ಪುಟ:ಬಾಳ ನಿಯಮ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭d ಬಾಳ ನಿಯಮ 16 ಸುಳಿಯುತ್ತಿರಲಿಲ್ಲ. ಅಂಥಕಾಲದಲ್ಲಿ ಇವನು ಅದರ ಸ್ವಾಮಿತ್ವವನ್ನು ಪಡೆ ಯಲು ಕಷ್ಟ ಪಡುತ್ತಿದ್ದನು. ಅದರೂ ಜನ ಹೇಳುತ್ತಿದ್ದುದೇ ಬೇರೆ ; ಅವನು ತನ್ನ ದನಕರುಗಳಿಗಾಗಿ ಸಸ್ಯ ಮೊದಲಾದುವನ್ನು ಬೆಳೆಯುವಂಥ ಪ್ರದೇಶ ವನ್ನು ಕೊಂಡುಕೊಳ್ಳಲು ಒದ್ದಾಡುತ್ತಿದ್ದಾನೆಂದು ತಿಳಿದಿದ್ದರು. ಆದರೆ ಅವನು ಎಣಿಸುತ್ತಿದ್ದುದು ನೀರಿನ ಭವಿಷ್ಯ -ಅದರಲ್ಲಿ ಎಷ್ಟರ ಮಟ್ಟಿಗೆ ಜಯ ಶಾಲಿಯಾದನೆಂದು ನಿನಗೆ ಗೊತ್ತೇ ಇದೆ. ಆಗಿನ ಸಂದರ್ಭದಲ್ಲಿ ನಮ್ಮ ಆದಾಯವನ್ನು ನೆನಸಿಕೊಂಡರೆ ನನಗೇ ನಾಚಿಕೆಯಾಗುತ್ತದೆ. ಏನೇ ಆಗಲಿ, ನನ್ನ ದುಃಖಕ್ಕೆ ಜಾರ್ಜ್ ಮಾತ್ರ ಕಾರಣನಲ್ಲ. ಇಲ್ಲಿಯ ತನಕ ಅವನು ಜೀವಿಸಿ ದ್ದರೂ, ಅವನ ಜೊತೆ ಸುಖಸಂಸಾರ ಮಾಡುತ್ತಿದೆ!....ವಿರಸವನ್ನು ತಂದವನು ಅವನಲ್ಲ. ನಾನಂತೂ ಅಲ್ಲ: ಮತ್ತಾರ ಹೆಸರನ್ನು ಸೂಚಿಸುವುದು ? ಒಂದು ರೀತಿಯಲ್ಲಿ ನೋಡಿದರೆ, ಜಾನ್ ಮಾವ ತಪ್ಪಿತಸ್ಥನಾಗುತ್ತಾನೆ!....” ಎಂದು ನಿಧಾನವಾಗಿ ವಿವೇಚಿಸಿದಳು. “ಜಾನ್ ಮಾವನೇ !....ಒಂದು ಪಕ್ಷ ರಾಬರ್ಟ್ ಹೆಸರು ಹೇಳಿದರೆ ಒಪ್ಪಬಹುದು. ಎಷ್ಟಾದರೂ ಅವನು ತಾನೆ ನಿನ್ನನ್ನು ಜಾರ್ಜಿಗೆ ಗಂಟು ಹಾಕಿದವನು? ಅದರೆ ಜಾನ್ ಮಾವನಿಗೆ ಏನು ಸಂಬಂಧ ?” ಎಂದು ಮಾರ್ಥ ಆಶ್ಚರ್ಯಚಕಿತಳಾದಳು. “ ನಿಜ ; ಇದು ನನ್ನ ಗಂಡನ ಅಥವಾ ಮತ್ತೊಬ್ಬ ವ್ಯಕ್ತಿಯ ಸಮಾಚಾರ ವಲ್ಲ. ಎಲ್ಲಕ್ಕೂ ಮೂಲ ಆ ಕುದುರೆ ! ಅಂದು ನನಗೆ ಕುದುರೆಯ ಅವಶ್ಯಕತೆ ಬಹಳವಾಗಿತ್ತು. ಜಾನ್ ಮಾವನನ್ನು ಕೇಳಿದೆ. ತಕ್ಷಣ ಅವನು “ ಆಗಲಿ ” ಎಂದು ತರಿಸಿಕೊಟ್ಟನು. ಅಲ್ಲಿಂದ ನನ್ನ ಕಥೆ ಪ್ರಾರಂಭವಾಗಿ ವಿರಸದ ಹಾದಿ ಹಿಡಿಯಿತು....” ಎಂದು ಬೆಲ್ಲ, ಜಾನ್ ವಹಿಸಿದ್ದ ಪಾತ್ರವನ್ನು ಸ್ಥಿರಪಡಿಸಿದಳು. ಅವಳ ಮಾತಿನಲ್ಲಿ ರಹಸ್ಯಾರ್ಥಗಳು ಅಡಕವಾಗಿದ್ದವು. ಕ್ಷಣಕಾಲ ಇಬ್ಬರೂ ಮಾತನಾಡದೆ ಮೌನವಾಗಿದ್ದರು. ಎಲ್ಲೋ ಗದ್ದಲ ಕೇಳಿಸಿತು. ಬೀಚಿನಿಂದ ಮಕ್ಕಳು ಕುಣಿದಾಡುತ್ತ, ಕೂಗಾಡುತ್ತ ಬರುತಿದ್ದರು. ಮಧ್ಯೆ ಮಧ್ಯೆ ಏಶಿಯದ ಯುವತಿಯರು ಸಿಟ್ಟುಗೊಂಡವರಂತೆ ನಟಿಸುತ್ತಾ ಮಕ್ಕಳನ್ನು ಸುಧಾರಿಸುತ್ತಿದ್ದರು; ಮೃದುವಾದ ಕಂಠಗಳಿಂದ ಆಜ್ಞೆಗಳು ಹೊರಬರುತ್ತಿದ್ದವು. ಕೂಗಾಟದ ಶಬ್ದಗಳು ಹತ್ತಿರಕ್ಕೆ ಬರುತಿದ್ದಂತೆ ಮಾರ್ಥಳು ಹಿಂದು ಮುಂದೆ ನೋಡಿದಳು. ಮೈ ನಡುಗುತ್ತಿತ್ತು. ತಕ್ಷಣ ಪ್ರತಿಭಟಿಸುವವಳಂತೆ ಎಚ್ಚತ್ತಳು. ಸಾಲು ಸಾಲಾಗಿ ಬಂದುನಿಂತ ಮಕ್ಕಳನ್ನು ' ಹೊರಟು ಹೋಗಿ' ಎಂದು ಕೈ. ಬೀಸಿ ಹೇಳಿದಳು.