________________
ಮೋಹದ ಬಲೆಯಲ್ಲಿ ೧೬t ಅವನೂ ಏರುವುದರಲ್ಲಿ ತಪ್ಪೇನು ? ಸರಿಯಾಗಿ ಯೋಚಿಸಿದರೆ ರಾಷ್ಟೊವೇ ಇದಕ್ಕೆ ಕಾರಣ, ಏಕೆಂದರೆ ಅವನ ಮಾತಿನ ಮೇಲೆ ನಾನು ಹೂಲಾ ಪಾಲುಗಳನ್ನು ಕೊಂಡದ್ದು....” ಲಘುಹಾಸ್ಯದ ಮಾತುಗಳು ಕೊನೆಗೊಂಡ ಮೇಲೆ, ಬೆಲ್ಲ ತನ್ನ ತಂಗಿ ಯನ್ನೇ ಸೃಷ್ಟಿಸಿನೋಡಿದಳು. ಮತ್ತೆ ಸುತ್ತಲೂ ನೋಡಿದಳು. ತಾವು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳಕ್ಕಿಂತಲೂ ಹೆಚ್ಚಿನ ಸೊಬಗು ದ್ವೀಪದ ಇತರ ಆವರಣಗಳಲ್ಲೂ ಹರಡಿತ್ತು. ಮರಳುಗಾಡಿನ ಓಯಸಿನ್‌ನಷ್ಟೇ ಆನಂದ ದಾಯಕವಾಗಿತ್ತು. ಅವಳು ಸಂತೋಷದಿಂದ ಸ್ವಾಸವೆಳೆಯುತ್ತಾ, “ನಾವು ನಮ್ಮ ಗಂಡಂದರಿಗೆ ಏನೇನೂ ತಂದುಕೊಟ್ಟೆ ವೋ, ಅದೆಲ್ಲವನ್ನೂ ಅವರು ಸರಿಯಾಗಿಯೇ ನೋಡಿಕೊಂಡಿದ್ದಾರೆ....” ಎಂದಳು. “ ನಾವುಗಳೂ ಕೂಡ....” ಎಂದು ಮಾರ್ಥ ತಮ್ಮ ತಮ್ಮ ಸುಖ ಜೀವನದ ವ್ಯಾಖ್ಯಾನಮಾಡಲು ಹೊರಟಿದ್ದಳು. ಆದರೆ ಥಟ್ಟನೆ ಹೊಳೆದ ಸಂಶಯದಿಂದ ನಿಲ್ಲಿಸಿಬಿಟ್ಟಳು. “ನಿಜ; ಬೆಲ್ಲ ಒಬ್ಬಳನ್ನು ಬಿಟ್ಟು....” ಎಂದು ಬೆಲ್ಲ ತನ್ನ ತಂಗಿಯ ಯೋಚನೆಯನ್ನು ಪೂರ್ಣಗೊಳಿಸಿದಳು. ಅವಳಾಡಿದ ಮಾತು ಮಾರ್ಥ ಇನ್ನು ಕ್ಷಮಿಸಿಬಿಡುವಂತಿತ್ತು, ಮಾರ್ಥಳ ಹೃದಯ ಕರಗಿತು. “ನಿಜವಾಗಿಯೂ ಆ ಮದುವೆ ನಡೆದ ಘಳಿಗೆ ತುಂಬ ಕೆಟ್ಟದ್ದಿರಬೇಕು. ನೀನು ಎಷ್ಟು ಚಿಕ್ಕವಳಾಗಿದ್ದಿ. ಆಗಲೇ ನಿನಗೆ ಮದುವೆಮಾಡಿದ್ದು ರಾಬರ್ಟ್ ಮಾವನ ತಪ್ಪು....” ಎಂದು ಮಾರ್ಥ ಮೆಲ್ಲಗೆ ಗೊಣಗಿದಳು. ಬೆಲ್ಲ ತಲೆದೂಗುತ್ತಾ, ಆಗ ನನ್ನ ವಯಸ್ಸು ಹತ್ತೊಂಬತ್ತು. ನನಗೆ ಮದುವೆಮಾಡಿಸಿದ ರಾಬರ್ಟ್ ಮಾವ ಎಂದಿಗೂ ತಪ್ಪಿತಸ್ಥನಲ್ಲ. ಹಾಗೆಯೆ ನನ್ನ ಕೈಹಿಡಿದ ಗಂಡನಾದ ಜಾರ್ಜ್ ಕ್ಯಾಸ್ಟ್ನರ್ ಕೂಡ ಒಳ್ಳೆಯವನೇ ಆಗಿದ್ದನು. ನೀನೇ ನೋಡಿದ್ದಿ ; ಅವನು ಗೋರಿಯಲ್ಲಿದ್ದರೂ ನನಗಾಗಿ ಎಷ್ಟು ಮಾಡಿಟ್ಟಿದ್ದಾನೆ. ರಾಬರ್ಟ್ ಮಾವ ಬುದ್ಧಿವಂತನೇ ಸರಿ ; ಏಕೆಂದರೆ ಜಾರ್ಜ್ನ ಯೋಗ್ಯತೆಯನ್ನು ಆಗಲೇ ತಿಳಿದಿದ್ದನು. ನಿಜವಾಗಿಯೂ ಜಾರ್ಜ್ ಸಾಮಾನ್ಯನಲ್ಲ. ಅವನಲ್ಲಿ ವಿಪರೀತ ಮುಂದಾಲೋಚನೆಯೂ, ಅದಕ್ಕೆ ತಕ್ಕ ದೃಢತೆಯೂ ಇದ್ದವು. ಐವತ್ತು ವರ್ಷಗಳ ಹಿಂದೆ 'ನಹಲಾ' ನೀರಿನ ಪ್ರಯೋಜನ ಯಾರಿಗೆ ತಾನೆ ಗೊತ್ತಿತ್ತು ? ಒಬ್ಬರಾದರೂ ಆ ಕಡೆಯೇ