ಪುಟ:ಬಾಳ ನಿಯಮ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ

  • ಕಲಕೊ' ದಾರಿಯ ಎರಡು ಪಕ್ಕಗಳಲ್ಲೂ ಹಿಬಿಸ್ಕಸ್ ಮತ್ತು ಇತರ ಮರ ಗಳನ್ನು ನೆಡುತ್ತಾರಂತೆ. ಆ ಸಮಾರಂಭಕ್ಕೆ ಮಾರ್ಗರೆಟ್ ಹೋಗಿದ್ದಾಳೆ. ಇನ್ನು ಆನಿ; ಅವಳು ಬ್ರಿಟೀಷ್ ರೆಡ್ ಕ್ರಾಸ್' ಸಂಸ್ಥೆಗೆ ಹಣ ಶೇಖರಿಸಲು ಹೊರಟಿದ್ದಾಳೆ....” ಎಂದಳು ಮಾರ್ಥ:

ಮತ್ತೆ ಮಾತಿನ ವಿಷಯ ಬೇರೆಯಾಯಿತು. ಬಂಡವಾಳ ಪತ್ರಗಳ ಪ್ರಸ್ತಾಪ ಬಂದಿತು. “ ರಾಸೋವಿಗೆ ತುಂಬ ಜಂಭ ಬಂದಿರಬೇಕು....” ಎಂದು ಬೆಲ್ಲ ಹೇಳುತ್ತಿರುವಲ್ಲೇ, ತನ್ನ ತಂಗಿಯ ಕಣ್ಣುಗಳಲ್ಲಿ ಜಂಭದ ಕಿಡಿ ಹೊರಸೂಸಿದ್ದನ್ನು ಕಂಡಳು. “ ನಾನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿದ್ದಾಗ ಹೂಲಾ ಕಂಪೆನಿಯ ಪ್ರಥಮ ಡಿವಿಡೆಂಡಿನ ವಿಷಯ ತಿಳಿಯಿತು. ಬಡ ಅಬ್ಬಿ ಮಕ್ಕಳಿಗೋಸ್ಕರ ನಾನು ಕೂಡ ಸಾವಿರದಷ್ಟು ಪಾಲು ಹಾಕಿದ್ದು ನಿನಗೆ ಜ್ಞಾಪಕವಿರಬೇಕು. ಆಗ ಆದರ ಬೆಲೆ ಎಪ್ಪತ್ತೈದು ಸೆಂಟುಗಳು. ಹತ್ತು ಡಾಲರುಗಳು ಬಂದರೆ ಮಾರಿಬಿಡುತ್ತೇನೆಂದು ಆಗಾಗ ಹೇಳುತ್ತಿದ್ದೆನಲ್ಲವೇ ? ”

  • ನಿಜ; ಆಗ ಎಲ್ಲರೂ ನಿನ್ನನ್ನು ನೋಡಿ ನಕ್ಕರು. ಏಕೆ ? ಪಾಲು ತೆಗೆದುಕೊಂಡ ಪ್ರತಿಯೊಬ್ಬರೂ ಅಪಹಾಸ್ಯಕ್ಕೀಡಾದರು. ಆದರೆ ರಾಷ್ಟೊ ಆಗಲೇ ತಿಳಿದಿದ್ದನು. ಇವತ್ತು ಅದೇ ಪಾಲು ಇಪ್ಪತ್ತು ನಾಲ್ಕಕ್ಕೆ ಮಾರಾಟ ವಾಗುತ್ತಿದೆ....” ಎಂದು ಮಾರ್ಥ ತಲೆದೂಗಿದಳು.

“ ಹಡಗಿನಲ್ಲಿದ್ದಾಗಲೇ ಇಪ್ಪತ್ತರಂತೆ ನನ್ನ ಸಾಲುಗಳನ್ನು ಮಾರಿಬಿಟ್ಟೆ. * ವೈರ್‌ಲೆಸ್ ' ಮೂಲಕ ವ್ಯವಹಾರ ನಡೆದುಹೋಯಿತು. ಅಬ್ಬಿಯ ಸಂತೋಷ ಹೇಳತೀರದು. ಈಗ ಜೋರಾಗಿ ಬಟ್ಟೆಗಳನ್ನು ತಯಾರಿಸುತ್ತಿದ್ದಾಳೆ. ಮೇ ಮತ್ತು ಟೊಟ್ಟಿ ಜೊತೆಗೆ ಪ್ಯಾರಿಸ್ಸಿಗೆ ಹೋಗುತ್ತಾಳಂತೆ ”

  • ಕಾರ್ಲ್ ಏನು ಮಾಡುತ್ತಾನೆ ? ” “ ಅವನ ವಿದ್ಯಾಭ್ಯಾಸ ಮುಗಿಯಬೇಕಲ್ಲ?

“ ಹೇಗಿದ್ದರೂ ಅವನು ಈಗಿರುವಂತೆಯೇ ಆಗುತಿದ್ದ. ಅದು ನಿನಗೆ ಗೊತ್ತೇ ಇದೆ....” ತನ್ನ ಶಾಲಾ ಗೆಳತಿಯ ಮಗನನ್ನು ಕಾಲೇಜುತನಕ ಓದಿಸುವುದರಲ್ಲಿ ಬೆಲ್ಲಳಿಗೆ ಮೊದಲಿಂದಲೂ ಇಷ್ಟವಿತ್ತು. ಅದನ್ನೇ ಮಾರ್ಥ ತಮಾಷೆಮಾಡಿದ್ದು, ಆದರೆ ಬೆಲ್ಲ ಪ್ರಸನ್ನ ವದನಳಾಗಿಯೇ ಹೇಳಿದಳು :* ಅವನ ಖರ್ಚನ್ನು ಹೂಲಾ ಕಂಪೆನಿಗೆ ವಹಿಸಿರುವುದು ಚೆನ್ನಾಗಿಯೇ ಇದೆ. ಪಾಲಿನ ಬೆಲೆ ಏರಿದಂತೆ