡುತ್ತಿತ್ತು. ಆದ್ದರಿಂದಲೇ ಆ ದಿನ ಮಾರ್ಗರೆಟ್, ಆ್ಯನಿ ಇಬ್ಬರೂ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಭಾರ ಅಜ್ಜಿಗೆ ವಹಿಸಿ, ಎಲ್ಲಿಗೋ ಹೊರಟಿದ್ದರು.

  • ( ಔಟ್ ಡೋರ್ ಸರ್ಕಲ್ ' ಎಂಬ ಸಂಸ್ಥೆ ಈ ದಿನ ಸಭೆ ಸೇರಿದೆ.