ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೭೧

  • ಮುದ್ದು ಮಕ್ಕಳಿರಾ, ದಯವಿಟ್ಟು ಹೊರಡಿ. ದೊಡ್ಡಮ್ಮ ಅಜ್ಜಿಯೊಡನೆ ಮಾತನಾಡಬೇಕಂತೆ. ಗಲಾಟೆಮಾಡಬೇಡಿ.....”

ಕಿವಿಗೆ ಆನಂದವಾಗಿದ್ದ ಕೀಚು ಧ್ವನಿಗಳು ಸರನೆ ಹಿಂದಕ್ಕೆ ಸರಿಯಿತು. ಉದ್ಯಾನದಲ್ಲಿ ಆಟವಾಡಲು ಮಕ್ಕಳು ಓಡಿಬಿಟ್ಟರು. ಮಾರ್ಥಳು ಏಕಾಂತದಲ್ಲಿ ಹೃದಯಬಿಚ್ಚಿದವಳಂತೆ ಕಂಡಳು. ತನ್ನ ಸೋದರಿಯ ಮುಖವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಳು. ಐವತ್ತು ವರ್ಷ ಗಳಿಂದಲೂ ಗುಪ್ತವಾಗಿಯೇ ಇದ್ದ ಖಾಯಿಲೆಯು ತನ್ನ ಸೋದರಿಯ ಮುಖದ ಮೇಲೆ ವಿಪರೀತವಾಗಿ ದುಃಖದ ಗೆರೆಗಳನ್ನು ಗೀಚಿತ್ತು. ವರ್ಷ ವರ್ಷ ಹೆಚ್ಚು ತಿದ್ದುದನ್ನು ಐವತ್ತು ವರ್ಷದಿಂದಲೂ ಮಾರ್ಥ ಗಮನಿಸಿದ್ದಳು ; ಇಂದು ಅದು ಜಾಸ್ತಿಯಾಗಿತ್ತು! ಅರ್ಧ ಶತಮಾನದ ಮೌನವನ್ನು ಭೇದಿಸಲು ಮಾರ್ಥಳಿಗೆ ಸಾಕಾಗಿ ಹೋಗಿತ್ತು. ಹವಾಯಿ ಹೃದಯ ಸಂಪೂರ್ಣ ಕರಗಿ ಹೋಗಿ, ಮತ್ತೆ ಗಟ್ಟಿಯಾಗಿತ್ತು.

  • ಬೆಲ್ಲ, ನಿನ್ನ ಬಗ್ಗೆ ನಾವು ಆಗಾಗ ಆಶ್ಚರ್ಯಪಟ್ಟದ್ದೇವೆ. ನೀನು ಮಾತ್ರ ಏನೂ ಮಾತನಾಡುತ್ತಿರಲಿಲ್ಲ. ನಮಗೆ ಹೇಗೆ ತಿಳಿಯಬೇಕು ? ”

“ ಆದರೆ ನೀನು ಎಂದೂ ಕೇಳೇ ಇಲ್ಲ.... ” ಎಂದು, ಬೆಲ್ಲ ಮೆಲ್ಲಗೆ ಸವಾಲು ಹಾಕಿದಳು.

  • ಹೋಗಲಿ ಬಿಡು; ಈಗಲಾದರೂ ನಾನು ಕೇಳುತಿದ್ದೇನೆ. ಹುಡುಗಾಟ ದಿಂದಲೇ ಕಾಲ ಕಳೆದುಹೋಯಿತು. ಈಗ ನಮ್ಮ ಜೀವನದ ಸಂಧ್ಯಾಕಾಲ ! ....ಆಡುತ್ತಿರುವ ಆ ಮಕ್ಕಳು, ನನ್ನ ಮೊಮ್ಮಕ್ಕಳೇ ಎಂದು ಜ್ಞಾಪಕಬಂದಾಗ, ಕೆಲವು ವೇಳೆ ನನಗೇ ಭಯಂಕರವಾಗಿ ತೋರುತ್ತದೆ. ಮೊನ್ನೆ ತಾನೆ ಜವಾಬ್ದಾರಿಯಿಲ್ಲದ ಹುಡುಗಿಯಾಗಿ ನಾನು ಕುದುರೆಯ ಮೇಲೆ ಓಡುತಿದ್ದಂತೆ ಭಾಸವಾಗುತ್ತದೆ. ನನ್ನನ್ನು ಹಿಡಿಯುವವರಾರು? ಕೈ, ಕಾಲು, ಹೃದಯ ಎಲ್ಲವೂ ಸ್ವತಂತ್ರವಾಗಿತ್ತು ! ತೆರೆನೊರೆಯಲ್ಲೇ ಈಜುತಿದ್ದೆ. ಕಡಲ ಇಳಿತ ದಲ್ಲೇ ಒಪಿಹಿಸ್' ಶೇಖರಿಸುತಿದ್ದೆ. ಡಸನ್‌ಗಟ್ಟಲೆ ಪ್ರಣಯಿಗಳನ್ನು ಒಟ್ಟಿಗೆ ಸೇರಿಸಿ ನಗುತ್ತಿದ್ದೆ....ಅದೆಲ್ಲವೂ ಮುಗಿಯಿತು. ನಮ್ಮ ಜೀವನದ ಸಂಧ್ಯಾಕಾಲದಲ್ಲಿಯಾದರೂ ಅವುಗಳನ್ನು ಮರೆತುಬಿಡೋಣ. ಆದರೆ ಒಂದು ಮಾತ್ರ ಜ್ಞಾಪಕವಿರಲಿ. ನಮ್ಮಿಬ್ಬರಲ್ಲೂ ಸೋದರೀ ವಾತ್ಸಲ್ಯ ಒಂದು ನಮನೆ ಹರಿಯುತ್ತಿದೆ. ನೀನು ನಾನು ಎಂದೆಂದಿಗೂ ಪ್ರೀತಿಯ ಸೋದರಿಯರು !....”

ಇಬ್ಬರ ಕಣ್ಣುಗಳೂ ತೇವವಾದುವು. ಮಾತನಾಡಲು ಹೊರಟ ಬೆಲ್ಲ ನಡುಗುತ್ತಾ ಇದ್ದಳು.